Rukmini Radha Krishna Movie: 'ರುಕ್ಮಿಣಿ ರಾಧಾ ಕೃಷ್ಣ' ಮೂಲಕ ಬೆಳ್ಳಿ ತೆರೆ ಮೇಲೆ ನಟಿ ಮೋಕ್ಷಿತಾ ಪೈ

Published : Jul 16, 2026, 04:09 PM IST
rukmini radha krishna kannada movie

ಸಾರಾಂಶ

Rukmini Radha Krishna Kannada Movie: ಪಾರು ಧಾರಾವಾಹಿ ಖ್ಯಾತಿಯ ನಟಿ ಮೋಕ್ಷಿತಾ ಪೈ ಅವರು 'ರುಕ್ಮಿಣಿ ರಾಧಾಕೃಷ್ಣ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಎರಡು ಹಾಡುಗಳು ರಿಲೀಸ್‌ ಆಗಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Rukmini Radha Krishna Kannada Movie: ಉಮೇಶ್ ಫಿಲಂಸ್ ಲಾಂಛನದಲ್ಲಿ ಎನ್. ಹನುಮಂತರಾಜು, ಎನ್.ಹೆಚ್.ಉಮೇಶ್ ನಿರ್ಮಿಸುತ್ತಿರುವ ' ರುಕ್ಮಿಣಿ ರಾಧಾಕೃಷ್ಣ ' ಚಿತ್ರಕ್ಕೆ ಪ್ರಾಣ್ ಸುವರ್ಣ ಆಕ್ಷನ್ ಕಟ್ ಹೇಳಿದ್ದಾರೆ. ಸುನಾದ್ ಗೌತಂ ಅವರ ಸಂಗೀತ ನಿರ್ದೇಶನವಿರುವ 2 ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು. ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್ ಕುಮಾರ್, ಪಾರು ಖ್ಯಾತಿಯ ಮೋಕ್ಷಿತಾ ಪೈ, ರಿಯಾ ಸಚ್ ದೇವ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಆಡಿಯೋ ರಿಲೀಸ್ ಮಾಡಿದ ಲಹರಿ ವೇಲು ಮಾತನಾಡುತ್ತ ಈ ಚಿತ್ರದಲ್ಲಿ 5 ಸುಂದರ ಹಾಡುಗಳಿದ್ದು, ಅವುಗಳನ್ನು ಅಷ್ಟೇ ಅದ್ಭುತವಾಗಿ ಪಿಚ್ಚರೈಜೇಷನ್ ಮಾಡಿದ್ದಾರೆ. ನಾನು ಕೂಡ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಎಂದರು.

ಸಾಹಿತಿ ಕೆ.ಕಲ್ಯಾಣ್ ಮಾತನಾಡಿ ನಿರ್ಮಾಪಕರಲ್ಲಿರುವ ಸಿದ್ದತೆ, ನಿರ್ದೇಶಕರಲ್ಲಿರುವ ಬದ್ದತೆ ಹಾಡುಗಳಲ್ಲಿ ಎದ್ದು ಕಾಣುತ್ತದೆ. ನಾಯಕಿ ಪಾತ್ರಕ್ಕೆ ತಮಿಳು ಹಿನ್ನೆಲೆ ಇರುತ್ತದೆ. ಹಾಗಾಗಿ ತಮಿಳು, ಕನ್ನಡ ಸೇರಿಸಿ ಒಂದು ಹಾಡನ್ನು ರಚಿಸಿದ್ದೇನೆ ಎಂದರು.

ಭರತ್ ಕುಮಾರ್ ಏನಂದ್ರು?

ಭರತ್ ಕುಮಾರ್ ಮಾತನಾಡುತ್ತ ಲಹರಿ ವೇಲು ಅವರ ಬಳಿ ಹೋದಾಗ ಬಹಳ ಅರ್ಥ ಪೂರ್ಣವಾದ ಸಾಲುಗಳನ್ನು ಹಾಕಿದ್ದೀರಿ ಎಂದು ಪ್ರಶಂಸಿಸಿದರು. ಅಲ್ಲದೆ ಒಳ್ಳೆಯ ಮೊತ್ತಕ್ಕೆ ಆಡಿಯೋ ಮಾಡಿಕೊಟ್ಟರು. 2 ಭಾಷೆಯ ಸಾಂಗ್ ಬೇಕು ಎಂದಾಗ ಕೆ.ಕಲ್ಯಾಣ್ ಅದಕ್ಕೆ ತಕ್ಕಂತೆ ಸಾಲುಗಳನ್ನು ಪೋಣಿಸಿದರು. ರಾಧಾ ಪಾತ್ರವನ್ನು ಪಾರು ಮೋಕ್ಷಿತಾ ಮಾಡಿದರೆ ಚೆನ್ನಾಗಿರುತ್ತೆ ಎಂದು ನಮ್ಮಮ್ಮ ಸಲಹೆ ಕೊಟ್ಟರು. ಇನ್ನು ಪ್ರೊಡ್ಯೂಸರ್ ಇಬ್ಬರೂ ನನ್ನ ಬ್ರದರ್ಸ್ ಇದ್ದಹಾಗೆ. ರುಕ್ಮಿಣಿಗೂ ಕೃಷ್ಣನಿಗೂ ಮಧ್ಯೆ ಇರುವ ಆತ್ಮವೇ ರಾಧಾ. ಈ ಹಾಡುಗಳು ಇಷ್ಟು ಚೆನ್ನಾಗಿ ಬರಲು ಸುನಾದ್ ಗೌತಂ ಅವರೇ ಕಾರಣ ಎಂದರು.

