ಸೀತಾರಾಮ ಕಲ್ಯಾಣ ನಟಿ ಭಾಗ್ಯಶ್ರೀ ಅವರಿಗೆ ಭಾಗಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಇರುವ ಅವರ ಫೋಟೋಗಳು ವೈರಲ್ ಆಗಿವೆ. ಇದನ್ನು ನೋಡಿ ಫ್ಯಾನ್ಸ್‌ಗೆ ಶಾಕ್ ಆಗಿದೆ. ಅಷ್ಟಕ್ಕೂ ನಟಿಗೆ ಆಗದ್ದೇನು?
1989ರಲ್ಲಿ ಬಿಡುಗಡೆಯಾದ ಬಾಲಿವುಡ್ನ ಮೈನೇ ಪ್ಯಾರ್ ಕಿಯಾ ಚಿತ್ರ ನೋಡಿದವರಿಗೆ ಸಲ್ಮಾನ್ ಖಾನ್ ಜೊತೆಗೆ ನಟಿಸಿರುವ ಭಾಗ್ಯಶ್ರೀ ನೆನಪಿರಲೇ ಬೇಕು. 35 ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರದ ಹಾಡುಗಳು ಎವರ್ಗ್ರೀನ್ ಆಗಿದೆ. ಈ ಚಿತ್ರವನ್ನು ಇಂದಿಗೂ ನೋಡುವವರು ಇದ್ದಾರೆ. ಮುದ್ದುಮುದ್ದಾದ ಮೊಗದ ಭಾಗ್ಯಶ್ರೀಗೆ ಆಗ 25ರ ಹರೆಯ. ಆಕರ್ಷಕ ನಗು, ಒಲವಿನ ಕಣ್ಣುಗಳಿಂದ ಅಪಾರ ಅಭಿಮಾನಿಗಳನ್ನು ಗಳಿಸಿರುವ ಭಾಗ್ಯಶ್ರೀ ಅವರಿಗೆ ಈಗ 55 ವರ್ಷ ವಯಸ್ಸು. ಅಷ್ಟಕ್ಕೂ ಬ್ಲಾಕ್‌ಬಸ್ಟರ್ ರೊಮ್ಯಾಂಟಿಕ್ ಸಿನಿಮಾ 'ಮೈನೆ ಪ್ಯಾರ್ ಕಿಯಾ' ಇಂದಿಗೂ ಸಿನಿ ಪ್ರಿಯರ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇದೆ. ಇದರಲ್ಲಿ ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ನಟನೆಗೆ ಅಭಿಮಾನಿಳು ಫಿದಾ ಆಗಿದ್ದರು. ಭಾಗ್ಯಶ್ರೀ ಅವರ ಆಕರ್ಷಕ ನಗು, ಒಲವಿನ ಕಣ್ಣುಗಳಲ್ಲಿರುವ ಪ್ರೇಮಭಾವ ಇಂದಿಗೂ ಮರೆಯದವರು ಹಲವರು. ಆದರೆ ಈ ಚಿತ್ರದ ಬಳಿಕ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಮೈನೆ ಪ್ಯಾರ್ ಕಿಯಾ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು.
ನಟಿ ಭಾಗ್ಯಶ್ರೀ ಮದುವೆ ನಂತರ ಬ್ರೇಕ್ ಪಡೆದಿದ್ದರು. ಆ ನಂತರ 2019ರಲ್ಲಿ ಮತ್ತೆ ಕನ್ನಡದ ಸೀತಾರಾಮ ಕಲ್ಯಾಣ ಸಿನಿಮಾ ಮೂಲಕ ವಾಪಸ್ ಆಗಿದ್ದಾರೆ. ನಂತರ ತೆಲುಗಿನ ಎರಡು ಸಿನಿಮಾಕ್ಕೆ ಸಹಿ ಮಾಡಿದ್ದಾರೆ. ಪ್ರಭಾಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ, ನಟಿ ಭಾಗ್ಯಶ್ರೀ ಅವರ ಫ್ಯಾನ್ಸ್‌ಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಅದೇನೆಂದರೆ, ನಟಿಯ ಹಣೆಗೆ 13 ಹೊಲಿಗೆಗಳನ್ನು ಹಾಕಲಾಗಿದೆ. ಪಿಕ್‌ಬಾಲ್ ಆಡುವಾಗ ಈ ದುರ್ಘಟನೆ ಸಂಭವಿಸಿದೆ. ನಟಿಯ ಹಣೆಯ ಮೇಲೆ ಆಳವಾದ ಗಾಯ ಆಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 13 ಹೊಲಿಗೆಗಳನ್ನು ಹಾಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅದರ ಹೊರತಾಗಿಯೂ ನಟಿಯು ಫೋಟೋದಲ್ಲಿ ನಗುತ್ತಿರುವುದನ್ನು ನೋಡಬಹುದಾಗಿದೆ.
