'ಭುವನಂ ಫೌಂಡೇಶಷನ್' ಮೂಲಕ ಜನರ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಟಿ ಹರ್ಷಿಕಾ ಮತ್ತು ನಟ ಭುವನ್ ರಾಜ್ಯದಲ್ಲಿ ಕಷ್ಟದಲ್ಲಿರುವ ಸುಮಾರು 15000 ಕುಟುಂಬಗಳಿಗೆ ನೆರವಾಗಿದ್ದಾರೆ. ಇದರ ಲಾಭ ಪಡೆದ ಬಡ ಜೀವಗಳಿಗೆ ಇವರಿಬ್ಬರನ್ನು ಎಷ್ಟು ಹರಿಸಿದರೂ ಕಡಿಮೆ ಎನಿಸುತ್ತಿದೆ. ನಟಿಯ ಸಹಾಯಕ್ಕೆ ಮನಸೋದ ಲಕ್ಷ್ಮಣ್ ಎಂಬುವವರು ತಮ್ಮ 14 ದಿನ ಹಸುಗೂಸಿಗೆ ಹರ್ಷಿಕಾ ಎಂದೇ ಹೆಸರಿಟ್ಟಿದ್ದಾರೆ.
ಕೊರೋನಾ ವೈರಸ್ ಮತ್ತು ಲಾಕ್‌ಡೌನ್‌ನಿಂದಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಜನರು ನೀಡುತ್ತಿರುವ ಸೌಲಭ್ಯಗಳು ಏನೇನೂ ಸಾಲದು. ಅದೂ ಅಲ್ಲದೇ ಇವನ್ನು ಪಡೆಯಲು ಜನರು ಹೆಣಗಾಡಬೇಕು. ಈ ಕಾರಣಕ್ಕೆ ಸಿನಿಮಾ ತಾರೆಯರು ತಮ್ಮ ಸ್ವಂತಃ ದುಡಿಮೆಯಿಂದಲೇ ಜನರ ಸೇವೆ ಮಾಡಲು ಮುಂದಾಗಿದ್ದಾರೆ. ಅದರಲ್ಲೂ ಭುವನಂ ಫೌಂಡೇಷನ್ ಮೂಲಕ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಮಾಡುತ್ತಿರುವ ಕೆಲಸವನ್ನು ಇಡೀ ಕರ್ನಾಟಕೇ ಮೆಚ್ಚಿಕೊಳ್ಳುತ್ತಿದೆ.
'ಹುಷಾರ್' ಅಭಿಯಾನದ ಮೂಲಕ ಕರ್ನಾಟಕದ ವಿವಿಧ ಭಾಗಗಳಿಗೆ ಭುವನ್ ಮತ್ತು ಹರ್ಷಿಕಾ ತೆರಳಿ ಅಲ್ಲಿನ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ, ದಿನಸಿ ಹಾಗೂ ಔಷಧಿ ಕಿಟ್ ವಿತರಿಸುತ್ತಿದ್ದಾರೆ. ಈ ವೇಳೆ ಬೆಳಗಾವಿ ಜಿಲ್ಲೆಯ ಸವಸುದ್ದಿ ಗ್ರಾಮಕ್ಕೆ ತೆರಳಿದ ಹರ್ಷಿಕಾ ಮತ್ತು ಭುವನ್, ಕೊರೋನಾದಿಂದ ಗ್ರಾಮದಲ್ಲಿ ಸುಮಾರು 80 ಮಂದಿ ತೀರಿಕೊಂಡಿರುವ ವಿಚಾರ ತಿಳಿದದರು. ಅಲ್ಲಿನ ಜನರಿಗೆ ಧೈರ್ಯ ತುಂಬುವುದರ ಜೊತೆ, ಮಾಸ್ಕ್ ಮಹತ್ವ ಸಾರಿದರು. ಅಗತ್ಯ ಇರೋರಿಗೆ ದವಸ ಧಾನ್ಯ ನೀಡಿದರು.
