
ಬೆಂಗಳೂರು (ಜೂ.25) ಸ್ಯಾಂಡಲ್‌ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ಕೃಷಿ ತಾಪಂಡ ಮನೆಯಲ್ಲಿ ಆಕೆಯ ಗೆಳೆಯ ವೈಶಾಖ್ ಬದುಕು ಅಂತ್ಯಗೊಳಿಸಿದ ಘಟನೆ ನಡೆದಿದೆ. ಉದ್ಯಮಿ ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಅರೆಸ್ಟ್ ಆಗಿ ಜೈಲು ಸೇರಿದ್ದ ವೈಶಾಖ್ ಇದೀಗ ನಟಿ ಕೃಷಿ ತಾಪಂಡ ಮನೆಯಲ್ಲೇ ಬದುಕು ಅಂತ್ಯಗೊಳಿಸಿದ್ದಾರೆ. ಕೃಷಿ ತಾಪಂಡ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಗಮಿಸಿ ದುರಂತ ಅಂತ್ಯಕಂಡಿದ್ದಾರೆ. ಈ ಘಟನೆಯಿಂದ ನಟಿ ಕೃಷಿ ತಾಪಂಡ ಮತ್ತಷ್ಟು ಜರ್ಝರಿತವಾಗಿದೆ. ಹಲವು ಏಳು ಬೀಳುಗಳನ್ನು ಕಂಡಿರುವ ಕೃಷಿ ತಾಪಾಂಡ ವೈಯುಕ್ತಿಕ ಬದಕು ಸಂಭ್ರಮಕ್ಕಿಂತ ನೋವೇ ಹೆಚ್ಚಾಗಿದೆ.
ನಟಿ ಕೃಷಿ ತಾಪಂಡ ಅವರ ರಾಜರಾಜೇಶ್ವರಿ ನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನಿನ್ನೆ ರಾತ್ರಿ ವೈಶಾಕ್ ದುರಂತ ಅಂತ್ಯಕಂಡಿದ್ದಾರೆ. ಕೃಷಿ ತಾಪಂಡ ಪ್ರೀತಿ, ಪ್ರೇಮ ವಿಚಾರದಲ್ಲಿ, ರಿಲೇಷನ್‌ಶಿಪ್ ವಿಚಾರದಲ್ಲಿ ತೀವ್ರ ನೋವು ಅನುಭವಿಸಿದ್ದಾರೆ. ಇದೀಗ ಗೆಳೆಯನ ಸಾವಿನ ಸುದ್ದಿ ಮತ್ತಷ್ಟು ಆಘಾತ ನೀಡಿದೆ.
ಕೃಷಿ ತಾಪಂಡ ರಿಲೇಶನ್‌ಶಿಪ್, ಗೆಳೆಯ, ಲೀವ್ ಇನ್ ಸಂಬಂಧ ಸೇರಿದಂತೆ ಪ್ರೀತಿ ಪ್ರೇಮ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಘಟನೆಗಳು ಕೃಷಿ ತಾಪಂಡ ವೈಯುಕ್ತಿಕ ಜೀವನದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಪ್ರೀತಿಯಲ್ಲಿದ್ದೆ ಆದರೆ ಬ್ರೇಕ್ ಅಪ್ ಆಗಿದೆ. ತೀವ್ರ ನೋವು ಅನುಭವಿಸಿದ್ದೇನೆ. ನನ್ನನ್ನು ನನ್ನ ಪಾಡಿಗೆ ಬದುಕಲು ಬಿಟ್ಟುಬಿಡಿ ಎಂದು ನಟಿ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಕಣ್ಣೀರಿಟ್ಟಿದ್ದರು.
