ಸ್ಯಾಂಡಲ್‌ವುಡ್ ಕ್ವೀನ್ ಅಂದರೆ ಸಾಕು ಕಣ್ಮುಂದೆ ಬರುವ ಚಿತ್ರ ರಮ್ಯಾದು. ತನ್ನ ಕ್ಯೂಟ್ ನೆಸ್, ಮುದ್ದು ಮುಖದಿಂದ ಗಮನ ಸೆಳೆಯೋ ಚೆಲುವೆಯ ಬಗ್ಗೆ ಕೆಲವು ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ.
ರಮ್ಯಾ (Ramya) ಕನ್ನಡ ಮಾತ್ರ ಅಲ್ಲ ಇತರೇ ಭಾಷೆಗಳ ಚಿತ್ರಗಳಲ್ಲೂ ಮಿಂಚಿದವರು. ಕೆರಿಯರ್ ಇರಬಹುದು, ಪರ್ಸನಲ್ ಲೈಫ್ ಇರಬಹುದು, ಯಾವತ್ತೂ ಕಾಂಪ್ರಮೈಸ್ ಮಾಡಿಕೊಂಡವರೇ ಅಲ್ಲ. ತನ್ನ ಕಾನ್ಫಿಡೆನ್ಸ್ ಜೊತೆಗೆ ಎಡವಟ್ಟುಗಳಿಂದಲೂ ಸುದ್ದಿಯಾಗುತ್ತಿದ್ದ ಚೆಲುವೆ. 'ಚೆಂದ ಇರೋ ಹುಡುಗೀರಿಗೆ ಕೊಬ್ಬು ಜಾಸ್ತಿ ಅನ್ನೋದಕ್ಕೆ ರಮ್ಯಾನೇ ಸಾಕ್ಷಿ' ಅಂತ ಸ್ಯಾಂಡಲ್‌ವುಡ್‌ನ ಕೆಲವು ಸೆಲೆಬ್ರಿಟಿಗಳು ತಮಾಷೆ ಮಾಡುತ್ತಿದ್ದದ್ದುಂಟು. ಆದರೆ ಅವರ್ಯಾರೂ ಇದನ್ನು ಆಕೆಯ ಎದುರು ಬಾಯ್ಬಿಟ್ಟವರಲ್ಲ, ಹಾಗೆಲ್ಲ ಬಾಯ್ಬಿಟ್ಟರೆ ಗಿಟ್ಟಿಸಿಕೊಳ್ಳೋದು ಕಷ್ಟ ಅಂತ ಅವರಿಗೂ ಗೊತ್ತು. ದಶಕದ ಹಿಂದೆಯೇ ತನ್ನ ಚೆಲುವು, ತೀಕ್ಷ್ಮಣೆ, ಬುದ್ಧಿವಂತ ಕಳೆಯ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟ ಚೆಲುವೆ ಇದೀಗ ನಲವತ್ತನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಸಂಸದೆಯಾಗಿ, ಕಾಂಗ್ರೆಸ್ (Congress) ಪಕ್ಷದ ಮುಖ್ಯ ಹುದ್ದೆಯಲ್ಲಿದ್ದು ಈಗ ಎಲ್ಲದರಿಂದ ಅಂತರ ಕಾಯ್ದುಕೊಂಡಿದರುವ ಸ್ಯಾಂಡಲ್‌ವುಡ್ ಕ್ವೀನ್ ಬಗ್ಗೆ ಕೆಲವು ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ.
1. ಮದುವೆ ಅಂದ್ರೆ ಮಾರು ದೂರ ಓಡ್ತಾರೆ! (Wedding)
ರಮ್ಯಾ (Divya Spandana) ನಲವತ್ತರ ಹರೆಯಕ್ಕೆ ಕಾಲಿಡುತ್ತಿದ್ದಾರೆ. ಅಂದರೆ ಮಧ್ಯವಯಸ್ಸು ಸಮೀಪಿಸುತ್ತಿದೆ. ಅವರು ಸಿನಿಮಾ ರಂಗಕ್ಕೆ ಅಡಿಯಿಟ್ಟಾಗಿನಿಂಗ ಈಗಿನವರೆಗೆ ಅವರನ್ನು ಮದುವೆಯ ಬಗ್ಗೆ ಪ್ರಶ್ನಿಸಿದವರು ಬಹಳ ಮಂದಿ. ಮೊದ ಮೊದಲು ಈ ಬಗ್ಗೆ ಕೀಟಲೆಯ ಉತ್ತರ ಕೊಡುತ್ತಿದ್ದ ರಮ್ಯಾ, ಈಗ ಅಯ್ಯೋ ಬಿಟ್ ಬಿಡ್ರಯ್ಯಾ, ಆ ಬೋರ್ ಹುಟ್ಟಿಸೋ ಸಂಗತಿ ಬಗ್ಗೆ ಅದೆಷ್ಟು ಅಂತ ಮಾತಾಡ್ತೀರಿ ಅಂತಾರೆ. ಮದುವೆ ಅಂದರೆ ಮಾರು ದೂರ ಓಡೋ ಚೆಲುವೆ ಈಕೆ.
