
ಅರೇ ಇದು ಕಾರುಣ್ಯಾ ರಾಮ್ ಅಲ್ವಾ? ಇಷ್ಟೊಂದು ಡಿಫರೆಂಟ್ ಆಗಿದ್ದಾರೆ ನೋಡೋಕೆ. ಹೊಸ ವರ್ಷಕ್ಕೆ ಹೊಸ ಲುಕ್ ಇರಬೇಕು ಎಂದುಕೊಳ್ಳುತ್ತಿರುವ ನೆಟ್ಟಿಗರಿಗೆ ಇಲ್ಲಿದೆ ನೋಡಿ ಫೋಟೋ ಸಾಕ್ಷಿ ಜೊತೆ ಉತ್ತರ...
ನಟನೆ ಜತೆಗೆ ಮಹಿಳಾ ಉದ್ಯಮಿ ಆಗುವ ಕನಸು ಇದೆ: ಕಾರುಣ್ಯ ರಾಮ್
ಕಾರುಣ್ಯ ರಾಮ್ ನಟನೆಯಲ್ಲಿ ಮಾತ್ರವಲ್ಲದೇ, ಜನರ ಸೇವೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ. ಇದೀಗ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ್ದಾರೆ. 'ಎಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಹೆಣ್ಣು ಮಕ್ಕಳಿಗೆ ಕೂದಲೆಂದರೆ ಅಚ್ಚು ಮೆಚ್ಚು. ಅದಕ್ಕಿರುವ ಪ್ರಾಮುಖ್ಯತೆ ಎಲ್ಲರಿಗೂ ಗೊತ್ತಿದೆ. ಮೂರು ವರ್ಷಗಳಿಂದ ಬೆಳೆಸಿರುವ ಈ ಕೂದಲನ್ನು ನಾನು ತುಂಬಾನೇ ಇಷ್ಟ ಪಡುತ್ತೇನೆ. 2021, ಈ ವರ್ಷ ಅದರ ಅಗತ್ಯವಿರುವವರಿಗೆ ದಾನ ಮಾಡಬೇಕೆಂದು ನಿರ್ಧಾರ ಮಾಡಿರುವೆ. ಇದು ನನ್ನ 14 ಇಂಚು ಕೂದಲು. ಇದರ ಅಗತ್ಯವಿರುವವರಿಗೆ ತಲುಪುತ್ತೆದೆ ಎಂದು ಭಾವಿಸಿರುವೆ,' ಎಂದು ಕಾರುಣ್ಯಾ ಬರೆದು ಕೊಂಡಿದ್ದಾರೆ.
ಸಿನಿಮಾ ಶೂಟಿಂಗ್, ಜಾಹೀರಾತು ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿರುವ ಹೆಣ್ಣು ಮಕ್ಕಳಿಗೆ ಕೂದಲು ತುಂಬಾನೇ ಮುಖ್ಯ. ಡಿಫರೆಂಟ್ ಹೇರ್‌ಸ್ಟೈಲ್ ಮಾಡುತ್ತಾ ತಮ್ಮ ಲುಕ್ ಬದಲಾಯಿಸಿಕೊಳ್ಳುತ್ತಾರೆ. ಅಂಥದ್ರಲ್ಲಿ ಕಾರುಣ್ಯಾ ಮಾಡಿರುವ ಕೆಲಸ ನೋಡಿ ಅಭಿಮಾನಿಗಳು ಭೇಷ್ ಎಂದಿದ್ದಾರೆ.
ಸಿನಿಮಾ ಹಂಗಾಮ ವಿತ್ ಕಾರುಣ್ಯ ರಾಮ್; ಹೊಸ ಲುಕ್ ಫೋಟೋ ವೈರಲ್!
ಕೆಲವು ದಿನಗಳ ಹಿಂದೆ ಪೊಗರು ಚಿತ್ರಕ್ಕೆಂದು ಬೆಳಸಿದ ಕೂದಲನ್ನು ನಟ ಧ್ರುವ ಸರ್ಜಾ ಕ್ಯಾನ್ಸರ್ ಮಕ್ಕಳಿಗೆ ದಾನ ಮಾಡಿದ್ದರು. ಇದೇ ರೀತಿ ನಟ-ನಟಿಯರು ಮುಂದೆ ಬಂದು ಕ್ಯಾನ್ಸರ್ ಮಕ್ಕಳಿಗೆ ಸಹಾಯ ಮಾಡಿದರೆ, ಖಂಡಿತವಾಗಿಯೂ ಬದಲಾವಣೆ ತರಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.