
'ಮಾಧ್ಯಮದವರಿಗೆ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಪಿಲ್ಲರ್ ಅಂತ ಹೇಳ್ತಾರೆ. ಆದ್ರೆ, ಮೀಡಿಯಾದವರಿಗೆ ಏನಾದ್ರೂ ಪ್ರೊಟೆಕ್ಷನ್ ಇದ್ಯಾ..?' ಅಂತ ರ್‍ಯಾಪಿಡ್ ರಶ್ಮಿ (Rapid Rashmi) ಪ್ರಶ್ನೆ ಕೇಳಿದ್ದಾರೆ. ಕೇಳಿದ್ದು ಖ್ಯಾತ ಪತ್ರಕರ್ತ, ನಟ-ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ಅವರಿಗೆ. ಸಂದರ್ಶನವೊಂದರಲ್ಲಿ ನಿರೂಪಕಿ ರ್‍ಯಾಪಿಡ್ ರಶ್ಮಿ ಅವರು ಇಂದ್ರಜಿತ್ ಲಂಕೇಶ್ ಅವರಿಗೆ ಈ ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ. ಹಾಗಿದ್ದರೆ ಇಂದ್ರಜಿತ್ ಲಂಕೇಶ್ ಏನಂತ ಉತ್ತರ ಕೊಟ್ಟಿದ್ದಾರೆ, ನೋಡಿ..
'ಇಲ್ಲ, ಪತ್ರಿಕೋದ್ಯಮಿಗಳಿಗೆ ಖಂಡಿತ ರಕ್ಷಣೆ ಇಲ್ಲ. ನಮ್ಮ ಅಕ್ಕನ ಉದಾಹರಣೆಯನ್ನೇ ತೆಗೆದುಕೊಳ್ಳಿ.. ಬೆಂಗಳೂರಂತ ಸಿಟಿನಲ್ಲಿ, ಅದ್ರಲ್ಲೂ ಅವ್ರ ಮನೆ ಹತ್ರನೇ ಬಂದು ಗುಂಡಿಟ್ಟು ಸಾಯಿಸ್ತಾರೆ ಅಂದ್ರೆ, ಎಂತ ದುರಂತ ಇದು.. ಯಾಕೆ ಅಂದ್ರೆ, ಅವ್ಳು ಯಾವತ್ತೂ ತನಗೆ ಅನ್ನಿಸಿದ್ದನ್ನ ಧೈರ್ಯವಾಗಿ ಹೇಳಿದೋಳು. ಅವ್ಳ ನಿಲುವಿನಲ್ಲಿ ಕಾಂಪ್ರೋಮೈಸ್ ಆಗಿರ್ಲಿಲ್ಲ. ಅವ್ಳ ಸ್ಟ್ಯಾಂಡ್ ಅಂತೂ ಯಾವತ್ತೂ ವೆರಿ ಬ್ಲಾಕ್ ಅಂಡ್ ವೈಟ್ ಸ್ಟ್ಯಾಂಡ್ ಇರ್ತಿತ್ತು.
ಅವ್ಳು ಮನೆಗೆ ಬಂದು ಗೇಟ್ ತೆಗೆದು, ಮನೆಗೋಗಿ ಮತ್ತೆ ಗೇಟ್ ಹಾಕಿ ವಾಪಸ್ ಕಾರಲ್ಲಿ ಕೂತ್ಕೋಬೇಕಾದ್ರೆ ಅವ್ಳಿಗೆ ಗುಂಡು ಹೊಡೆದು ಸಾಯ್ಸಿದಾರೆ. ಈ ತರ ವಾತಾವರಣ ಇದ್ದಾಗ ಪತ್ರಕರ್ತರು ಯಾವ ತರ ಕೆಲಸ ಮಾಡೋಕ್ ಆಗುತ್ತೆ?' ಎಂದಿದ್ದಾರೆ ಇಂದ್ರಜಿತ್ ಲಂಕೇಶ್. ಇಂದ್ರಜಿತ್ ಲಂಕೇಶ್ ಅಕ್ಕ ಗೌರಿ ಲಂಕೇಶ್ ಅವರ ಕೊಲೆಯಾಗಿ ಹಲವು ವರ್ಷಗಳೇ ಕಳೆದಿವೆ. ಆದರೆ, ಆರೋಪಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ, ತನಿಖೆ ನಡೆಯುತ್ತಿದೆ.
