
ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಕನ್ನಡಿಗರು ಗೊಂದಲದಲ್ಲಿದ್ದಾರೆ. ಚಿತ್ರೀಕರಣವಿಲ್ಲದೆ ಜೀವನ ಹೇಗಪ್ಪಾ ಎಂದು ಚಿಂತಿಸುತ್ತಿರುವ ಕಲಾವಿದರ ನಡುವೆ ಸ್ಟಾರ್‌ಗಳ ವಾರ್ ಶುರುವಾಗಿದೆ. ವಂಚನೆ ಕೇಸ್‌ನಿಂದ ಆರಂಭವಾದ ಮಾತಿನ ಚಕಮಕಿ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಸುದ್ದಿಗೋಷ್ಟಿ ನಡೆಸಿದ ದರ್ಶನ್, ನಿರ್ಮಾಪಕ ಉಮಾಪತಿ ಪರಿಚಯ ಆಗಿದ್ದು ನಿರ್ದೇಶಕ ಪ್ರೇಮ್ ಮೂಲಕ ಎಂದು ಹೇಳುತ್ತಾರೆ. ಅಲ್ಲದೆ ಪ್ರೇಮ್ ಬಗ್ಗೆ ಟೀಕೆ ಮಾಡಿ ಹೇಳಿಕೆ ನೀಡಿದ್ದಾರೆ. ಇದರಿಂದ ಬೇಸರಗೊಂಡ ಪ್ರೇಮ್ ಫೇಸ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿ ದರ್ಶನ್ ಬಳಸಿರುವ ಪದಗಳಿಗೆ ಹಾಗೂ ನೀಡಿರುವ ಹೇಳಿಕೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅದಾದ ನಂತರ ಪ್ರೇಮ್ ಪತ್ನಿ ರಕ್ಷಿತಾ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ.
'ಯಾರಾದರೂ ಇನ್ನೊಬ್ಬರ ಬಗ್ಗೆ ಅವರ ನಡತೆಯ ಬಗ್ಗೆ ಮಾತನಾಡುವ ಮುಂಚೆ ಮಾತನಾಡುವಾಗ ತನ್ನ ಬದುಕಿನಲ್ಲಿ ತಾನೇನಾಗಿದ್ದೀನಿ ಅನ್ನೋದನ್ನು ಗಮನಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜನರ ಎದುರಲ್ಲಿ ಮಾತನಾಡುವಾಗ ಏನು ಮಾತನಾಡುತ್ತಿದ್ದೀನಿ ಅನ್ನೋದರ ಬಗ್ಗೆ ಪರಿಜ್ಞಾನ ಇರುವುದು ಮುಖ್ಯ. #Justsaying ಎಂದು ರಕ್ಷಿತಾ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.