ಗೊತ್ತಿಲ್ದೇ ಆ ಲಿಂಕ್​ ಒತ್ತಿಬಿಟ್ಟೆ... ಆಮೇಲೆ ನೋಡಿದ್ರೆ... ಗಂಡಂಗೂ ಹೇಳದ ಎಡವಟ್ಟನ್ನು ತೆರೆದಿಟ್ಟ ನಟಿ ಕಾವ್ಯಾ ಶಾ!

Published : Dec 27, 2024, 10:04 PM ISTUpdated : Dec 28, 2024, 11:06 AM IST
ಗೊತ್ತಿಲ್ದೇ ಆ ಲಿಂಕ್​ ಒತ್ತಿಬಿಟ್ಟೆ... ಆಮೇಲೆ ನೋಡಿದ್ರೆ... ಗಂಡಂಗೂ ಹೇಳದ ಎಡವಟ್ಟನ್ನು ತೆರೆದಿಟ್ಟ ನಟಿ ಕಾವ್ಯಾ ಶಾ!

ಸಾರಾಂಶ

ನಟಿ ಕಾವ್ಯಾ ಶಾ ಆಕಸ್ಮಿಕವಾಗಿ ಲಿಂಕ್‌ ಒತ್ತಿ ₹6.5 ಲಕ್ಷ ಕಳೆದುಕೊಂಡ ಘಟನೆ ಬಹಿರಂಗಪಡಿಸಿದ್ದಾರೆ. ಯೂಟ್ಯೂಬ್ ಸಂದರ್ಶನದಲ್ಲಿ ಈ ವಿಷಯ ಹಂಚಿಕೊಂಡ ಅವರು, 90 ದಿನಗಳಲ್ಲಿ ಹಣ ಮರಳಿ ಗಳಿಸುವ ಗುರಿ ಹೊಂದಿದ್ದಾಗಿ ತಿಳಿಸಿದರು. ಖರ್ಚು ನಿಯಂತ್ರಿಸಿ ಗುರಿ ಮೀರಿ ಸಾಧನೆ ಮಾಡಿದ್ದಾರೆ. ಎಚ್ಚರಿಕೆಯಿಂದಿರಲು ಇದು ಪಾಠ ಎಂದಿದ್ದಾರೆ.

‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’, ‘ಮೂಕಜ್ಜಿಯ ಕನಸು’, ‘ಮುಗಿಲ್ ಪೇಟೆ’, ಮುಕುಂದ ಮುರಾರಿ', ಲೌಡ್ ಸ್ಪೀಕರ್'.. ಹೀಗೆ ಕೆಲವು ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿ ಫೇಮಸ್​ ಆಗಿರೋ ನಟಿ ಕಾವ್ಯಾಶಾ, ಸ್ಯಾಂಡಲ್​ವುಡ್​ ನಟ ನಾಗೇಂದ್ರ ಶಾ ಅವರ ಪುತ್ರಿ. ಆರೋಗ್ಯ ತರಬೇತುದಾರರಾಗಿಯೂ,  ನಿರೂಪಕಿಯಾಗಿಯೂ ಗುರುತಿಸಿಕೊಂಡಿರೋ ಕಾವ್ಯ ಶಾ ಅವರು ಇದೀಗ ಮನೆಯವರಿಗ್ಯಾರಿಗೂ ಹೇಳದ ಗುಟ್ಟೊಂದನ್ನು, ತಾವು ಮಾಡಿಕೊಂಡ ಎಡವಟ್ಟನ್ನು ತೆರೆದಿಟ್ಟಿದ್ದಾರೆ. ಅದೇನೆಂದರೆ ಮೊಬೈಲ್​ನಲ್ಲಿ ಬಂದಿರೋ ಯಾವುದೋ ಲಿಂಕ್​  ಒತ್ತಿ ಎಡವಟ್ಟು ಮಾಡಿಕೊಂಡಿದ್ದರಂತೆ. ಮಿರರ್​  ಕನ್ನಡ ಎನ್ನುವ ಯೂಟ್ಯೂಬ್​ ಚಾನೆಲ್​ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ ಈ ಮಾತನ್ನು ಹೇಳಿದ್ದಾರೆ. 