ಇಲ್ಲಿನ ಜನಕ್ಕೆ ನಿಯತ್ತು ಇಲ್ಲ, ನಿನ್ನ ಅಭಿಮಾನಿಗಳನ್ನ ಬಿಟ್ರೆ ನಿಂಗೆ ಒಳ್ಳೇದು ಬಯಸೋರು ಯಾರೂ ಇಲ್ಲ..!
ಒಟ್ಟಿನಲ್ಲಿ ಹೇಳಬೇಕೆಂದರೆ, ಇಂದ್ರಜಿತ್ ಲಂಕೇಶ್ ಅವರು ಹೇಳಿದಂತೆ, ಪತ್ರಕರ್ತರಿಗೆ ಖಂಡಿತವಾಗಿಯೂ ಯಾವುದೇ ರಕ್ಷಣೆ ಇಲ್ಲ. ಗಾಳಿ-ಮಳೆ, ಬಿಸಿಲು-ಛಳಿ ಲೆಕ್ಕಿಸದೇ ಕೆಲಸ ಮಾಡಬೇಕಾಗುತ್ತೆ. ಕಳ್ಳರು, ದರೋಡೆಕೋರರು ಹಾಗು ಕೆಲವೊಮ್ಮೆ ವಿಐಪಿಗಳು ಮಾಡುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಸಂದರ್ಭದಲ್ಲಿ ಪ್ರಾಣವನ್ನೂ ಲೆಕ್ಕಿಸದೇ ಕೆಲಸ ಮಾಡಬೇಕಾಗುತ್ತದೆ. ಆದರೆ, ಯಾವುದೇ ಬಾಡಿ ಗಾರ್ಡ್ ಇರುವುದಿಲ್ಲ. ಎಲ್ಲೋ ಕೆಲವರಿಗೆ ಹೊರತಪಡಿಸಿ ಉಳಿದವರಿಗೆ ಕಾರು ಸಹ ಇರುವುದಿಲ್ಲ.
ಜೈಲಿಂದ ಹೊರಗ್ ಬಂದ್ಮೇಲೆ ಕನ್ನಡ ಚಿತ್ರರಂಗ ಬಿಟ್ಬಿಡು: ದರ್ಶನ್‌ಗೆ ಹಿಂಗದಿದ್ದು ಯಾರು?
ಅಂಥ ಪರಿಸ್ಥಿತಿಯಲ್ಲೂ ಮೀಡಿಯಾದವರು ಕೆಲಸ ಮಾಡಲೇಬೇಕಾಗುತ್ತದೆ. ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧವೇ ಧ್ವನಿ ಎತ್ತಬೇಕಾಗಿರುವ ಕಾರಣಕ್ಕೆ ಸಮಾಜದಲ್ಲಿ ಹಲವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಬೇಕಾಗುತ್ತದೆ. ಆದರೆ, ಅನಿವಾರ್ಯವಾಗಿ ಹೊರಗೆ ಸುರಕ್ಷತೆ ಇಲ್ಲದಿದ್ದರೂ ಒಬ್ಬಂಟಿಯಾಗಿ, ಅಥವಾ ಕ್ಯಾಮೆರಾ ಜತೆ ಕೆಲಸ ಮಾಡಲೇಬೇಕಾಗುತ್ತದೆ. ಇಂದ್ರಜಿತ್ ಲಂಕೇಶ್ ಅವರು ಕೂಡ ರ್‍ಯಾಪಿಡ್ ರಶ್ಮಿ ಪ್ರಶ್ನೆಗೆ ಇದೇ ಆಂಗಲ್‌ನಲ್ಲಿ ಉತ್ತರ ನೀಡಿದ್ದಾರೆ ಎನ್ನಬಹುದು.
ಮೂಟೆ ಕಟ್ಟಿ ಕರ್ಕೊಂಡು ಬಂದಿಲ್ಲ ಕಿಡ್ನಾಪ್ ಅನ್ನೋಕೆ ಅವ್ನ ಅಲ್ವಾ; 'ಓಂ' ನಟ ಹರೀಶ್ ರಾಯ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.