
ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸಖತ್ ಮಿಂಚಿದ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲೊಂಗ್ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಹೊಟ್ಟೆ, ತೊಡೆ ಮತ್ತು ಶೂ ಕೆಳ ಭಾಗದಲ್ಲಿ ಚಿನ್ನದ ತುಂಡುಗಳನ್ನು ಇಟ್ಟುಕೊಂಡು ಭಾರತಕ್ಕೆ ಬರುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ. ಮೊದಲ ಚೆಕ್ಕಿಂಗ್ ಪಾಸ್ ಮಾಡಿಕೊಂಡು ಬಂದ ನಟಿ ಎರಡನೇ ಸಲ ಚೆಕ್ಕಿಂಗ್‌ನಲ್ಲಿ ಫಿಟ್ ಆಗಿದ್ದಾರೆ. ಡಿಆರ್‌ಐ ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿದಾಗ ಚಿನ್ನ ಕಳ್ಳತನ, ಅಪರಿಚಿತ ಸಂಖ್ಯೆಗಳಿಂದ ಕರೆ ಬಂದಿರುವುದು ಹಾಗೂ ಕಳ್ಳತನ ಮಾಡುವುದರ ಬಗ್ಗೆ ಯೂಟ್ಯೂಬ್ ವಿಡಿಯೋ ನೋಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನೂ ಶಾಕಿಂಗ್ ವಿಚಾರ ಏನೆಂದರೆ ಸುಮಾರು 10 ರಿಂದ 15 ಸಲ ರನ್ಯಾ ದುಬೈಗೆ ಪ್ರವಾಸ ಮಾಡಿದ್ದಾರೆ.
ರನ್ಯಾ ರಾವ್ ದಯೆಯಿಂದ ದುಬೈ ಸಖತ್ ಸುದ್ದಿಯಲ್ಲಿದೆ. ಯಾರೆಲ್ಲಾ ಸುಖಸುಮ್ಮನೆ ದುಬೈ ಪ್ರವಾಸ ಮಾಡುತ್ತಿದ್ದರು ಅವರಿಗೆ ಕೊಂಚ ನಡುಕ ಶುರುವಾಗಿದೆ. ಸ್ಯಾಂಡಲ್‌ವುಡ್ ಕಿರುತೆರೆ ಹಾಗೂ ಬೆಳ್ಳಿ ತೆರೆಯ ನಟಿಯರಲ್ಲಿ ಕೆಲವರು ಆಗಾಗ ದುಬೈ ಟ್ರಿಪ್ ಮಾಡುತ್ತಿದ್ದರು. ತಮ್ಮ ಟ್ರಿಪ್‌ಗಳ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಕಲರ್ ಕಲರ್ ಫೋಟೋದೊಂದಿಗೆ ಮೋಟಿವೇಷನ್ ಸಾಲುಗಳನ್ನು ಬರೆದುಕೊಳ್ಳುತ್ತಿದ್ದರು.ಈಗ ಆ ನಟಿಯರಿಗೆ ಭಯ ಶುರುವಾಗಿದೆ. ಅಯ್ಯೋ ನಾವು ದುಬೈ ಫೋಟೋ ಹಾಕಿದ್ದೀನಿ ನಮ್ಮ ಬುಡಕ್ಕೆ ಏನಾದ್ರೂ ಬರ್ತಾರಾ ಅನ್ನೋ ಯೋಚನೆ ಶುರುವಾಗಿದೆ. ಇನ್ನೂ ಕೆಲವರು ಸಿಕ್ಕಾಪಟ್ಟೆ ಸ್ಮಾರ್ಟ್ ಆಗಿ ದುಬೈ ಪ್ರವಾಸದ ಫೋಟೋಗಳನ್ನು ಡಿಲೀಟ್ ಮಾಡಲು ಶುರು ಮಾಡಿದ್ದಾರೆ.
