ರಾಘವೇಂದ್ರ ಸ್ಟೋರ್ಸ್ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಜಗ್ಗೇಶ್ ನಟನೆ, ಸಂತೋಷ್ ಆನಂದರಾಮ್ ನಿರ್ದೇಶನಕ್ಕೆ ಹೊಂಬಾಳೆ ಬಂಡವಾಳ.
ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ನಿರ್ಮಾಣದ 12ನೇ ಚಿತ್ರದ ಹೆಸರು ಘೋಷಣೆಯಾಗಿದೆ. ಸಂತೋಷ್ ಆನಂದರಾಮ್ ನಿರ್ದೇಶನದ, ಜಗ್ಗೇಶ್ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದ ಹೆಸರು ‘ರಾಘವೇಂದ್ರ ಸ್ಟೋರ್ಸ್’.
ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದ್ದು, ಜಗ್ಗೇಶ್ ಅವರು ಅಡುಗೆ ಭಟ್ಟನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಿನ್ಸ್ 1972 ಎಂದು ಟ್ಯಾಗ್‌ಲೈನ್ ಇರುವುದರಿಂದ ಇದೊಂದು ಹೋಟೆಲ್ ಕತೆ ಆಧರಿಸಿದ ಸಿನಿಮಾ ಇರಬಹುದು ಎನ್ನಲಾಗಿದೆ. ಚಿತ್ರದ ನಿರ್ದೇಶಕ ಸಂತೋಶ್ ಆನಂದ್‌ರಾಮ್, ‘ಭಾವನೆ, ಮನೋರಂಜನೆ ಮತ್ತು ಸಂವೇದನೆಯ ಪಾಕಶಾಲೆ ಈ ರಾಘವೇಂದ್ರ ಸ್ಟೋರ್ಸ್. ಜಗ್ಗೇಶ್ ಇದುವರೆಗೆ ಮಾಡಿರುವ ಪಾತ್ರಕ್ಕಿಂತ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ’ ಎನ್ನುತ್ತಾರೆ.
ಮಂಗಳೂರು ಕನ್ನಡ ಕಲಿಯುತ್ತಿದ್ದೇನೆ; 'ಕಾಂತಾರ' ಚಿತ್ರದ ನಾಯಕಿ ಸಪ್ತಮಿ ಗೌಡ ಸಂದರ್ಶನನಿರ್ಮಾಪಕ ವಿಜಯ್ ಕಿರಗಂದೂರು, ‘ಈ ಸಿನಿಮಾದ ಮೂಲಕ ಸಂತೋಷ್ ಆನಂದ್‌ರಾಮ್ ಕನ್ನಡ ಚಿತ್ರರಂಗಕ್ಕೆ ಹೊಸ ರುಚಿ ಸವಿಯಲು ಕೊಡುತ್ತಾರೆ ಎಂಬ ನಂಬಿಕೆ ಇದೆ’ ಎಂದಿದ್ದಾರೆ. ನವೆಂಬರ್ 22ರಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.
‘ರಾಘವೇಂದ್ರ ಸ್ಟೋರ್ಸ್’ ಮೂಲಕ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕನ್ನಡ ಚಲನಚಿತ್ರ ರಂಗಕ್ಕೆ ಹೊಸ ರುಚಿ ಸವಿಯಲು ನೀಡುತ್ತಾರೆ ಎಂಬ ನಂಬಿಕೆ ನನಗಿದೆ. ಹಿರಿಯ ನಟ ಜಗ್ಗೇಶ್ ನಮ್ಮೊಂದಿಗೆ ಸೇರಿಕೊಂಡಿದ್ದು ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕನಿಗೆ ಹಾಸ್ಯದ ಕಚಗುಳಿ ಇಡುವುದು ಖಂಡಿತ. https://t.co/9MviJmSTpm
— Vijay Kiragandur (@VKiragandur)