
ಸ್ಯಾಂಡಲ್‌ವುಡ್ ರಾಕಿಂಗ್ ದಂಪತಿ ಮಕ್ಕಳ ಬಗ್ಗೆ ಅಭಿಮಾನಿಗಲಿಗೆ ತುಂಬಾನೇ ಕುತೂಹಲ. ಐರಾ ಹಾಗೂ ಯಥರ್ವ್ ಈಗಾಗಲೆ ಸ್ಟಾರ್ ಕಿಡ್‌ಗಳ ಪಟ್ಟಿ ಸೇರಿಕೊಂಡಿದ್ದಾರೆ. ಆದರೆ ಕೊರೋನಾ ಲಾಕ್‌ಡೌನ್ ಇದ್ದ ಕಾರಣ ರಾಧಿಕಾ ಸೋಷಿಯಲ್ ಮೀಡಿಯಾದಿಂದ ಕೊಂಚ ದೂರ ಉಳಿದಿದ್ದರು. ಆದರೆ ತಪ್ಪದೇ ನಿಮ್ಮಗೆಲ್ಲಾ ನಗು ತರಿಸುವ ವಿಡಿಯೋ ಅಥವಾ ಫೋಟೋ ಹಂಚಿಕೊಳ್ಳುವ ಮೂಲಕ ಪಾಸಿಟಿವ್ ಹೆಚ್ಚಿಸುವೆ ಎಂದು ಪ್ರಾಮೀಸ್ ಮಾಡಿದ್ದರು. ಆದರಂತೆ ಈಗ ಪುತ್ರನ ವಿಡಿಯೋ ಹಂಚಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ಪುತ್ರ ಯಥರ್ವ್‌ಗೆ ಉಗುರು ಕತ್ತರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಪ್ರತಿ ಸಲ ಉಗರು ಕತ್ತರಿಸುವಾಗ ಟಕ್ ಟಕ್ ಎಂದು ಶಬ್ದ ಮಾಡಿದರೆ ಯಥರ್ವ್ ನಗುತ್ತಾನೆ. ಅದನ್ನು ನೋಡಿ ರಾಧಿಕಾ ಕೂಡ ನಕ್ಕಿದ್ದಾರೆ. 'ಇದು ಫ್ಲಾಶ್‌ಬ್ಯಾಕ್ ಶುಕ್ರವಾರಕ್ಕೆ ಈ ವಿಡಿಯೋ. ಇದೊಂದು ಟ್ರೆಡಿಷನ್ ಆಗಿದೆ,' ಎಂದು ಬರೆದುಕೊಂಡಿದ್ದಾರೆ.
ಐರಾ ಉಗುರು ಕತ್ತರಿಸಿದ ರಾಧಿಕಾ ಪಂಡಿತ್, ಮುದ್ದಾದ ವಿಡಿಯೋ ನೋಡಿ
ಫೆಬ್ರವರಿ 1, 2020ರಲ್ಲಿ ಐರಾಗೆ ಉಗರು ಕತ್ತರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದರು ರಾಧಿಕಾ. ಉಗರು ಕತ್ತರಿಸುತ್ತಿದ್ದಂತೆ, ಐರಾ ನಕ್ಕು ನಕ್ಕು ಕೆಂಪು ಗೊಂಬೆಯಂತೆ ಕಾಣಿಸುತ್ತಿದ್ದಳು. ಎರಡೂ ಮಕ್ಕಳಿಗೂ ರಾಧಿಕಾ ಒಂದೇ ರೀತಿಯ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ರಾಧಿಕಾ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಫ್ಯಾನ್ ಪೇಜ್‌ಗಳಲ್ಲಿ ಶೇರ್ ಆಗುತ್ತಿದೆ.
ಕೆಲವು ದಿನಗಳ ಹಿಂದೆ ಐರಾ ನಡೆಯುವುದಕ್ಕೆ ಶುರು ಮಾಡಿದಾಗ, ಸೆರೆ ಹಿಡಿದ ಹಳೆ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ನೆರಳು ನೋಡಿ ಐರಾ ಹಾಯ್ ಹೇಳುವುದನ್ನು ಕೇಳಿ ಅಭಿಮಾನಿಗಳು ಸಂತಸ ಪಟ್ಟಿದ್ದರು. ಇನ್ನೂ ಕೆಲವರು ತಮ್ಮ ಮಕ್ಕಳ ನೆರಳು ಕಂಡರೆ ಹೇಗೆ ವರ್ತಿಸುತ್ತಾರೆ ಎಂದು ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.