Latest Videos

ನಾನು ನೋಡಿದ್ದು ಅಪ್ಪು ಅಲ್ಲ ಭಾಗ್ಯವಂತ; ಕಿಚ್ಚ ಸುದೀಪ್ ಪುನೀತ್ ಬಗ್ಗೆ ಹೀಗ್ ಯಾಕ್ ಅಂದ್ರು..?

By Shriram BhatFirst Published Jun 26, 2024, 3:41 PM IST
Highlights

ಆ ಟೈಮಲ್ಲಿ ಪಾರ್ವತಮ್ಮ ಅವ್ರು ಬಂದಿರಲಿಲ್ಲ. ಗೋವಿಂದರಾಜು ಅವರು ಪುನೀತ್ ಹಾಗೂ ಬೇರೆಯವ್ರನ್ನ ನಮ್ಮನೆಗೆ ಕರ್ಕೊಂಡು ಬಂದಿದ್ರು. ನಾನೂ ಕೂಡ ಆವಾಗ ಇನ್ನೂ ತುಂಬಾ ಚಿಕ್ಕವ್ನು. ಆಗ ನಮ್ಮನೆಗೆ ಬಂದಾಗ ಅವ್ನು ತುಂಬಾನೇ ಕ್ಲೋಸ್ ಆಗ್ಬಿಟ್ಟ. ..


'ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ ಭಾಗ್ಯವಂತ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಆವಾಗ ನಮ್ಮನೆಗೇ 'ಅಪ್ಪು'ನ ಕರ್ಕೊಂಡು ಬಂದಿದ್ದರು. ಈವಾಗ, ಅಂದ್ರೆ ಪುನೀತ್ ರಾಜ್‌ಕುಮಾರ್ 'ಅಪ್ಪು' ಸಿನಿಮಾ ಮಾಡಿದ್ಮೇಲೆ ನೀವೆಲ್ಲಾ ಅಪ್ಪು ಅಂತ ಈಗ ಕರೀತಾ ಇದೀರಾ. ಆದ್ರೆ ಆಗ ಹಾಗೆ ಕರೀತಾ ಇರ್ಲಿಲ್ಲ. ಆಗ ನಮ್ಮಪ್ಪ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲರಿಗೂ ತುಂಬಾ ಕ್ಲೋಸ್ ಆಗಿದ್ರು. ಶಿವಮೊಗ್ಗಾದಲ್ಲಿ ವಿನಾಯಕ ಥಿಯೇಟರ್‌ ಅಂತ ಒಂದಿದೆ. ಅಲ್ಲಿ ಭಾಗ್ಯವಂತ ಸಿನಿಮಾ ನೂರು ದಿನ ಕಂಪ್ಲೀಟ್ ಆಗಿತ್ತು. 

ಆ ಟೈಮಲ್ಲಿ ಪಾರ್ವತಮ್ಮ ಅವ್ರು ಬಂದಿರಲಿಲ್ಲ. ಗೋವಿಂದರಾಜು ಅವರು ಪುನೀತ್ ಹಾಗೂ ಬೇರೆಯವ್ರನ್ನ ನಮ್ಮನೆಗೆ ಕರ್ಕೊಂಡು ಬಂದಿದ್ರು. ನಾನೂ ಕೂಡ ಆವಾಗ ಇನ್ನೂ ತುಂಬಾ ಚಿಕ್ಕವ್ನು. ಆಗ ನಮ್ಮನೆಗೆ ಬಂದಾಗ ಅವ್ನು ತುಂಬಾನೇ ಕ್ಲೋಸ್ ಆಗ್ಬಿಟ್ಟ. ಆಗ ಅವ್ನು ಇಷ್ಟೇ ಇಷ್ಟು ಹೈಟ್ ಇದ್ದ. ನೀವು ನೋಡಿರೋ ಫೋಟೋಗಳು ಒಂದೋ ಎರಡೋ ಅಷ್ಟೇ. ಆದ್ರೆ ಆಗ ತೆಗೆದಿರೋ ನಮ್ ಫೋಟೋಗಳು ತುಂಬಾ ಇವೆ. ಆ ಟೈಮ್‌ನಲ್ಲಿ ತುಂಬಾ ಜನರ ಜೊತೆ ತೆಗೆಸಿರೋ ಫೋಟಗಳು ಇವೆ. 

