Latest Videos

'ಎಲ್ಲರ ಮನೆ ದೋಸೆನೂ'ನಲ್ಲಿ ದರ್ಶನ್ ಜೊತೆಗಿದ್ದೆ, ನಾಚಿಕೆ ಸ್ವಭಾವದ ವ್ಯಕ್ತಿ ಅವ್ರು: ಭಾವನಾ ರಾಮಣ್ಣ ಗರಂ!

By Shriram BhatFirst Published Jun 27, 2024, 12:47 PM IST
Highlights

ನಿಮ್ಗೆ ಹೆಂಗ್ರಿ ಗೊತ್ತಿದೆ? ನೋಡಿದೀರಾ? ನೀವು ನೋಡಿದೀರಾ ಅದನ್ನ ಅಂತ.. ಎಲ್ಲಿಂದ ನೋಡಿದ್ರಿ.. ಬಹುಶಃ ಅವ್ರಿ ಇವ್ರು ಹೇಳಿದ್ದು ಕೇಳಿ ನೀವು ಏನೋ ಹೇಳ್ತಾ ಇದೀರ.. ಅವ್ರು ತನಿಖೆ ಮಾಡ್ಲಿ, ಅದೇನು ಅಂತ ಸತ್ಯ ಹೊರಗೆ ಬರ್ಲಿ' ಎಂದಿದ್ದಾರೆ ನಟಿ ಭಾವನಾ ರಾಮಣ್ಣ.

ಕನ್ನಡದ 'ಚಂದ್ರಮುಖಿ ಪ್ರಾಣಸಖಿ' ಖ್ಯಾತಿಯ ನಟಿ ಭಾವನಾ ರಾಮಣ್ಣಾ (Bhavana Ramanna) ಅವರು ಮಾಧ್ಯಮದ ಪ್ರಶ್ನೆಯೊಂದಕ್ಕೆ ಗರಂ ಆಗಿದ್ದಾರೆ. ನಿರೂಪಕರು 'ರೇಣುಕಾಸ್ವಾಮಿ ದರ್ಶನ್ ಅವ್ರ ಅಭಿಮಾನಿಯಾಗಿದ್ದರು. ಪವಿತ್ರಾ ಗೌಡ' ಎನ್ನುತ್ತಿದ್ದಂತೆ ನಟಿ ಭಾವನಾ ' ಹಾಗೆ ಹೇಳ್ಬೇಡಿ. ಹೇಗೆ ಹೆಳಿದ್ರಿ ನೀವು ಅದನ್ನ?ನಿಮಗೆ ಆ ಬಗ್ಗೆ ಏನಾದ್ರೂ ಕನ್ಫರ್ಮೇಶನ್ ಇದ್ಯಾ? ನೀವ್ಯಾರು ಅದನ್ನ ಹೇಳೋದಕ್ಕೆ.. ಅಲ್ಲಿದಾರೆ ಆ ಕೆಲ್ಸ ಮಾಡೋದಕ್ಕೆ.. ನಾನು ಹೇಳೋದೇನು ಅಂದ್ರೆ, ನೀವು ಆ ಕೆಲಸ ಮಾಡ್ಬೇಡಿ, ನಾನೂ ಸ್ಟೇಟ್‌ಮೆಂಟ್ ಕೋಡೋಕಾಗಲ್ಲ. ಅದನ್ನ ನೋಡ್ಕೋತಿರೋರು ಬೇರೆ ಇದಾರೆ. 

ನಿಮ್ಗೆ ಹೆಂಗ್ರಿ ಗೊತ್ತಿದೆ? ನೋಡಿದೀರಾ? ನೀವು ನೋಡಿದೀರಾ ಅದನ್ನ ಅಂತ.. ಎಲ್ಲಿಂದ ನೋಡಿದ್ರಿ.. ಬಹುಶಃ ಅವ್ರಿ ಇವ್ರು ಹೇಳಿದ್ದು ಕೇಳಿ ನೀವು ಏನೋ ಹೇಳ್ತಾ ಇದೀರ.. ಅವ್ರು ತನಿಖೆ ಮಾಡ್ಲಿ, ಅದೇನು ಅಂತ ಸತ್ಯ ಹೊರಗೆ ಬರ್ಲಿ' ಎಂದಿದ್ದಾರೆ ನಟಿ ಭಾವನಾ ರಾಮಣ್ಣ. ನಾನು ಈ ವಿಷಯದಲ್ಲಿ ನಟ ದರ್ಶನ್ ಪರ ನಿಲ್ಲುತ್ತೇನೆ ಎಂದೂ ಕೂಡ ಭಾವನಾ ರಾಮಣ್ಣ ಸ್ಪಷ್ಟವಾಗಿ ಹೇಳಿದ್ದಾರೆ.

ಹದಿ ವಯಸ್ಸಿನ ಮಗಳೊಂದಿಗೆ ಹೇಗಿರಬೇಕು ಒಡನಾಟ, ಸಂಬಂಧದ ಪಾಠ ಹೇಳಿದ ಶ್ರುತಿ! 

