ಜಿಮ್‌ನಲ್ಲಿ ವರ್ಕೌಟ್ ಮಾಡೋ ವೀಡಿಯೋ ಹಂಚಿಕೊಂಡ ಮೇಘಾ ಶೆಟ್ಟಿ, 'ಡಿ ಬಾಸ್' ಬಗ್ಗೆ ಮಾತಾಡಿ ಎಂದ ದರ್ಶನ್ ಫ್ಯಾನ್ಸ್!

By Sathish Kumar KH  |  First Published Jul 6, 2024, 6:26 PM IST

ನಟಿ ಮೇಘಾ ಶೆಟ್ಟಿ ಜಿಮ್‌ನಲ್ಲಿ ಭರ್ಝರಿ ಕಸರತ್ತು ಮಾಡುವ ವಿಡಿಯೋ ಶೇರ್ ಮಾಡಿದರೆ, ನೀವು ನಮ್ಮ ಡಿ ಬಾಸ್ ಬಗ್ಗೆ ಮಾತಾಡಿ ಎಂದು ದರ್ಶನ್ ಅಭಿಮಾನಿಗಳು ಕೇಳಿಕೊಂಡಿದ್ದಾರೆ.


ಬೆಂಗಳೂರು (ಜು.06): ಕನ್ನಡ ಪ್ರಸಿದ್ಧ ಧಾರಾವಾಹಿ ಜೊತೆ ಜೊತೆಯಲ್ಲಿ ಮೂಲಕ ಕನ್ನಡಿಗರ ಮನೆ ಮನದಲ್ಲಿ ಅನು ಸಿರಿಮಮನೆ ಆಗಿ ಸ್ಥಾನ ಪಡೆದ ಮೇಘಾ ಶೆಟ್ಟಿ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದೆ. ನಟಿ ಪವಿತ್ರಾಗೌಡ ಅವರ ಸ್ನೇಹಿತೆಯೂ ಆಗಿದ್ದ ನಟಿ ಮೇಘಾ ಶೆಟ್ಟಿ ಈಗ ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆದರೆ, ನಟ ದರ್ಶನ್ ಅಭಿಮಾನಿಗಳು ನೀವು ಜಿಮ್ ಮಾಡೋ ವಿಡಿಯೋ ನೋಡಾಯ್ತು ಡಿ ಬಾಸ್ ಬಗ್ಗೆ ಮಾತನಾಡಿ ಎಂದು ಕೇಳಿದ್ದಾರೆ.

ಕನ್ನಡ ಸಿನಿಮಾದಲ್ಲಿ ಭರ್ಜರಿ ಬ್ಯೂಸಿ ಆಗಿರುವ ನಟಿಯರಲ್ಲಿ ಒಬ್ಬರಾಗಿರುವ ನಟಿ ಮೇಘಾ ಶೆಟ್ಟಿ, ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ತರಹೇವಾರಿ ಕಸರತ್ತು ಮಾಡುತ್ತಿದ್ದಾಳೆ. ತಾನು ಜಿಮ್ ಮಾಡಲು ಅನುಕೂಲ ಆಗುವಂತೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿರುವ ಮೇಘಾ ವೀಕೆಂಡ್‌ ನಲ್ಲಿ ಭರ್ಜರಿ ಕಸರತ್ತು ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಇನ್ನು ವಿಡಿಯೋದಲ್ಲಿ ಬಿಗಿಯಾದ ಉಡುಪುಗಳನ್ನು ಧರಿಸಿ ಸೆಕ್ಸಿಯಾಗಿ ಕಾಣಿಸಿಕೊಂಡಿರುವ ಮೇಘಾ ಶೆಟ್ಟಿ ಪಡ್ಡೆಗಳ ಮನಸ್ಸು ಕದ್ದಿದ್ದಾಳೆ. ವಿವಿಧ ಭಂಗಿಯ ವ್ಯಾಯಾಮಗಳನ್ನು ಮಾಡುತ್ತಾ ತಮ್ಮ ದೇಹವನ್ನು ಹುರಿಗೊಳಿಸಿಕೊಳ್ಳುವಲ್ಲಿ ಸಫಲಳಾಗಿದ್ದಾಳೆ. ಇನ್ನು ವಿಡಿಯೋ ಮಾಡಿ ಶೇರ್ ಮಾಡಿಕೊಂಡ ನಂತರ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