ಇದೇನು ಪ್ರೀತಿ ತೋರಿಸೋ ಅವತಾರವೋ ಅವಮಾನವೋ ಗೊತ್ತಿಲ್ಲ; ನಟ ಶಂಕರ್ ಅಶ್ವಥ್ ಬೇಸರ!

ಆದರೆ, ನನ್ ಸಮಾನವಯಸ್ಕ, ಸಮಾನ ಮನಸ್ಕ ಅಗಿದ್ದ ಅಪ್ಪು ಜೊತೆ ತೆಗೆಸಿದ್ದ ಆ ಫೋಟೋ ಇಂದು ತುಂಬಾನೇ ಸವಿನೆನಪು, ಅದು ಯಾವತ್ತೂ ಸ್ವೀಟ್ ಮೆಮರಿ ಆಗಿರುತ್ತೆ ಅಂದಿದ್ದಾರೆ ನಟ ಕಿಚ್ಚ ಸುದೀಪ್ (Kichcha Sudeep). ಅಂದಹಾಗೆ, ನಟಿ ಕಿಚ್ಚ ಸುದೀಪ್ ಹಾಗು ನಟ ಪುನೀತ್ ರಾಜ್‌ಕುಮಾರ್ ಚಿಕ್ಕವರಿದ್ದಾಗ ಒಟ್ಟಿಗೇ ಸಾಕಷ್ಟು ಬಾರಿ ಆಟ ಆಡಿದ್ದಾರಂತೆ. ಸುದೀಪ್ ಬಳಿ ಇದ್ದ ಒಂದು ಗೊಂಬೆ ಪುನೀತ್ ಅವರಿಗೆ ಬಹಳಷ್ಟು ಇಷ್ಟವಾಗಿತ್ತು ಎನ್ನಲಾಗಿದೆ. ಅದನ್ನು ಸುದೀಪ್ ಅಪ್ಪುಗೆ ಕೊಟ್ಟಿದ್ದರಂತೆ. 

ಸೀಕ್ರೆಟ್ ಬಿಚ್ಚಿಟ್ಟರು ಸ್ನೇಹಿತ ಅಣಜಿ ನಾಗರಾಜ್, ಕೊಲೆ ಕೇಸಿನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದು ಹೇಗೆ?

ಒಟ್ಟಿನಲ್ಲಿ, ನಟ ಪುನೀತ್ ರಾಜ್‌ಕುಮಾರ್ ಹಾಗೂ ಸುದೀಪ್‌ ಅವರಿಬ್ಬರ ಭೇಟಿ ಚಿಕ್ಕವರಿದ್ದಾಗಲೇ ಆಗಿತ್ತು. ಇಬ್ಬರೂ ಹೆಚ್ಚು ಕಡಿಮೆ ಒಂದೇ ಸಾರಿ ಸಿನಿಮಾರಂಗಕ್ಕೂ ಕಾಲಿಟ್ಟಿದ್ದರು. ಇಬ್ಬರೂ ಸಕ್ಸಸ್‌ಫುಲ್ ನಟರಾಗಿ ಬೆಳೆದರು. ಆದರೆ, ನಟ ಪುನೀತ್ ರಾಜ್‌ಕುಮಾರ್ ಇಂದು ನಮ್ಮೊಂದಿಗಿಲ್ಲ. ಅವರ ನಟಿಸಿದ ಸಿನಿಮಾಗಳು ಹಾಗು ಸವಿನೆನಪು ಮಾತ್ರ ನಮ್ಮೊಂದಿಗೆ ಇದೆ, ಯಾವತ್ತೂ ಇರುತ್ತದೆ ಎಂದು ಹೇಳಿದ್ದಾರೆ ನಟ ಸುದೀಪ್ ಕೂಡ. ಸುದೀಪ್ ಪಾಲಿಗೆ ಪನೀತ್ ಅವರು ಅಪ್ಪು ಅಲ್ಲ, ಬದಲಿಗೆ ಭಾಗ್ಯವಂತ ಎನ್ನಬಹುದು.

ಯಾಕಂದ್ರು ಕಿಚ್ಚ ಸುದೀಪ್: ನಾವು ರಿಯಾಕ್ಟ್ ಮಾಡೋಕೆ ಹೋದ್ರೆ ಅದು ದೀಪಕ್ಕೆ ಎಣ್ಣೆ ಹಾಕಿದ ಹಾಗೆ! 

click me!