ನಟ ದರ್ಶನ್ ವಿಚಾರ  ನೆನೆದು ಭಾವನಾ ಕಣ್ಣೀರಿಟ್ಟಿದ್ದಾರೆ. 'ಕಲಾವಿದರ ಕಷ್ಟ ಯಾರಿಗೂ ಗೊತ್ತಿಲ್ಲ ನಮ್ಮ ನೋವು ನಮಗೇ ಗೊತ್ತು..  ಕಲಾವಿದರಿಗೆ ಬ್ಯಾಂಕ್ ನಲ್ಲಿ ಸಾಲ ಕೊಡಲ್ಲ. ನಮ್ಮ ಕಷ್ಟಗಳು ಯಾರಿಗೆ ಹೇಳೋದು ಇನ್ಸ್ಯೂರೆನ್ಸ್ ಕೂಡ ನಮಗಿಲ್ಲ. ಯಾವುದೇ ಸರ್ಕಾರ ನಮ್ಮ ಪರ ಇರಲ್ಲ. ಏನಾದ್ರೂ ಸಮಸ್ಯೆ ಆದ್ರೆ ಎಲ್ಲರೂ ಬೆಟ್ಟು ಮಾಡಿ ತೋರಿಸುತ್ತಾರೆ. ಕಲಾವಿದರಿಗೆ ಯಾರೂ ಇಲ್ಲ ನಮ್ಮ ಅನ್ನ ನಮ್ಮದು. ನಮಗೆ ಯಾರ ಬೆಂಬಲವೂ ಇಲ್ಲ' ಎಂದು ಜೋರಾಗಿ ಕಿರುಚಿ  ನಟಿ ಭಾವನಾ ರಾಮಣ್ಣ ಕಣ್ಣೀರಿಟ್ಟಿದ್ದಾರೆ.

ನಾನು ನಿವಿ ವರ್ಷದಿಂದ ಬೇರೆ ಇದ್ವಿ, ಪರ್ಸನಲ್ ವಿಷ್ಯಕ್ಕೆ ಪಬ್ಲಿಕ್‌ನಲ್ಲಿ ಉತ್ತರ ಕೊಡ್ಬೇಕಾಯ್ತು; ಚಂದನ್ ಶೆಟ್ಟಿ

'ಅದೇನೇ ಆಗ್ಲಿ, ಐ ಸ್ಟ್ಯಾಂಡ್ ವಿತ್ ದರ್ಶನ್. ಸಂತೋಷದಲ್ಲಿ ಜೊತೆಗಿದ್ದು ದುಖದಲ್ಲಿ ಇಲ್ಲ ಅನ್ನೋ ರೀತಿ ಅಲ್ಲ. ದರ್ಶನ್ ಮತ್ತು ನನಗೆ ಎಲ್ಲರ‌ ಮನೆ ದೋಸೆ ತೂತು ಅನ್ನೋ ಸಿನಿಮಾದಿಂದ ಗೊತ್ತು. ಅವರು ಹೀರೋ ಆಗೋಕ್ಕಿಂತ ಮುಂಚೆನೆ ನನಗೆ ಗೊತ್ತು. ಅವರು ನನಗೆ ಗೊತ್ತಿರೋರು...ಸಾಕಷ್ಟು ವರ್ಷದಿಂದ ಜೊತೇಲಿ ಇರೋರು ನಾವು.

ಸ್ಟಾರ್‌ಡಂ ಇದ್ರೂ ಸರಳತೆಯೂ ಇತ್ತು, ಕಷ್ಟದಿಂದ ಬೆಳೆದವರು ನಟ ದರ್ಶನ್; ಬಿಗ್ ಬಾಸ್ ವಿನ್ನರ್ ಶ್ರುತಿ

ಕಾನೂನಿನ ಅಡಿಯಲ್ಲಿ ಏನಾಗುತ್ತೋ ಅದನ್ನ ನಾನೂ ಕೂಡ ಒಪ್ಪಿಕೊಳ್ತಿವಿ. ಸೋಶಿಯಲ್ ಮೀಡಿಯಾದಲ್ಲಿ ಹೆಣ್ಮಕ್ಕಳಿಗೆ ಆಗ್ತಿರೋ ಸಮಸ್ಯೆ ಅನ್ಯಾಯ ತುಂಬಾ ಇದೆ. ಕೆಲವು ಪ್ರಕರಣ ಮಾತ್ರ ಹೊರಗೆ ಬರ್ತಾ ಇದೆ. ತುಂಬಾ ಹೆಣ್ಮಕ್ಜಳಿಗೆ ಕೆಟ್ಟ ಸಂದೇಶ ರವಾನೆ ಆಗಿ ಸಮಸ್ಯೆ ಆಗುತ್ತೆ. ಈ ಘಟನೆ ನಡೆದಿದ್ದು ತುಂಬಾ ನೋವಾಗಿದೆ. ಕೃತ್ಯ ನಡೆದಿದೆ ನಿಜ, ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹೇಗಾಗಿದೆ ಯಾಕಾಗಿದೆ ಯಾರಿಗೂ ಗೊತ್ತಿಲ್ಲ' ಎಂದಿದ್ದಾರೆ.