ಮೋಕ್ಷಿತಾ ಪೈ ಏನಂದ್ರು?

ಮೋಕ್ಷಿತಾ ಪೈ ಮಾತನಾಡುತ್ತ ಕಥೆ ಹೇಳಲು ನಿರ್ಮಾಪಕರ ಜತೆ ಭರತ್ ಕೂಡ ಬಂದಿದ್ದರು. ನಿಮಗೆ ಯಾವ ಪಾತ್ರ ಬೇಕು ಎಂದಾಗ ನಾನು ಪಾತ್ರವನ್ನೇ ಸೆಲೆಕ್ಟ್ ಮಾಡಿಕೊಂಡೆ, ಆ ಪಾತ್ರದ ಇನ್ಟೆನ್ಸ್ ನನಗೆ ತುಂಬಾ ಇಷ್ಟವಾಯ್ತು. ರುಕ್ಮಿಣಿ ಇಲ್ಲದೆ ರಾಧಾ ಇಲ್ಲ, ಕುಂಭ ಕೋಣಂನಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದೇವೆ ಎಂದರು. ನಟಿ, ಮಾಡೆಲ್ ಕೂಡ ಆದ ರಿಯಾ ಸಚ್ ದೇವ್ ಮಾತನಾಡುತ್ತ ನಾನಿಲ್ಲಿ ರುಕ್ಮಿಣಿ ಪಾತ್ರ ಮಾಡಿದ್ದೇನೆ. ನನ್ನ ಮೇಲೆ ನಂಬಿಕೆಯಿಟ್ಟು ಈ ಪಾತ್ರ ಕೊಟ್ಟಿದ್ದಾರೆ ಎಂದರು.

ಸಂಗೀತ ನಿರ್ದೇಶಕ ಸುನಾದ್ ಗೌತಂ ಮಾತನಾಡುತ್ತ ಕಥೆ ತುಂಬಾ ಯೂನಿಕ್ ಆಗಿದೆ. ದೊಡ್ಡದಾಗಿ ಪ್ರೊಜೆಕ್ಟ್ ಮಾಡಬೇಕು ಅಂತ ಕನಸಿಟ್ಟುಕೊಂಡಿದ್ದಾರೆ ಎಂದರು.

ನಿರ್ದೇಶಕ ಪ್ರಾಣ್ ಸುವರ್ಣ ಏನಂದ್ರು?

ನಿರ್ದೇಶಕ ಪ್ರಾಣ್ ಸುವರ್ಣ ಮಾತನಾಡಿ ಕಲ್ಯಾಣ್ ಅವರು ಟ್ಯೂನ್ ಕೊಟ್ಟ ಮಾರನೇ ದಿನವೇ ಲಿರಿಕ್ ಕೊಟ್ಟರು. ಪಿನಾಕಾ ಸಮಯದಲ್ಲಿ ನನಗೆ ಭರತ್ ಪರಿಚಯವಾದರು. ನನ್ನ ಕೆಲಸ ಇಷ್ಟಪಟ್ಟು ಸಿನಿಮಾ ಮಾಡೋಣ ಅಂತ ಹೇಳಿ ನಿರ್ಮಾಪಕರ ಬಳಿ ಕರೆದುಕೊಂಡು ಹೋದರು. ಭರತ್ ಹೇಳಿದ ಒಂದು ಲೈನ್ ಇಟ್ಡುಕೊಂಡು ಈ ಸ್ಕ್ರಿಪ್ಟ್ ಮಾಡಿದ್ದೇನೆ. ಕೃಷ್ಣನಿಗೆ ಆತ್ಮ ಅಂತ ಇರೋದು ರಾಧ, ರುಕ್ಮಿಣಿ ಕೃಷ್ಣನ ಸಂಗಾತಿಯಾಗಿ ಉಳಿದರೂ ರಾಧ ಆತನ ಆತ್ಮವಾಗಿ ಉಳಿದುಕೊಳ್ತಾಳೆ.ಕುಂಭಕೋಣಂನಲ್ಲಿ ಚಿತ್ರದ ಮೇಜರ್ ಪೋರ್ಷನ್ ನಡೆಯುತ್ತದೆ ಎಂದರು. ನಿರ್ಮಾಪಕ ಉಮೇಶ್ ಮಾತನಾಡಿ ೯೦ರಷ್ಟು ಶೀ

ಶೂಟಿಂಗ್ ಮುಕ್ತಾಯವಾಗಿದ್ದು ಒಂದು ಸಾಂಗ್ ಮಾತ್ರ ಬಾಕಿಯಿದೆ ಎಂದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಮಿರ್ ಖಾನ್ ಮೂರನೇ ಮದುವೆಗೆ ಮಾಜಿ ಪತ್ನಿಯರು ಗೈರಾಗಿದ್ದೇಕೆ - ಇಂಟರೆಸ್ಟಿಂಗ್ ವಿಚಾರ ರಿವೀಲ್!
ಯಶ್‌ ಹೃದಯವಂತ ವ್ಯಕ್ತಿ, ಇಡೀ ಟಾಕ್ಸಿಕ್‌ ಸಿನಿಮಾ ಅಭಿಮಾನಿಗಳಿಗೆ ಹಬ್ಬ ಎಂದ ನಟಿ ತಾರಾ ಸುತಾರಿಯಾ