ಇಷ್ಟು ಬೇಗ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ರಾ 'ಬೃಂದಾವನ' ನಟಿ ಕಾರ್ತಿಕಾ ನಾಯರ್?

Suvarna News   | Asianet News
Published : Jun 27, 2021, 10:51 AM ISTUpdated : Jun 27, 2021, 11:06 AM IST
ಇಷ್ಟು ಬೇಗ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ರಾ 'ಬೃಂದಾವನ' ನಟಿ ಕಾರ್ತಿಕಾ ನಾಯರ್?

ಸಾರಾಂಶ

ಸ್ಟಾರ್ ನಟರ ಸಿನಿಮಾದಲ್ಲಿ ಮಿಂಚಿದ ನಟಿ ಕಾರ್ತಿಕಾ ನಾಯರ್ ಇದೀಗ ಹೋಟೆಲ್ ಉದ್ಯಮದಲ್ಲಿ ಬ್ಯುಸಿಯಾಗಿದ್ದಾರೆ. 

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದ ನಟಿ ರಾಧಿಕಾ ಮಗಳಾಗಿರುವ ಕಾರ್ತಿಕಾ ನಾಯರ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ದೊಡ್ಡ ಬ್ಯಾನರ್‌ನಲ್ಲಿ, ದೊಡ್ಡ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡರು. ಬಿಡುಗಡೆ ಆದ ಚಿತ್ರಗಳು ಸೂಪರ್ ಹಿಟ್ ಆದವು. ಆದರೂ, ಇದ್ದಕ್ಕಿದ್ದಂತೆ ಚಿತ್ರರಂಗದಿಂದ ದೂರವೇ ಉಳಿದರು. 

ಹೌದು! ನಾಗಚೈತನ್ಯ ಜೊತೆ 'ಜೋಷ್' ಚಿತ್ರದಲ್ಲಿ ಬಣ್ಣದ ಪಯಣ ಆರಂಭಿಸಿದ ಕಾರ್ತಿಕಾ 'ಕೋ' ಚಿತ್ರದಲ್ಲಿ ದೊಡ್ಡ ಯಶಸ್ಸು ಕಂಡರು. ನಂತರ ಮಲಯಾಳಂನ 'ಮಕರಮಂಜು' ಸಿನಿಮಾದಲ್ಲಿ ಊರ್ವಶಿಯ ಪಾತ್ರದಲ್ಲಿ ನಟಿಸಿ, ಬಾರೀ ಪ್ರಶಂಸೆ ದೊರಕಿತ್ತು. ಜೂನಿಯರ್‌ ಎನ್‌ಟಿಆರ್‌ ಜೊತೆ ತೆಲುಗು ಚಿತ್ರ 'ದಮ್ಮು'ನಲ್ಲಿ ನಟಿಸಿದ್ದರು, ಮಮ್ಮುಟಿ ಜೊತೆಯೂ ತಮ್ಮ ಕೌಶಲ್ಯ ಪ್ರದರ್ಶಿಸಿದ್ದರು. ಆ ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೂ ತಮ್ಮ ಚಾಕಚಕ್ಯತೆ ಪ್ರದರ್ಶಿಸಿದರು. 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಬೃಂದಾವನ' ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡರು. ಸಿನಿಮಾ ಸೂಪರ್ ಹಿಟ್ ಆದರೂ ಕಾರ್ತಿಕಾ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ.  ನಂತರದ ದಿನಗಳಲ್ಲಿ ಕಾರ್ತಿಕಾ ಅವರಿಗೆ ಅವಕಾಶಗಳೂ ಕಡಿಮೆಯಾದವು. 2016ರಲ್ಲಿ ಬಿಡುಗಡೆಯಾದ 'ವಾ ದಿಲ್' ಅವರ ಕೊನೆಯ ಚಿತ್ರವಾಯಿತು. 

ಬಾಲಿವುಡ್ ಎಂಟ್ರಿಯಾಗ್ತಿದ್ದಾರೆ ಸೌತ್ ಲೇಡಿ ಸೂಪರ್‌ಸ್ಟಾರ್, ಸುದೀಪ್ ವಿಲನ್ ? 

ಚಿತ್ರರಂಗದಲ್ಲಿ ಅವಕಾಶ ಸಿಗದ ಕಾರಣ ಉದ್ಯಮಕ್ಕೆ ಕಾಲಿಟ್ಟರು. ಉದಯ್ ಸಮುದ್ರ ಲೀಷರ್ ಗ್ರೂಪ್ ಆಫ್ ಹೋಟೆಲ್‌ನ ಮುಖ್ಯಸ್ಥೆಯಾಗಿ ಹೊಟೇಲ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಿಂದಲೂ ದೂರ ಉಳಿದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್