ವಿಷ್ಣುವರ್ಧನ್‌ರನ್ನು 'ಅಪ್ಪಾಜಿ' ಅಂತಿದ್ದ ನಟ ದರ್ಶನ್ 'ಈ ಬಂಧನ' ಬಳಿಕ ಏನು ಹೇಳಿದ್ರು? 

ಮುಂದುವರೆದು ಮಾತನಾಡಿ, ಪವಿತ್ರಾ ಗೌಡಗೆ ಯಾವ ರೀತಿ ಅಶ್ಲೀಲ ಮೆಸೇಜ್ ಬಂದಿದೆ ಅಂತ ನನಗೆ ಗೊತ್ತು. ಯಾವ ತರದ ಮೆಸೆಜ್ ಬಂದಿದೆ ..? ಕೆಲ ಸೋಷಿಯಲ್ ಮಿಡಿಯಾ ಮೆಸೇಜ್ ನೋಡಿದ್ರೆ ಕೆಲ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾರೆ. ಕೆಟ್ಟ ಮೆಸೇಜ್ ಬಂದಿದ್ದನ್ನ ಇಗ್ನೋರ್ ಮಾಡೋಕೆ ಆಗಲ್ಲ. ಕೆಟ್ಟ ಮೆಸೇಜ್ ಮಾಡೋಕೆ ಅವರು ಯಾರು?

ಪಾಠ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ: ಅತೃಪ್ತರು ಎಲ್ಲಾ ಕಡೆ ಇರ್ತಾರೆ, ಯಾಕೆ ತಲೆ ಕೆಡಿಸ್ಕೋತೀರಿ!

ರೇಣುಕಾ ಸ್ವಾಮಿ ದರ್ಶನ್ ಅಭಿಮಾನಿ ಅಂತ ಹೇಳ್ತೀರಾ..? ನಿಮಗೆ ಹೇಗೆ ಗೊತ್ತು..? ಎಲ್ಲರೂ ಸ್ಟೇಟ್ಮೆಂಟ್ ಕೊಡಬೇಡಿ. ರೇಣುಕಾ ಸ್ವಾಮಿ ಯಾರು ಅಂತ ನಮಗೂ ನಿಮಗೂ  ಯಾರಿಗೂ ಗೊತ್ತಿಲ್ಲ. ಚಿತ್ರರಂಗದವರಾಗಿ ಈ ಪ್ರಕರಣ ನೋಡಿದ್ರೆ ದುಃಖ ಆಗುತ್ತೆ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ನೋಡಿದ್ದು ಅಪ್ಪು ಅಲ್ಲ ಭಾಗ್ಯವಂತ; ಕಿಚ್ಚ ಸುದೀಪ್ ಪುನೀತ್ ಬಗ್ಗೆ ಹೀಗ್ ಯಾಕ್ ಅಂದ್ರು..?

ಸಂಜಯ್ ದತ್ ಪ್ರಕರಣ ನೆನೆದು ದರ್ಶನ್ ಪರ ಬ್ಯಾಟ್ ಬೀಸಿದ ನಟಿ ಭಾವನಾ, ಸಂಜಯ್ ದತ್ ಜೈಲಿಗೆ ಹೋಗಿ ಬಂದ್ರೂ ನಂತರ ಮತ್ತೆ ಜನರ ಮನಸ್ಸು ಗೆದ್ದು ಯಶಸ್ಸು ಪಡೆದಿದ್ದಾರೆ. ದರ್ಶನ್ ವಿವಾದಗಳು ಅವರಿಗೆ ಬಿಟ್ಟಿದ್ದು ನಟರಾದವರು ಹೀಗೇ ಇರಬೇಕು ಅಂತ ಚೌಕಟ್ಟು ಹಾಕಿದ್ದಾರೆ. ನಟ ದರ್ಶನ್ ವೇದಿಕೆ ಮೇಲೆ ಒಂದು ತರಹ, ಹಿಂದುಗಡೆ ಒಂದು ತರಹದ ವ್ಯಕ್ತಿ ಅಲ್ಲ. ನಾಚಿಕೆ ಸ್ವಭಾವದ ವ್ಯಕ್ತಿ ಅವರು' ಎಂದಿದ್ದಾರೆ ನಟಿ ಭಾವನಾ ರಾಮಣ್ಣ.  

ಇದೇನು ಪ್ರೀತಿ ತೋರಿಸೋ ಅವತಾರವೋ ಅವಮಾನವೋ ಗೊತ್ತಿಲ್ಲ; ನಟ ಶಂಕರ್ ಅಶ್ವಥ್ ಬೇಸರ!

click me!