Tap to resize

Latest Videos

ಮೈಸೂರು ದಸರಾ ಅಂಬಾರಿ ಆನೆ ಅರ್ಜುನನಿಗೆ ಸ್ಮಾರಕ ನಿರ್ಮಾಣ; ಈಶ್ವರ್ ಖಂಡ್ರೆ ಚಾಲನೆ

ನಟ ದರ್ಶನ್ ಕೊಲೆ ಕೇಸಿನಲ್ಲಿ ಜೈಲು ಸೇರಲು ಒಂದು ರೀತಿಯಲ್ಲಿ ಕಾರಣವೆಂದು ಹೇಳಬಹುದಾದ ನಟಿ ಪವಿತ್ರಾಗೌಡ ಅವರ ಆಪ್ತ ಸ್ನೇಹಿತೆಯರಲ್ಲಿ ನಟಿ ಮೇಘಾ ಶೆಟ್ಟಿ ಕೂಡ ಒಬ್ಬರು. ಆದರೆ, ಬರ್ತಡೇ ಸಂಭ್ರಮ, ಮನೆಯ ಕಾರ್ಯಕ್ರಮ ಸೇರಿ ಇನ್ನಿತರೆ ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದೂ ಇದೆ. ಹೀಗಾಗಿ, ನಟಿ ಮೇಘಾ ಶೆಟ್ಟಿ ವಿಡಿಯೋಗೆ ಕಾಮೆಂಟ್ ಮಾಡಿರುವ ನಟ ದರ್ಶನ್ ಅಭಿಮಾನಿಯೊಬ್ಬ ನೀವು ನಮ್ಮ ಬಾಸ್ ಬಗ್ಗೆ ಏನಾದರೂ ಮಾತಾಡಿ ಎಂದು ಕೇಳಿಕೊಂಡಿದ್ದಾನೆ.
ಇನ್ನು ಕೆಲವರು ನೀವು ಸ್ಯಾಂಡಲ್‌ವುಡ್‌ನ ಪ್ರೆಸೆಂಟ್ ಹಾಟ್ ಫಿಗರ್,ಬ್ಯೂಟಿಫುಲ್, ಸೆಕ್ಸಿ ಫಿಗರ್ ಎಂದು ಕಾಮೆಂಟ್ ಮಾಡಿದ್ದಾರೆ. ಅದರಲ್ಲೊಬ್ಬರು ನೀವು ಹುಷಾರಾಗಿ ಈ ಕಸರತ್ತುಗಳನ್ನು ಮಾಡಿ ಎಂದು ಸಲಹೆ ನೀಡಿದ್ದಾರೆ. ಇನ್ನುಳಿದಂತೆ ನೂರಾರು ಜನರು ಹಾರ್ಟ್, ಬೆಂಕಿ ಹಾಗೂ ಮುತ್ತಿಡುವ ಇಮೋಜಿಗಳನ್ನು ಕಳಿಸಿದ್ದಾರೆ.

ನಮ್ಮ 'ಡಿ ಬಾಸ್' ಸೇಫ್ ಮಾಡ್ತೀವಿ ಅಂತಾ ಪೊಲೀಸರಿಗೆ ಸರೆಂಡರ್ ಆದವರೇ ಈಗ ನಟ ದರ್ಶನ್‌ಗೆ ವಿಲನ್‌ಗಳು

ಕನ್ನಡದ ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಂದು ಕೆಲವು ಸಿನಿಮಾಗಳನ್ನು ಮಾಡಿದ್ದ ನಟಿ ಮೇಘಾ ಶೆಟ್ಟಿಯವರು ಒಂದು ದೊಡ್ಡ ಯಶಸ್ಸಿಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ತ್ರಿಬಲ್ ರೈಡಿಂಗ್', ಡಾರ್ಲಿಂಗ್ ಕೃಷ್ಣ ಜೊತೆ 'ದಿಲ್ ಪಸಂದ್' ಹಾಗೂ 'ಕೈವ 'ಮೊದಲಾದ ಸಿನಿಮಾಗಳಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ. ಈಗ ಹೊಸ ಪ್ಯಾನ್ ಇಂಡಿಯಾ ಸಿನಿಮಾ 'ಆಪರೇಷನ್ ಲಂಡನ್ ಕೆಫೆ' ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ 'ಚೀತಾ' ಸಿನಿಮಾಗೂ ಮೇಘಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಜೊತೆಗೆ, ಇತ್ತೀಚೆಗೆ ದಕ್ಷಿಣ ಭಾರತದ ಸ್ಟಾರ್ ನಟ ಆರ್. ಮಾಧವನ್ ಜೊತೆಗಿನ ಸೆಲ್ಫೀ ಫೋಟೋ ಹಂಚಿಕೊಳ್ಳುವ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದರು.

click me!