'ಹೋದ ವರ್ಷ ನಡೆದ ಘಟನೆ ಇದು. ಮೊಬೈಲ್ ಫೋನ್​ಗೆ ಯಾವುದೋ ಲಿಂಕ್​ ಬಂತು. ಅದ್ಯಾವ ಮೂಡ್​ನಲ್ಲಿ ಇದ್ನೋ ಗೊತ್ತಿಲ್ಲ. ಏನೂ ಅಂತನೂ ಸರಿಯಾಗಿ ನೋಡಿಲ್ಲ. ಆ ಲಿಂಕ್​  ಒತ್ತಿಬಿಟ್ಟೆ. ಅಷ್ಟೇ ಬ್ಯಾಂಕ್​ನಲ್ಲಿದ್ದ ಆರೂವರೆ ಲಕ್ಷ  ರೂಪಾಯಿ ಕಳೆದುಕೊಂಡೆ. ಈ ವಿಷಯವನ್ನು ಮನೆಯವರಿಗೂ ಇದುವರೆಗೆ ಹೇಳಲಿಲ್ಲ. ನಾನು ಮಾಡಿದ್ದ ಒಂದೇ ಒಂದು ಎಡವಟ್ಟಿನಿಂದ ನಾನು ಅಲ್ಲಿಯವರೆಗೆ ದುಡಿದ ಸಂಪಾದನೆಯೆಲ್ಲವೂ ಒಂದೇ ಚಿಟಿಕೆಯಲ್ಲಿ ಹೊರಟು ಹೋಯ್ತು ಎಂದಿದ್ದಾರೆ ನಟಿ. ಇದೇ ರೀತಿ ನನ್ನ ಫ್ರೆಂಡ್ಸ್​ಗೆ, ತಿಳಿದವರಿಗೆ ಆಗಿದೆ. ಹಣ ಕಳೆದುಕೊಂಡ ಕೆಲವರು ಡಿಪ್ರೆಷನ್​ಗೆ ಹೋದರೆ ಮತ್ತೆ ಕೆಲವರು ಜೀವವನ್ನೂ ಕಳೆದುಕೊಳ್ಳುವ ಮಟ್ಟಿಗೆ ಹೋಗಿದ್ದು ಇದೆ. ಆದರೆ ನಾನು ಹಾಗೆ ಮಾಡಲಿಲ್ಲ. ಹೋದದ್ದು ಹೋಯಿತು, ಮತ್ತೆ ಅದು ವಾಪಸ್​ ಬರಲ್ಲ ಅಂತ ಗೊತ್ತಿತ್ತು. ಅದಕ್ಕಾಗಿಯೇ ನಾನು 90 ದಿನಗಳ ಪ್ಲ್ಯಾನ್​ ಹಾಕಿಕೊಂಡು ಇಷ್ಟು ಹಣವನ್ನು ಸಂಪಾದನೆ ಮಾಡಬೇಕು ಎನ್ನುವ ಗುರಿ ಇಟ್ಟುಕೊಂಡೆ ಎಂದಿದ್ದಾರೆ ಕಾವ್ಯಾ ಶಾ.

ಹುಡುಗಿಯರ ಇಂಪ್ರೆಸ್‌ ಮಾಡಲು ಭಾಗ್ಯಲಕ್ಷ್ಮಿ ತಾಂಡವ್‌ ಕೊಟ್ಟ ಟಿಪ್ಸ್‌ ಕೇಳಿ ಯುವತಿಯರು ಕಿಡಿಕಿಡಿ!

