
ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ ಶ್ರೀನಗರ ಕಿಟ್ಟ ಮತ್ತು ಮೋಹಕ ತಾರೆ ರಮ್ಯಾ ಮಿಂಚಿದ್ದರು. ನಾಗಶೇಖರ್ ನಿರ್ದೇಶನ ಮಾಡಿದ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಕಂಡು ಬಂಡವಾಳಕ್ಕೂ ಹೆಚ್ಚು ಲಾಭ ಮಾಡಿತ್ತು. ಈಗ ಇದೇ ಸಿನಿಮಾ ಭಾಗ ಎರಡು ಮಾಡಲು ನಿರ್ದೇಶಕರು ಮುಂದಾಗಿದ್ದಾರೆ ಆದರೆ ಈ ಸಲ ಕೊಂಚ ಟ್ವಿಸ್ಟ್ ಇರಲಿದೆ ...ಅದೇ ರಚಿತಾ ರಾಮ್ ಎಂಟ್ರಿ. ಈ ಸಲ ಕಿಟ್ಟಿಗೆ ರಚಿತಾ ರಾಮ್ ಜೋಡಿಯಾಗಿ ಕಾಣಿಸಿಕೊಳ್ಳಿದ್ದಾರೆ. ಈಗಾಗಲೆ ನಡೆದಿರುವ ಫೋಟೋಶೂಟ್ ವೈರಲ್ ಆಗುತ್ತಿದೆ.
ಸಂಜು ವೆಡ್ಸ್ ಗೀತಾ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪವಿತ್ರ ಮೂವಿ ಮೇಕರ್ಸ್ ಮತ್ತು ನಾಗಶೇಖರ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ರೊಮ್ಯಾಂಟಿಕ್ ಹಾಡುಗಳು ಹೈಲೈಟ್. 'ಜಗವೇ ನಿಂತಂತಿದೆ ಯುಗವೇ ನಮಗಾಗಿದೆ ಚಾಚಿದ ಕೈಗೆ ಆ ಸ್ವರ್ಗವೇ ಸೋಕಿದೆ...ಸಂಜು ಗೀತಾ ಮತ್ತೆ ಜೊತೆಗೆ' ಎಂದು ಹಾಡಿನ ಒಂದು ಸಾಲು ಮಾತ್ರ ರಿವೀಲ್ ಮಾಡಲಾಗಿದೆ. ಈ ಹಾಡಿನ ನಡುವೆ ರಮ್ಯಾ ಎವರ್‌ಗ್ರೀನ್ ಡೈಲಾಗ್ ಸಂಜು ಐ ಲವ್ ಯು ಕೇಳಿಸುತ್ತದೆ.
ಫೋಟೋಶೂಟ್ ಮಾಡುವಾಗ ಕುರ್ಚಿಯಿಂದ ಜಾರಿ ಬಿದ್ದ ರಚಿತಾ ರಾಮ್; ವಿಡಿಯೋ ವೈರಲ್
ರಚಿತಾ ರಾಮ್ ವೈಟ್ ಗೌನ್‌ನಲ್ಲಿ, ಕಿಟ್ಟಿ ಸೂಟ್ ಧರಿಸಿ ಮಿಂಚಿದ್ದಾರೆ. ಹೂಗಳ ನಡುವೆ ಇಬ್ಬರು ನಿಂತುಕೊಂಡು ರೊಮ್ಯಾನ್ಸ್ ಮಾಡಿದ್ದಾರೆ. ಗೀತಾ ಕಾಲಿಗೆ ಕಿಟ್ಟಪ್ಪ ಮುತ್ತಿಡುತ್ತಾರೆ .....ಸಂಜು ಹಣೆಗೆ ಗೀತಾ ಮುತ್ತಿಡುತ್ತಾರೆ. ಈ ಸೀನ್ ಸಿನಿ ರಸಿಕರ ಗಮನ ಸೆಳೆದಿದೆ.
'ಕಿಟ್ಟಿಗೆ ಒಳ್ಳೆ ಕಮ್ ಬ್ಯಾಕ್ ಕೊಡ್ಲಿ ಈ ಸಿನಿಮಾ. ಆದರೆ ರಚಿತಾ ರಾಮ್ ಸೂಟ್ ಆಗೋದೇ ಇಲ್ಲ. ಚಿತ್ರಕ್ಕೆ ಮೈನಸ್ ಪಾಯಿಂಟ್ ಇದೇ ಆಗಿರುತ್ತದೆ. ಮತ್ತೊಬ್ಬ ನಾಯಕಿಯನ್ನು ಆಯ್ಕೆ ಮಾಡಿದ್ದರೆ ಸಿನಿಮಾ ಹಿಟ್ ಆಗುವ ಸಾಧ್ಯತೆಗಳಿತ್ತು' ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು 'ಅದ್ಭುತವಾಗಿದೆ ಸಿನಿಮಾ ನೋಡಲು ಕಾಯುತ್ತಿರುವೆ ರೊಮ್ಯಾನ್ಸ್ ಸೂಪರ್ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿಸಿದೆ' ಎಂದು ಹೇಳಿದ್ದಾರೆ.
