Shivaraj Kumar Birthday: ಹ್ಯಾಟ್ರಿಕ್ ಹೀರೋಗೆ ಮೇಘನಾ ರಾಜ್ ಕಡೆಯಿಂದ ವಿಶೇಷ ಬರ್ತಡೇ ವಿಶ್

Published : Jul 12, 2023, 03:47 PM ISTUpdated : Jul 12, 2023, 03:48 PM IST
Shivaraj Kumar Birthday: ಹ್ಯಾಟ್ರಿಕ್ ಹೀರೋಗೆ ಮೇಘನಾ ರಾಜ್ ಕಡೆಯಿಂದ ವಿಶೇಷ ಬರ್ತಡೇ ವಿಶ್

ಸಾರಾಂಶ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇಂದು (ಜುಲೈ 12) ಹುಟ್ಟುಹಬ್ಬದ ಸಂಭ್ರಮ. ಶಿವಣ್ಣ ಅವರಿಗೆ ನಟಿ ಮೇಘನಾ ರಾಜ್ ವಿಶೇಷವಾಗಿ ಹುಟ್ಟಿಹಬ್ಬದ ವಿಶ್ ಮಾಡಿದ್ದಾರೆ. 

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇಂದು (ಜುಲೈ 12) ಹುಟ್ಟುಹಬ್ಬದ ಸಂಭ್ರಮ. ಶಿವಣ್ಣ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ನಾಗಾವರ ಬಳಿ ತನ್ನ ನಿವಾಸದಲ್ಲಿ ಶಿವರಾಜ್ ಕುಮಾರ್ ಬರ್ತಡೇ ಆಚರಿಸಿದ್ದಾರೆ. ಶಿವರಾಜ್ ಕುಮಾರ್ ಅವರಿಗೆ ವಿಶ್ ಮಾಡಲು ಅಭಿಮಾನಿಗಳ ದಂಡೆ ನೆರವೇರಿತ್ತು. ರಾತ್ರಿಯಿಂದನೇ ಅಭಿಮಾನಿಗಳು ಮನೆ ಮುಂದೆ ಸಾಲುಗಟ್ಟಿ ನಿಂತಿದ್ದರು. ಶಿವಣ್ಣ ಅಭಿಮಾನಿಗಳನ್ನು ಭೇಟಿ ಮಾಡಿ ಪ್ರೀತಿಯ ಶುಭಾಶಯಗಳನ್ನು ಸ್ವೀಕರಿಸಿದರು. 

ಶಿವರಾಜ್ ಕುಮಾರ್ ಅವರಿಗೆ ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಶಿವರಾಜ್​ಕುಮಾರ್ ಅವರ ಜೊತೆಗಿನ ಫೋಟೋ ಹಂಚಿಕೊಂಡು ಶುಭಾಶಯ ಕೋರುತ್ತಿದ್ದಾರೆ. ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ​ ಕೂಡ ಶಿವಣ್ಣ ಅವರಿಗೆ ವಿಶೇಷ ರೀತಿಯಲ್ಲಿ ವಿಶ್ ಮಾಡಿದ್ದಾರೆ. ಮೇಘನಾ ರಾಜ್ ಹಂಚಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅನೇಕರು ಈ ವಿಡಿಯೋಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 

ಅಂದಹಾಗೆ ಮೇಘನಾ ಶೇರ್ ಮಾಡಿರುವ ವಿಡಿಯೋದಲ್ಲಿ ಶಿವರಾಜ್ ಕುಮಾರ್ ಶೂಟಿಂಗ್ ಸೆಟ್‌ಗೆ ಭೇಟಿ ಮಾಡಿದ್ದು. ಮೇಘನಾ ರಾಜ್  ಸದ್ಯ ‘ತತ್ಸಮ ತದ್ಭವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ಶಿವಣ್ಣ ಚಿತ್ರೀಕರಣ ಸೆಟ್ ಗೆ ಭೇಟಿ ಮಾಡಿದ್ದರು. ಶಿವರಾಜ್ ಕುಮಾರ್ ಬಿಳಿ ಬಣ್ಣದ ಶರ್ಟ್ ಮತ್ತು ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶೂಟಿಂಗ್ ಮಧ್ಯೆಯೇ ಮೇಘನಾ ರಾಜ್ ಸೆಟ್ ಗೆ ಭೇಟಿ ಮಾಡಿ ಚಿತ್ರತಂಡದ ಜೊತೆ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಶಿವಣ್ಣ ಭೇಟಿ ಮಾಡಿದ ವಿಡಿಯೋವನ್ನು ಮೇಘನಾ ಶೇರ್ ಮಾಡಿದ್ದಾರೆ.

ಬೈರತಿ ರಣಗಲ್: 'ಮಫ್ತಿ' ನಿರ್ದೇಶಕರ ಜೊತೆ ಶಿವಣ್ಣ ಸಿನಿಮಾ; ಹ್ಯಾಟ್ರಿಕ್ ಹೀರೋ ಪಾತ್ರ ನೆಗೆಟಿವ್ or ಪಾಸಿಟಿವ್?

ಮೇಘನಾ ರಾಜ್ ಮದುವೆ ಮತ್ತು ಮಗುವಿಗೆ ಜನ್ಮ ನೀಡಿದ ಬಳಿಕ ಸಿನಿಮಾದಲ್ಲಿಕಾಣಿಸಿಕೊಂಡಿಲ್ಲ. ಇದೀಗ ಮತ್ತೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಮೇಘನಾ ಮತ್ತೆ ಸಿನಿಮಾ ಮಾಡಬೇಕು ಎನ್ನುವುದು ಅಭಿಮಾನಿಗಳ ಬೇಡಿಕೆ. ಫ್ಯಾನ್ಸ್ ಆಸೆಯಂತೆ ಮೇಘನಾ 'ತತ್ಸಮ ತದ್ಭವ’ ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಮುಕ್ತಾಯವಾಗಿದೆ. ಶೀಘ್ರದಲ್ಲೇ ಸಿನಿಮಾ ರಿಲೀಸ್ ಆಗಲಿದೆ. ಇದು ಕ್ರೈಮ್ ಥ್ರಿಲ್ಲರ್ ಸಿನಿಮವಾಗಿದೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಕೂಡ ನಟಿಸುತ್ತಿದ್ದಾರೆ. ಪನ್ನಗ ಭರಣ ನಿರ್ಮಾಣ ಮಾಡುತ್ತಿದ್ದಾರೆ.

ಅಂದು ಶಿವಣ್ಣ ಫೋನ್ ಮಾಡಿ ಹೇಳಿದ್ದೇನು? DKD ವೇದಿಕೆಯಲ್ಲಿ ಕಣ್ಣೀರಿಟ್ಟ ನಟಿ ಛಾಯ ಸಿಂಗ್

ಶಿವರಾಜ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಿವೆ. 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ. ಇಂದು ಹುಟ್ಟುಹಬ್ಬದ ಪ್ರಯುಕ್ತ ಶಿವಣ್ಣ ನಟನೆಯ ಅನೇಕ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಸದ್ಯ ಶಿವಣ್ಣ ಘೋಸ್ಟ್ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಕನ್ನಡ ಸಿನಿಮಾಗಳ ಜೊತೆಗೆ ಶಿವಣ್ಣ ತಮಿಳಿನ ಜೈಲರ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್