ನಾನು ಒಂದು ಹೇರ್​ಪಿನ್​ ಕೂಡ ಕಳೆದುಕೊಂಡವಳಲ್ಲ. ಆದರೆ ಅಷ್ಟು ದುಡ್ಡು ಕಳೆದುಕೊಂಡೆ. ಇದು ನನಗೆ ಪಾಠ ಆಯ್ತು.  ಏನೇ ಕೆಲಸ ಮಾಡುವುದಿದ್ದರೂ ಎಷ್ಟು ಜಾಗೃತೆ ಆಗಿರಬೇಕು ಎನ್ನುವುದನ್ನು ಕಲಿತು ಕಳೆದುಕೊಂಡಿರೋ ದುಡ್ಡು ಸಂಪಾದನೆಗೆ ಟೈಮ್​ ಲಿಮಿಟ್​ ಹಾಕಿಕೊಂಡೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತಳಾದೆ. ಖರ್ಚುಗಳಿಗೆ ಕಡಿವಾಣ ಹಾಕುವುದು ಸೇರಿದಂತೆ ಹೆಲವಾರು ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಅದಕ್ಕಿಂತಲೂ ಹೆಚ್ಚಿಗೇ ಹಣವನ್ನು ಈ ಸಮಯದಲ್ಲಿ ಗಳಿಸಿದೆ ಎಂದಿರುವ ನಟಿ, ಇಂಥ ಸಮಯದಲ್ಲಿ ಖಿನ್ನತೆಗೆ ಹೋಗುವುದು, ಇನ್ನೇನೋ ಮಾಡಿಕೊಳ್ಳುವುದು ಸರಿಯಲ್ಲ. ಆಗಿದ್ದು ಆಯಿತು ಎಂದು ಗುರಿ ಸಾಧನೆ ಕಡೆಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.  

ಅಂದಹಾಗೆ, ಕಾವ್ಯ ಅವರು 2022ರಲ್ಲಿ   ನಿರ್ಮಾಪಕ ಹಾಗೂ ಈವೆಂಟ್ ಆಯೋಜಕ ವರುಣ್ ಕುಮಾರ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. 12 ವರ್ಷಗಳ ಕಾಲ ಪ್ರೀತಿಸಿದರೂ ಮದುವೆಗೆ ಮಾತ್ರ ಆಘಾತಕಾರಿ ಅಡ್ಡಿಗಳು ಬರುತ್ತಲೇ ಇದ್ದವರು. ಮದುವೆ ಫಿಕ್ಸ್​ ಆಗಬೇಕು ಎನ್ನುವಷ್ಟರಲ್ಲಿಯೇ ತಾಯಿ ತೀರಿಕೊಂಡರು. ಅವರು ನಿಧನರಾದ ಮೂರು ತಿಂಗಳಿಗೆ ಮದುವೆ ನಿಗದಿಯಾಗಿತ್ತು. ಆದರೆ  ಮದುವೆ ಹಿಂದಿನ ದಿನ ವರುಣ್ ತಂದೆ ತೀರಿಕೊಂಡದ್ದರಿಂದ ಮದುವೆ ರದ್ದಾಗಿತ್ತು.  ಮತ್ತೆ ಎರಡು ತಿಂಗಳ ನಂತರ ಕೊನೆಗೂ ಮದುವೆ ಆಯಿತು. ಈ ಬಗ್ಗೆ ಈ ಹಿಂದೆ ಹೇಳಿದ್ದ ಕಾವ್ಯಾ ಅವರು.  ನಮ್ಮ ಜೀವನ ಸೇಮ್ ಸಿನಿಮಾ ರೀತಿ ಇದೆ ಎಂದಿದ್ದರು.   

ಹೊಸ ವರ್ಷಕ್ಕೆ ಹೊಸ ಹುಡುಗನ ಜೊತೆ ಫಾರಿನ್​ನಲ್ಲಿ ನಿವೇದಿತಾ ಗೌಡ: ಮತಾಂತರಗೊಂಡ್ರಾ ಕೇಳ್ತಿರೋ ಫ್ಯಾನ್ಸ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?