ರಮ್ಯಾ ಯಾಕಿಲ್ಲ?
'ರಮ್ಯಾ ಆಪ್ತ ಬಳಗದಲ್ಲಿ ಸಂಪರ್ಕ ಮಾಡಲು ಪ್ರಯತ್ನ ಮಾಡಿದೆ ಆಗ ಫಾರಿನ್‌ನಲ್ಲಿದ್ದರು. ಈ ಸಿನಿಮಾವನ್ನು ಮಳೆಗಾಲದಲ್ಲಿ ಚಿತ್ರೀಕರಣ ಮಾಡುವ ಪರಿಸ್ಥಿತಿ ಎದುರಾಗಿತ್ತು ಆಗ ಡೇಟ್ಸ್ ಸಿಗದೇ ಹೋದರೆ ಅನ್ನೋ ಯೋಚನೆ ಶುರುವಾಗಿತ್ತು ಅಲ್ಲದೆ ನನ್ನ ಕನಸನ್ನು ಹಾಳು ಮಾಡಿಕೊಳ್ಳಲು ಆಗಲ್ಲ ಹೀಗಾಗಿ ಪ್ರೆಸೆಂಟ್ಸ್‌ನಲ್ಲಿ ರಮ್ಯಾ ಹೆಸರು ಇಡಬೇಕು ಎಂದು ಪ್ಲ್ಯಾನ್ ಮಾಡಿದೆ. ಸಂಜು ವೆಡ್ಸ್ ಗೀತಾ ಸಿನಿಮಾ ಇಷ್ಟು ವರ್ಷ ಉಳಿದುಕೊಂಡಿದೆ ಅಂದ್ರೆ ಅದಕ್ಕೆ ರಮ್ಯಾ ಮತ್ತು ಅವರ ತಂದೆ ಕಾರಣ ಹೀಗಾಗಿ ಖಂಡಿತಾ ಪ್ರೆಸೆಂಟ್ಸ್‌ನಲ್ಲಿರುತ್ತಾರೆ' ಎಂದು ನಾಗಶೇಖರ್ ಹೇಳಿದ್ದಾರೆ.
ಸಂಜು ವೆಡ್ಸ್ ಗೀತಾ-2 ಚಿತ್ರದಿಂದ ರಮ್ಯಾ ಔಟ್; ರಚಿತಾ ರಾಮ್ ನಾಯಕಿ?
'ಮ್ಯೂಸಿಕ್ ತುಂಬಾ ಮುಖ್ಯವಾಗಿರುವ ಕಾರಣ ವಿ. ಶ್ರೀಧರ್ ಅವರನ್ನು ತಂಡಕ್ಕೆ ಬರ ಮಾಡಿಕೊಳ್ಳುತ್ತಿರುವೆ ಜೆಸ್ಸಿ ಗಿಫ್ಟ್ ಇರುವುದಿಲ್ಲ. ಮರೆಯಾಗಿರುವವರಿಗೆ ಅವಕಾಶ ಕೊಟ್ಟು ಕರೆ ತರುವುದು ನಿರ್ದೇಶಕರಾಗಿ ನನ್ನ ಕರ್ತವ್ಯ. ಕಿಟ್ಟಗೆ ಸಿನಿಮಾ ಎಕ್ಸೈಟ್ ಆಗಿದ್ದಾರೆ ಏಕೆಂದರೆ ಇದು ಹಿಸ್ಟರ್ ಕ್ರಿಯೇಟ್ ಮಾಡಿರುವ ಸಿನಿಮಾ ಈ ಕಥೆಗೆ ಹೊಸತನ ಹೇಳಬೇಕು ಅಂದ್ರೆ ಕಷ್ಟ. ಶ್ರೀನಗರ ಕಿಟ್ಟ ಒಂದೇ ಹೇಳಿದ್ದರು ಮ್ಯೂಸಿಕ್ ಚೆನ್ನಾಗಿರಬೇಕು ಎಂದು. ಮ್ಯೂಸಿಕ್ ಕಂಪೋಸ್ ಮಾಡುವಾಗಲೇ ಸಿನಿಮಾ ತೂಕ ಹೆಚ್ಚಾಗಿದೆ. ರಚಿತಾ ರಾಮ್ ಕೂಡ ಸಂಗೀತ ಬಗ್ಗೆ ಕೇಳಿದರು... ಅವರಿಗೆ ಕಥೆ ಹೇಳಿದ ಮೇಲೆ ಮ್ಯೂಸಿಕ್ ತೋರಿಸಿದೆ ಇಷ್ಟ ಪಟ್ಟರು' ಎಂದಿದ್ದಾರೆ ನಾಗಶೇಕರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.