2. ರಾಹುಲ್ ಗಾಂಧಿ ಜೊತೆ ಲವ್ವಲ್ಲಿ ಬಿದ್ದಿದ್ರಾ! (Rahul Gandhi)
ಇದಿನ್ನೂ ಪ್ರಶ್ನೆಯಾಗಿಯೇ ಇರುವ ಸಂಗತಿ. ರಾಹುಲ್ ವಿಚಾರ ಬಂದರೆ ರಮ್ಯಾ ಬಹಳ ಆಸಕ್ತಿಯಿಂದ ಮಾತಾಡ್ತಾರೆ. ಕೆಲವು ತಿಂಗಳ ಹಿಂದೆ ತನ್ನಿಂದಾಗಿ ಆದ ಒಂದು ಎಡವಟ್ಟು ರಾಹುಲ್ ಅವರಿಗೆ ಹೇಗೆ ಎರವಾಯ್ತು, ಆದರೂ ಅವರು ಅದನ್ನು ಹೇಗೆ ಕೂಲ್ ಆಗಿ ಸ್ವೀಕರಿಸಿದರು ಅಂತ ಟ್ವೀಟ್ ಮಾಡಿದ್ರು. ಆಗಾಗ ರಾಹುಲ್ ಬಗ್ಗೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ (Social media) ಬರೀತಾನೇ ಇದ್ರು. ಅವರ ಜೊತೆಗೆ ಒಡನಾಟವೂ ಹೆಚ್ಚಿತ್ತು ಅನ್ನೋರಿದ್ದಾರೆ. ಆದರೆ ತಮ್ಮಿಬ್ಬರ ರಿಲೇಶನ್ ಶಿಪ್ (Relationship) ಬಗ್ಗೆ ಇಬ್ಬರೂ ಎಲ್ಲೂ ಮಾತಾಡಿಲ್ಲ.
3. ಬೋಲ್ಡ್‌ನೆಸ್‌ಗೆ ಮತ್ತೊಂದು ಹೆಸರು (Bold)
ನಟಿಯರು ಬೋಲ್ಡ್ ಆಗಿದ್ದಾರೆ ಅಂದರೆ ಅವರ ಡ್ರೆಸ್, ಬಿಂದಾಸ್ ನಡವಳಿಕೆ ಅಂತ ಅರ್ಥ ಮಾಡ್ಕೊಳ್ಳೋರಿದ್ದಾರೆ. ಆದರೆ ರಮ್ಯಾ ಬೋಲ್ಡ್ ವ್ಯಕ್ತಿತ್ವದಿಂದಲೇ ಸ್ಯಾಂಡಲ್‌ವುಡ್‌ಅನ್ನು ಬಹು ಕಾಲ ಆಳಿದವರು. ಇಂದಿಗೂ ಅದೇ ಬೋಲ್ಡ್‌ನೆಸ್ ಇಟ್ಟುಕೊಂಡಿರುವ ಈಕೆಯ ಬಗ್ಗೆ ಸಡಿಲ ಮಾತಾಡೋರು ಕಡಿಮೆ, ಈಕೆಗೆ ಉಳಿದ ನಟಿಯರಂತೆ ಪ್ಲೀಸ್ ಮಾಡುವ, ಬಕೀಟ್ ಹಿಡಿಯುವ ಸ್ವಭಾವಗಳೂ ಇಲ್ಲ ಅಂತಾರೆ ಈಕೆಯ ಬಗ್ಗೆ ಬಲ್ಲವರು.
