
ಸ್ಯಾಂಡಲ್‌ವುಟ್ ನಟಿ ಕಮ್ ಸೂಪರ್ ಮಾಮ್ ಮೇಘನಾ ರಾಜ್ ಮತ್ತೆ ಕ್ಯಾಮರಾ ಮುಂದೆ ಬಂದಿದ್ದಾರೆ. ಪತಿ ಚಿರು ಸರ್ಜಾ ನಿಧನ ಹಾಗೂ ಮಗುವಿನ ಜನನದ ಬಳಿಕ ಅವರು ಹೊರಗೆ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿದ್ದರು. ಇಷ್ಟು ದಿನ ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗೆ ಇದೀಗ ಉತ್ತರಿಸಿದ್ದಾರೆ.
ಹೌದು! ಬೇಬಿ ಚಿರು ಆಗಮನದ ನಂತರ ಮೇಘನಾ ಮತ್ತೆ ಸಿನಿಮಾ ಮಾಡುತ್ತಾರಾ? ಯಾವ ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ, ಯಾಕೆ ಜಾಹೀರಾತುಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಲೇ ಇದ್ದರು. ಈ ಪೋಸ್ಟ್ ಮೂಲಕ ಮೇಘನಾ ಉತ್ತರಿಸಿದ್ದಾರೆ. ಇದೀಗ ಮಗುವಿಗೆ ಒಂಭತ್ತು ತಿಂಗಳು ತುಂಬಿದ್ದು, ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸುವ ಬಗ್ಗೆ ಸುಳಿವು ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಶೂಟಿಂಗ್‌ನಲ್ಲಿ ಸ್ಕ್ರೀನ್ ಪೇಪರ್ ಓದುತ್ತಿರುವ ಫೋಟೋವನ್ನು ಶೇರ್ ಮಾಡಿರುವ ಮೇಘನಾ, ‘ಜೂ. ಚಿರುಗೆ ಈಗ 9 ತಿಂಗಳಾಗಿವೆ. ನಾನು ಕ್ಯಾಮೆರಾ ಎದುರಿಸಿ ಒಂದು ವರ್ಷದ ಮೇಲಾಗಿದೆ. ಇದೀಗ ಮತ್ತೆ ಕ್ಯಾಮೆರಾ ಎದುರು ನಿಲ್ಲುವ ಮೂಲಕ ಈ ಕ್ಷಣವನ್ನು ಸಂಭ್ರಮಿಸುತ್ತಿದ್ದೇನೆ,’ಎಂದು ಬರೆದುಕೊಂಡಿದ್ದಾರೆ.
ಮೇಘನಾ ರಾಜ್ ಕಮ್ ಬ್ಯಾಕ್‌ಗೆ ಚಿತ್ರರಂಗದ ಆಪ್ತರು ಹಾಗೂ ಸ್ನೇಹಿತರು ಶುಭ ಹಾರೈಸಿ, ಇನ್ನು ಹೆಚ್ಚು ಎನರ್ಜಿ ನೀಡಿದ್ದಾರೆ. ಸಂಯುಕ್ತಾ ಹೊರ್ನಾಡ್, ರಾಗಿಣಿ ಚಂದ್ರನ್, ಪ್ರೇರಣಾ ಧ್ರುವ ಸರ್ಜಾ, ನಸ್ರಿಯಾ, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಅನೇಕರು ಕಾಮೆಂಟ್ ಮೂಲಕ ಮೇಘನಾಗೆ ಯಶಸ್ಸು ಸಿಗಲೆಂದು ಶುಭ ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.