
ಕನ್ನಡ ಚಿತ್ರರಂಗಕ್ಕೆ ಹೊಸ ಓಟಿಟಿ ವೇದಿಕೆ ಆಗಮಿಸಿದೆ. ಈಗಿರುವ ಬಹುತೇಕ ಓಟಿಟಿ, ಸ್ಯಾಟಲೈಟ್‌ಗಳು ಕನ್ನಡ ಸಿನಿಮಾಗಳ ಬ್ಯುಸಿನೆಸ್ಸಿನ ಬಾಗಿಲು ಮುಚ್ಚಿರುವ ಹೊತ್ತಿನಲ್ಲಿ ಬರುತ್ತಿರುವ ಎವಿಆರ್ ಸಿನಿ ಮ್ಯಾಕ್ಸ್ ಹೆಸರಿನ ಓಟಿಟಿ, ಸ್ಯಾಂಡಲ್‌ವುಡ್‌ಗೆ ಭರವಸೆಯಾಗಿ ಕಾಣುತ್ತಿದೆ. ಈ ಎವಿಆರ್ ಸಿನಿಮ್ಯಾಕ್ಸ್ ಓಟಿಟಿಯ ಮಾಲೀಕರು ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ.
ಅರವಿಂದ್ ವೆಂಕಟೇಶ್ ರೆಡ್ಡಿ ಅವರ ಈ ಹೊಸ ಓಟಿಟಿಯ ಉಸ್ತುವಾರಿಯನ್ನು ನಿರ್ದೇಶಕ ಅವಿನಾಶ್ ದಿವಾಕರ್ ಶೃಂಗೇರಿ ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಕನ್ನಡಿಗರಿಂದ ಕನ್ನಡಿಗರಿಗಾಗಿಯೇ ಆರಂಭಿಸಿರುವ ಓಟಿಟಿ ಇದು. ಕನ್ನಡ ಚಲನಚಿತ್ರ ಹಾಗೂ ಸೃಜನಾತ್ಮಕ ಮನರಂಜನಾ ವಿಷಯಗಳನ್ನು ವಿಶ್ವದಾದ್ಯಂತ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶ ಈ ಓಟಿಟಿಯದ್ದು.
ಈಗಾಗಲೇ 750ಕ್ಕೂ ಹೆಚ್ಚು ಸಿನಿಮಾಗಳಿವೆ ಎವಿಆರ್ ಸಿನಿಮ್ಯಾಕ್ಸ್ ಓಟಿಟಿಯಲ್ಲಿವೆ. ಸಿನಿಮಾ ಮಾತ್ರವಲ್ಲದೇ ರಿಯಾಲಿಟಿ ಶೋ, ಕ್ರೀಡೆ, ಸಂಗೀತ, ನೇರ ಕಾರ್ಯಕ್ರಮಗಳೂ ಇಲ್ಲಿ ಲಭ್ಯ. ‘ರವಿಶ್ರೀವತ್ಸ ಅವರ ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರ ವೆಬ್ ಸರಣಿ ರೂಪದಲ್ಲಿ ಬರುತ್ತಿದೆ. ಸೃಜನ್ ಲೋಕೇಶ್ ಅವರು ‘ಸೃಜಾ ಟಾಕೀಸ್’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಸಂಗೀತ, ಕ್ರಿಕೆಟ್ ಸೇರಿದಂತೆ ಯಾವುದೇ ಕ್ರೀಡೆಯನ್ನು ಈ ಓಟಿಟಿಯಲ್ಲಿ ನೇರ ಪ್ರಸಾರದಲ್ಲಿ ನೋಡಬಹುದು. ಸದ್ಯದಲ್ಲೇ ಮಲೇಷಿಯಾದಲ್ಲಿ ಅದ್ದೂರಿ ಕ್ರಿಕೆಟ್ ಟೂರ್ನಿಯನ್ನು ಸಹ ಆಯೋಜಿಸುತ್ತಿದ್ದೇವೆ’ ಎಂದರು ಅರವಿಂದ್ ವೆಂಕಟೇಶ್ ರೆಡ್ಡಿ. ಅವಿನಾಶ್ ದಿವಾಕರ್, ‘ಕನ್ನಡ ಚಿತ್ರರಂಗ ‘ಅಂದು ಇಂದು ಮುಂದು’ ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ ಜಯಮಾಲ ಅವರು ಆಡಿದ ಮಾತು ನಾವು ಈ ಓಟಿಟಿ ಆರಂಭಿಸಲು ಸ್ಪೂರ್ತಿಯಾಯಿತು’ ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.