4. ಪ್ರತಿಷ್ಠಿತ ತಾಜ್‌ವೆಸ್ಟ್‌ಎಂಡ್‌ನಲ್ಲಿ ವಾಸ್ತವ್ಯ (Taj westend)
ರಮ್ಯಾ ಅವರದು ಮೊದಲಿಂದಲೇ ಲಕ್ಸುರಿ ಲೈಫ್. ಅವರು ಬೆಂಗಳೂರಲ್ಲಿ ಇರುತ್ತಿದ್ದದ್ದು ಪ್ರತಿಷ್ಠಿತ ತಾಜ್ ವೆಸ್ಟ್ ಎಂಡ್ ಹೊಟೇಲ್‌ನಲ್ಲಿ. ಬೆಂಗಳೂರಿನ ಹೃದಯಭಾಗದಲ್ಲಿದ್ದರೂ ಸುತ್ತ ದಟ್ಟ ಹಸಿರು ಮರಗಳಿಂದ, ಪುಟ್ಟ ಪುಟ್ಟ ಸರೋವರಗಳಿಂದ ಕೂಡಿ ಬ್ಯೂಟಿಫುಲ್ ವಾತಾವರಣ ಇರುವ ಈ ರೆಸಾರ್ಟ್ (Resort) ಸಾಮಾನ್ಯರಿಗೆ ಕೈಗೆಟುಕದ್ದು.
5. ತಂದೆ ಬಗ್ಗೆ ಊಹಾಪೋಹ
ರಮ್ಯಾ ಅವರು ತಮ್ಮ ತಂದೆಯ ಹೆಸರು ಹಲವೆಡೆ ನಮೂದಿಸಿದ್ದರೂ ಅವರ ತಂದೆ ಪ್ರಖ್ಯಾತ ರಾಜಕಾರಣಿಯೊಬ್ಬರು ಅನ್ನೋ ಗಾಸಿಪ್ ಬಹಳ ಸಮಯದಿಂದ ಓಡಾಡುತ್ತಿದೆ. ಆ ರಾಜಕಾರಣಿ ಕೃಪೆಯಿಂದಲೇ ರಮ್ಯಾ ಐಷಾರಾಮಿ ಬದುಕು ಬದುಕೋದು ಸಾಧ್ಯವಾಯ್ತು ಅನ್ನೋದು ಹಲವರ ಅಭಿಪ್ರಾಯ. ಆದರೆ ರಮ್ಯಾ ಎಂದೂ ಈ ಬಗ್ಗೆ ಹೆಚ್ಚು ಮಾತನಾಡಿದವರಲ್ಲ. ಈ ಬಗ್ಗೆ ಅವರನ್ನ ಮಾತನಾಡಿಸುವಷ್ಟ ಧೈರ್ಯವೂ ಜನಕ್ಕಿರಲಿಲ್ಲ ಅನ್ನಬಹುದು.
6. ಆಧ್ಯಾತ್ಮದ ಒಲವು
ಕೆಲವು ದಿನಗಳ ಹಿಂದೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಾ ನಾನೀಗ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಧ್ಯಾನ, ಯೋಗ, ಪ್ರಾಣಿಗಳ ಜೊತೆಗಿನ ಒಡನಾಟದಲ್ಲಿ ಸಮಯ ಕಳೆಯುತ್ತಿದ್ದೇನೆ. ಬದುಕು ಶಾಂತಿಯಿಂದ ಕೂಡಿದೆ ಎಂದಿದ್ದರು. ಜೊತೆಗೆ ಅವರು ಇತ್ತೀಚೆಗೆ ಕೊಂಚ ಅಧ್ಯಾತ್ಮದತ್ತ ವಾಲಿದ್ದದ್ದೂ ಸುಳ್ಳಲ್ಲ ಅಂತಾರೆ ಅವರನ್ನು ಬಲ್ಲವರು.
7. ಇವ್ಯಾವವೂ ನಮಗೆ ಮುಖ್ಯವಲ್ಲ. ಜಾಣೆ, ಸ್ವಾಭಿಮಾನದ ಖನಿ ಆಗಿರುವ ಕನ್ನಡತಿ ರಮ್ಯಾ ಬಗ್ಗೆ ಕನ್ನಡಿಗರಿಗೂ ಸಿಕ್ಕಾಪಟ್ಟೆ ಹೆಮ್ಮೆ ಇದೆ.