
ಪತ್ರಕರ್ತ, ನಟ ಯತಿರಾಜ್ ಕೊರೋನಾ ಸಂಕಷ್ಟಶುರುವಾದ 18 ಕಿರು ಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದಾರೆ. ಕಲಾವಿದ ಹೆಸರಿನ ಅಭಿನಯ ತರಬೇತಿ ಸಂಸ್ಥೆ ಮೂಲಕ ಈ ಚಿತ್ರಗಳನ್ನು ರೂಪಿಸಿದ್ದು, ಇದೀಗ ‘ಆರಾಧ್ಯ’ ಹೆಸರಿನ 18ನೇ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ.
‘ಕಾಡಿದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅದನ್ನು ಸಿನಿಮಾ ಮೂಲಕ ಹೇಳಬೇಕು ಎಂದು ಯೋಚನೆ ಮಾಡಿದ ಪ್ರಯತ್ನದ ಫಲವೇ ಈ ಕಿರುಚಿತ್ರಗಳು. ಪ್ರತಿಯೊಂದು ಕಿರುಚಿತ್ರಕ್ಕೂ ನೈಜ ಘಟನೆಗಳೇ ಸ್ಫೂರ್ತಿ ಮತ್ತು ಆಧಾರ. ಈ ಪೈಕಿ ಆರಾಧ್ಯ ಕಿರುಚಿತ್ರ ನನಗೆ ಹೆಚ್ಚು ಕಾಡಿದೆ’ ಎನ್ನುತ್ತಾರೆ ಯತಿರಾಜ್. ಬೇಬಿ ಆರಾಧ್ಯ, ಅಂಜಲಿ, ಶಾಂತಕುಮಾರ್ ‘ಆರಾಧ್ಯ’ ಚಿತ್ರದಲ್ಲಿ ನಟಿಸಿದ್ದು, ಜೀವನ್ ಛಾಯಾಗ್ರಾಹಣ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.