ಸಖತ್ ಸುದ್ದಿಯಲ್ಲಿರುವ ದುಬೈಗೆ ಯಾರೆಲ್ಲಾ ನಟಿಯರು ಹೋಗಿದ್ರು ನೋಡಿ
ಈ ಜಾಲದಲ್ಲಿ ಹಲವು ನಟಿಯರ ಹೆಸರು ಕೇಳಿ ಬರುತ್ತಿದೆ ಅದರೆ ಎಲ್ಲಿಯೂ ಬಹಿರಂಗವಾಗಿಲ್ಲ. ತಮ್ಮ ಫ್ಯಾಮಿಲಿ ಜೊತೆ ದುಬೈ ಟ್ರಿಪ್ ಮಾಡಿದ್ದರೂ ಕೂಡ ಹೆದರಿಕೊಂಡು ಫೋಟೋ ಡಿಲೀಟ್ ಮಾಡುತ್ತಿದ್ದಾರೆ. ಯಾವುದೇ ಕೆಟ್ಟ ಕೆಲಸ, ಕೆಟ್ಟ ಉದ್ದೇಶ ಇಲ್ಲದಿದ್ದರೂ ಸುಮ್ಮನೆ ನಮ್ಮ ಹೆಸರು ಬಳಸುತ್ತಾರೆ ಅನ್ನೋ ಭಯದಲ್ಲಿ ಕೂಡ ಕೆಲವರು ಶುರುವಾಗಿದೆ.
ಚಿನ್ನದ ಕಳ್ಳಿ ರನ್ಯಾ ರಾವ್ ಸ್ವಂತ ತಮ್ಮ ನಟಿ ಜಯಮಾಲಾ ಅಳಿಯ; ನವ ಜೋಡಿ ಮೇಲೆ ಬಿತ್ತು ಜನರ ಕಣ್ಣು!
ಜಯಮಾಲಾ ನಂಟು:
ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧನಕ್ಕೆ ಒಳಗಾಗಿ ವಿಚಾರಣೆ ಎದುರಿಸುತ್ತಿರುವ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಹಾಗೂ ಸ್ಯಾಂಡಲ್‌ವುಡ್ ನಟಿ ಜಯಮಾಲಾ ಅವರ ನಂಟು ಕೂಡ ಬಹಿರಂಗವಾಗಿದೆ. ರನ್ಯಾ ರಾವ್ ಕೇಸ್‌ನಲ್ಲಿ ರಾಜಕಾರಣಿಗಳು ಹಾಗೂ ಸ್ವಾಮೀಜಿಗಳ ಪಾತ್ರ ಇರುವ ನಡುವೆಯೇ, ಚಿನ್ನದ ಚೋರಿ ರನ್ಯಾ ರಾವ್‌ನ ಸ್ವಂತ ತಮ್ಮ ಹಿರಿಯ ನಟಿ ಜಯಮಾಲಾ ಅವರ ಅಳಿಯ ಅನ್ನೋದು ಗೊತ್ತಾಗಿದೆ. ಫೆಬ್ರವರಿ ತಿಂಗಳ ಆರಂಭದಲ್ಲಿ ಜಯಮಾಲಾ ಅವರ ಪುತ್ರಿ ಹಾಗೂ ನಟಿ ಸೌಂದರ್ಯ ಜಯಮಾಲಾ ಅವರ ವಿವಾಹ ನೆರವೇರಿತ್ತು. ಸೌಂದರ್ಯ ಅವರ ಪುತ್ರಿಯನ್ನು ಮದುವೆಯಾಗಿರುವುದು ರನ್ಯಾ ರಾವ್ ಅವರ ತಮ್ಮ ರಿಷಬ್ ರಾವ್ ಅನ್ನೋದು ಗೊತ್ತಾಗಿದೆ. ಜಯಮಾಲಾ ಅವರ ಮಗಳ ಮದುವೆ ಸಮಾರಂಭದಲ್ಲಿ ರನ್ಯಾ ರಾವ್ ಸಖತ್ ಆಗಿ ಮಿಂಚಿದ್ದರು.
ಮದ್ವೆ ಬಗ್ಗೆ ಭಯ ಶುರುವಾಯ್ತು ಅದಿಕ್ಕೆ ನಾನೇ ಲಿಸ್ಟ್ ಮಾಡ್ಕೊಂಡು ಹುಡುಗನನ್ನು ಆಯ್ಕೆ ಮಾಡಿದೆ: ಸುಧಾ ಬೆಳವಾಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.