ಡ್ರಗ್ಸ್ ಜಾಲದಲ್ಲಿ ನಟಿಯರು ಮಾತ್ರ ಇರುವುದೇ? ನಟರಿಲ್ಲವೇ?

By Kannadaprabha News  |  First Published Sep 9, 2020, 9:15 AM IST

ನಟಿಯರಾದ ರಾಗಿಣಿ, ಸಂಜನಾ ಬಂಧನವಾಗುತ್ತಿದ್ದಂತೆಯೇ ನಟಿ ಪಾರುಲ್‌ ಯಾದವ್‌ ಈ ಡ್ರಗ್‌ ಜಾಲದಲ್ಲಿ ಇರುವವರು ಮೂವರು ಮಹಿಳೆಯರು ಮಾತ್ರವೇ ಎಂದು ಬಹಿರಂಗ ಪ್ರಶ್ನೆ ಎತ್ತಿದ್ದಾರೆ. ಬೇರೆ ಕ್ಷೇತ್ರಗಳ ಮಂದಿ ಇಲ್ಲವೇ, ನಟರು ಡ್ರಗ್‌ ಜಾಲದಲ್ಲಿ ಇಲ್ಲವೇ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದಾರೆ.


‘ಲಿಂಗ ಸಮಾನತೆಯ ಹೋರಾಟದಲ್ಲಿ ನಾವು ಗೆದ್ದಿದ್ದೇವೆ. ಭಾರತದಲ್ಲಿ ಕೇವಲ ಮೂವರು ನಟಿಯರಷ್ಟೇ ಡ್ರಗ್‌ ಜಾಲದಲ್ಲಿ ಇದ್ದಾರೆಯೇ? ಬೇರೆ ಯಾವ ನಟರು, ಕಾರ್ಪೊರೇಟ್‌ ಕಂಪನಿಯವರು, ವ್ಯಾಪಾರಸ್ಥರು, ಕ್ರೀಡಾಪಟುಗಳು ಡ್ರಗ್‌ ಬಳಕೆ ಮಾಡುವುದಿಲ್ಲವೇ? ಆ ಜಾಲದೊಳಗೆ ಸೇರಿಲ್ಲವೇ?’ ಎಂದು ಟ್ವೀಟ್‌ ಮಾಡುವ ಮೂಲಕ ಡ್ರಗ್‌ ವಿಚಾರದಲ್ಲಿ ನಮ್ಮಲ್ಲಿ ಕೆಲವರನ್ನು ಸುಲಭವಾಗಿ ಬಲಿಪಶುವನ್ನಾಗಿ ಮಾಡಲಾಗುತ್ತಿದೆ ಎನ್ನುವ ಆರೋಪ ಮಾಡಿದ್ದಾರೆ.

ಡ್ರಗ್ಸ್ ಮಾಫಿಯಾ, 24 ಗಣ್ಯರ ಹೆಸರು ಬಾಯ್ಬಿಟ್ಟ ಸಂಜನಾ! 

Tap to resize

Latest Videos

undefined

 

 
 
 
 
 
 
 
 
 
 
 
 
 

#drugsmafia #NCB #sandalwooddrugmafia #rheachakraborty #raginidwivedi #sanjanagalrani

A post shared by Parul Yadav (@theparulyadav) on Sep 8, 2020 at 4:40am PDT

ಈಗಲೇ ಮಾತನಾಡುವುದು ಸರಿಯಲ್ಲ

ಇದೊಂದು ಗಂಭೀರವಾದ ವಿಚಾರ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಮುಂದೆ ಮತ್ತಷ್ಟುಹೆಸರುಗಳು ಗೊತ್ತಾಗಬಹುದು. ಈಗಲೇ ಕೇವಲ ನಟಿಯರನ್ನೇ ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಈಗಷ್ಟೇ ತನಿಖೆ ಶುರುವಾಗಿದೆ. ಅದರ ವ್ಯಾಪ್ತಿಯಿಂದ ಹೊರಗೆ ಇರುವ ನಾವು ಅದರ ಬಗ್ಗೆ ವ್ಯಾಖ್ಯಾನ ಮಾಡುವುದು ಸರಿಯಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಅಂತಿಮ ಸತ್ಯ ಹೊರಗೆ ಬರಬೇಕು. -ಪ್ರಿಯಾಂಕಾ ಉಪೇಂದ್ರ, ನಟಿ

ಡಾಕ್ಟರ್‌ ಜತೆ ಲಿವಿಂಗ್ ಇನ್‌ನಲ್ಲಿದ್ರಾ ಸಂಜನಾ? ದುಬೈ ಪೋಟೋಸ್!

"

click me!