ಅಮೆಜಾನ್ ಗಿಫ್ಟ್ ವೋಚರ್‌ಗೆ ಆಸೆ ಪಟ್ಟು 51 ಲಕ್ಷ ರೂ. ಕಳೆದುಕೊಂಡ ಮಹಿಳೆ! ಅಷ್ಟಕ್ಕೂ ಆಗಿದ್ದೇನು?
ಇನ್ನು ಭಾಗ್ಯಶ್ರೀ ಕುರಿತು ಹೇಳುವುದಾದರೆ, ಅವರಿಗೆ ಇಬ್ಬರು ಮಕ್ಕಳು. ಓರ್ವ ಪುತ್ರ, ಓರ್ವ ಪುತ್ರಿ. ಭಾಗ್ಯಶ್ರೀ ಅವರಷ್ಟೇ ಸುಂದರವಾಗಿರುವ ಅವರ ಪುತ್ರಿ ಅವಂತಿಕಾ ದಾಸಾನಿ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಮ್ಯೂಸಿಕಲ್ ಲವ್ ಸ್ಟೋರಿಗೆ ಹೆಸರಾಗಿರುವ ನಿರ್ದೇಶಕ ನಾಗಶೇಖರ್ ಅವರ ಹೊಸ ಸಿನಿಮಾದಲ್ಲಿ ಭಾಗ್ಯಶ್ರೀ ಪುತ್ರಿ ನಾಯಕಿಯಾಗಲಿದ್ದಾರೆ. ಅಂದಹಾಗೆ, ಅವಂತಿಕಾ ದಾಸಾನಿ ಅವರು ಲಂಡನ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ವಾಪಸಾಗಿದ್ದಾರೆ. ಮಗ ಅಭಿಮನ್ಯು ದಾಸಾನಿ. ಇವರು ಕೂಡ ಇದಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಹೆಸರು ಮಾಡಿದ್ದಾರೆ.
ಹಲವಾರು ವರ್ಷಗಳ ಬ್ರೇಕ್ ಬಳಿಕ ತಮ್ಮ ಚಿತ್ರರಂಗದ ಎಂಟ್ರಿ ಕುರಿತು ಭಾಗ್ಯಶ್ರೀ ಮಾತನಾಡಿದ್ದರು. ಮತ್ತೆ ಅಭಿನಯಿಸಲು ಪ್ರಾರಂಭಿಸಿದ್ದೇನೆ. ಇದು ತುಂಬಾ ಸಂತೋಷ ತರುತ್ತಿದೆ ಎಂದಿದ್ದರು. ಅಷ್ಟಕ್ಕೂ ಇವರು ಇಷ್ಟೆಲ್ಲಾ ಫೇಮಸ್ ಆಗಲು ಕಾರಣವೇ ಅವರ ಮೊದಲ ಚಿತ್ರ ಮೈನೆ ಪ್ಯಾರ್ ಕಿಯಾ. ಈ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟಿದ್ದ ಭಾಗ್ಯಶ್ರೀಗೆ ಮೊದಲ ಸಿನಿಮಾನೇ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತು. ಆ ನಂತರ ಕನ್ನಡದ ಅಮ್ಮವರ ಗಂಡ ಸಿನಿಮಾ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ತೆಲುಗು, ಭೋಜಪುರಿ, ಮರಾಠಿ ಸಿನಿಮಾಗಳು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಬೋಲ್ಡ್ ಬ್ಯೂಟಿಯಿಂದ ಭಿಕ್ಷುಕಿಯವರೆಗೆ... ಮನದ ಮಾತು ಹೀಗೆ ತೆರೆದಿಟ್ಟ ಬಿಗ್ಬಾಸ್ ನೀತು ವನಜಾಕ್ಷಿ...