ಉದ್ಯಮಿ ಜೊತೆಗಿನ ಸಂಬಂಧದ ಆರಂಭದಲ್ಲಿ ಉತ್ತಮವಾಗಿತ್ತು. ಆದರೆ ನನಗೆ ಪ್ರೀತಿ ಹಾಗೂ ಸಮಯ ಸಿಗಲೇ ಇಲ್ಲ. ಉಡುಗೊರೆ, ಹಣ, ಕಾರು ಎಲ್ಲವೂ ಸಿಕ್ಕಿತ್ತು. ಆದರೆ ಪ್ರೀತಿ ಮಾತ್ರ ಸಿಗಲಿಲ್ಲ. ಸಂಬಂಧದಲ್ಲಿ ಅಂತರ ಹೆಚ್ಚಾಯಿತು. ಹೀಗಾಗಿ ಸಂಬಂಧದಿಂದ ದೂರ ಸರಿಯಬೇಕಾಯಿತು ಎಂದು ಕೃಷಿ ತಾಪಂಡ ಹೇಳಿದ್ದರು. ನನ್ನ ಖಾಸಗಿ ಬದುಕಿನಲ್ಲಿ ನಡೆದ ಹಲವು ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಇದನ್ನೇ ಮಾನದಂಡವಾಗಿ ಇಟ್ಟುಕೊಂಡು ಹಲವರು ನನ್ನನ್ನು ಅಳೆದರು. ನನ್ನ ಕೆಲಸ ನೋಡಲಿಲ್ಲ. ಪರಿಶ್ರಮ ನೋಡಲಿಲ್ಲ. ವೈಯುಕ್ತಿಕ ಜೀವನದ ಸಂಗತಿಗಳನ್ನಿಟ್ಟುಕೊಂಡು ನಿಂದಿಸುತ್ತಿದ್ದಾರೆ ಎಂದು ನಟಿ ಕೃಷಿ ತಾಪಂಡ ಕಣ್ಣೀರಿಟ್ಟಿದ್ದರು.
ವೈಶಾಖ್ ರೆಡ್ಡಿ ಹಾಗೂ ಕೃಷಿ ತಾಪಂಡ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು ಎಂದು ಉದ್ಯಮಿ ಅರವಿಂದ್ ರೆಡ್ಡಿ ಆರೋಪಿಸಿದ್ದರು. ವೈಯುಕ್ತಿಕ ವಿಚಾರ ಸಂಬಂಧ ಅರವಿಂದ್ ರೆಡ್ಡಿಗೆ ಕರೆ ಮಾಡಿ ಬೆದಿರಿಕೆ ಹಾಕಿದ ಪ್ರಕರಣದಲ್ಲಿ ವೈಶಾಕ್ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಎಲ್ಲಾ ಘಟನೆಗಳಲ್ಲಿ ಕೃಷಿ ತಾಪಂಡ ತೀವ್ರ ನೋವಿನಲ್ಲೇ ದಿನದೂಡಬೇಕಾಯಿತು.
ಕೃಷಿ ತಾಪಂಡ ಮನೆಯ ಒಂದು ಕೀ ವೈಶಾಖ್ ಕೈಯಲ್ಲಿತ್ತು. ಕೃಷಿ ತಾಪಂಡ ಮನೆಯಲ್ಲಿ ಇಲ್ಲದ ವೇಳೆ ರಾಜರಾಜೇಶ್ವರಿನಗರ ಮನೆಗೆ ಆಗಮಿಸಿದ ವೈಶಾಖ್ ಬದುಕು ಅಂತ್ಯಗೊಳಿಸಿದ್ದಾನೆ. ಕೊನೆಯದಾಗಿ ನಟಿಗೆ ಕರೆ ಮಾಡಿದ್ದ ವೈಶಾಖ್ ತಾನು ದುರಂತ ಅಂತ್ಯಕ್ಕೆ ನಿರ್ಧರಿಸಿರುವುದಾಗಿ ತಿಳಿಸಿದ್ದ ಎಂಬ ಮಾಹಿತಿಯೂ ಬಹಿರಂಗವಾಗಿದೆ.
ರಾಜರಾಜೇಶ್ವರಿ ನಗರ ಪೊಲೀಸರು ಫ್ಲ್ಯಾಟ್‌ಗೆ ತೆರಳಿ ಪರಿಶೀಲಿಸಿದ್ದಾರೆ. ಮತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಮನೆಯಲ್ಲಿ ಸಾಕ್ಷ್ಯಕ್ಕಾಗಿ ಪೊಲೀಸರು ತಡಕಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.