undefined
ಹರ್ಷಿಕಾ ಸಮಾಜ ಸೇವೆ ಮೆಚ್ಚಿನ ಸವಸುದ್ದಿ ಗ್ರಾಮದ ಲಕ್ಷ್ಮಣ್ ತಮ್ಮ ಸಹೋದರನ 14 ದಿನಗಳ ಹಸುಗೂಸಿಗೆ ಹರ್ಷಿಕಾವೆಂದು ನಾಮಕರಣ ಮಾಡಿದ್ದಾರೆ. 'ನಟಿ ಹರ್ಷಿಕಾ ತರಹವೇ ನಮ್ಮ ಮನೆಯ ಮಗು ಜನರ ಕಷ್ಟಕ್ಕೆ ಸ್ಪಂದಿಸುವಂತವಳಾಗಬೇಕು. ಜನ ಸೇವಕಿಯಾಗಬೇಕು ಎಂಬ ಉದ್ದೇಶದಿಂದ ಮಗುವಿಗೆ ಹರ್ಷಿಕಾ ಅಂತಲೇ ಹೆಸರಿಟ್ಟಿದೇವೆ. ಬುಡಕಟ್ಟು ಜನರಿಗೆ ದಿನಸಿ ಕಿಟ್ ನೀಡಿರುವುದು ನೆರವಾಗಿದೆ. ಅವರು ಋಣ ತೀರಿಸಲು ಜನ್ಮ ಸಾಲದು. ಹೀಗಾಗಿ ಅವರ ಹೆಸರನ್ನಿಟ್ಟಿದ್ದೇವೆ,'ಎಂದಿದ್ದಾರೆ ಲಕ್ಷ್ಮಣ್.
15000 ಕುಟುಂಬಗಳಿಗೆ ನೆರವಾದ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ!
ಈ ಭುವನಂ ಸಂಸ್ಥೆಯಲ್ಲಿ ಒಟ್ಟು 20 ಜನರ ತಂಡ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ. ಅಗತ್ಯ ಇರೋರಿಗೆ ಬೆಂಗಳೂರು, ಕೊಡಗು, ಮೈಸೂರು, ಇದೀಗ ಉತ್ತರ ಕರ್ನಾಟಕದ ಹಲವೆಡೆ ತನ್ನ ಕಾರ್ಯವ್ಯಾಪ್ತಿಯನ್ನು ಸಂಸ್ಥೆ ವಿಸ್ತರಿಸಿಕೊಂಡಿದೆ. ಬೆಂಗಳೂರಿನಲ್ಲಿ ರಾತ್ರಿ 12 ಗಂಟೆಗೆ ಪ್ರಯತ್ನ ಶುರು ಮಾಡಿ, ಬೆಳಗ್ಗೆ 10 ಗಂಟೆಗೆ ತುಂಬು ಗರ್ಭಿಣಿಗೆ ಬೆಡ್ ಕೊಡಿಸಿದ್ದು ಹಾಗೂ ಬೆಂಗಳೂರಿನ ಅಜ್ಜಿಯೊಬ್ಬರು ಮನಸಾರೆ ಆಶೀರ್ವದಿಸಿದ್ದು ಜೀವನದಲ್ಲಿ ಮರೆಯಲಾಗದ ಕ್ಷಣವೆನ್ನುತ್ತೆ ಈ ಜೋಡಿ. ಇದೀಗ ಮಗುವೊಂದಕ್ಕೆ ಹರ್ಷಿಕಾ ಹೆಸರಿಟ್ಟಿರುವುದು ಇವರ ಕೆಲಸ ಸಾರ್ಥಕತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮತ್ತಷ್ಟು ಒಳ್ಳೆ ಕೆಲಸ ಮಾಡಿ, ಇವರ ಕೀರ್ತಿ ಹೆಚ್ಚಲಿ.