KGF Yash: ಪರಿಸ್ಥಿತಿ ಊಹಿಸಿಯೇ ಕೆಜಿಎಫ್‌ 2 ಬಿಡುಗಡೆ ದಿನಾಂಕ ನಿಗದಿ

By Kannadaprabha News  |  First Published Jan 12, 2022, 9:53 AM IST

‘ನಾವು ಏಪ್ರಿಲ್‌ 14ರಂದು ಕೆಜಿಎಫ್‌ 2 ಬಿಡುಗಡೆ ಮಾಡುತ್ತೇವೆ ಅಂತ ದಿನಾಂಕ ಪ್ರಕಟಿಸುವ ಹೊತ್ತಿಗಾಗಲೇ ಈಗಿನ ಸನ್ನಿವೇಶವನ್ನು ಊಹಿಸಿದ್ವಿ. ಮುಂದಾಲೋಚನೆ ಮಾಡಿ ಸಿನಿಮಾ ಬಿಡುಗಡೆಗೆ ಸೇಫ್‌ ಡೇಟ್‌ ಫಿಕ್ಸ್‌ ಮಾಡಿದ್ವಿ. ಕೆಜಿಎಫ್‌ ಬಿಡುಗಡೆ ಬಗ್ಗೆ ನಮಗೆ ಸ್ಪಷ್ಟತೆ ಇದೆ’ ಎಂದು ನಟ ಯಶ್‌ ಹೇಳಿದ್ದಾರೆ.


‘ನಾವು ಏಪ್ರಿಲ್‌ 14ರಂದು 'ಕೆಜಿಎಫ್‌ 2' (KGF 2) ಬಿಡುಗಡೆ ಮಾಡುತ್ತೇವೆ ಅಂತ ದಿನಾಂಕ ಪ್ರಕಟಿಸುವ ಹೊತ್ತಿಗಾಗಲೇ ಈಗಿನ ಸನ್ನಿವೇಶವನ್ನು ಊಹಿಸಿದ್ವಿ. ಮುಂದಾಲೋಚನೆ ಮಾಡಿ ಸಿನಿಮಾ ಬಿಡುಗಡೆಗೆ ಸೇಫ್‌ ಡೇಟ್‌ ಫಿಕ್ಸ್‌ ಮಾಡಿದ್ವಿ. ಕೆಜಿಎಫ್‌ ಬಿಡುಗಡೆ ಬಗ್ಗೆ ನಮಗೆ ಸ್ಪಷ್ಟತೆ ಇದೆ’ ಎಂದು ನಟ ಯಶ್‌ (Yash) ಹೇಳಿದ್ದಾರೆ.

ಇಂಗ್ಲಿಷ್‌ ವೆಬ್‌ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ (Interview) ಯಶ್‌ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ‘ನಾವು ಈಗಲೂ ಏಪ್ರಿಲ್‌ 14ರಂದು ಸಿನಿಮಾ ರಿಲೀಸ್‌ ಮಾಡುತ್ತೇವೆ ಅನ್ನುವ ಮಾತಿಗೆ ಬದ್ಧರಾಗಿದ್ದೇವೆ. ಈಗಿನ್ನೂ ಜನವರಿಯಲ್ಲಿದ್ದೇವೆ, ಏಪ್ರಿಲ್‌ ಹೊತ್ತಿಗೆ ಕೋವಿಡ್‌ ಕೇಸ್‌ಗಳೆಲ್ಲ ನಿಯಂತ್ರಣಕ್ಕೆ ಬಂದು ಪರಿಸ್ಥಿತಿ ಸುಧಾರಿಸುವ ವಿಶ್ವಾಸ ಇದೆ. ಸಿನಿಮಾದ ಟೀಸರ್‌ (Teaser), ಟ್ರೈಲರ್‌ (Trailer) ಇತ್ಯಾದಿ ಸೂಕ್ತ ಸಮಯದಲ್ಲಿ ರಿಲೀಸ್‌ ಮಾಡುತ್ತೀವಿ.

Tap to resize

Latest Videos

ಈಗಲೇ ಅದನ್ನೆಲ್ಲ ರಿಲೀಸ್‌ ಮಾಡೋದು ತುಂಬ ಬೇಗ ಆಗುತ್ತೆ. ಈ ಸಿನಿಮಾ ಮೂಲಕ ನಾವು ಗರಿಷ್ಠ ಜನರನ್ನು ತಲುಪಬೇಕು. ಅದು ನಮ್ಮ ಗುರಿ. ನಾವು ಉತ್ತಮ ಕಂಟೆಂಟ್‌ ಕೊಡುತ್ತೇವೆ ಅನ್ನುವ ಕಾರಣಕ್ಕೋಸ್ಕರ ಜನ ನಮ್ಮ ಸಿನಿಮಾಗಾಗಿ ಕಾಯ್ತಿದ್ದಾರೆ. ಸದ್ಯ 'ಕೆಜಿಎಫ್‌ 2' ಅನ್ನು ಪ್ಯಾನ್‌ ಇಂಡಿಯಾ ಸಿನಿಮಾ ಲೆವೆಲ್‌ಗೆ ಸೀಮಿತಗೊಳಿಸೋಕೆ ನನಗೆ ಮನಸ್ಸಿಲ್ಲ. 

ಕಲಿಯೋಕೆ ದುಡ್ಡಿಲ್ಲದೆ ಕಲಿಕೆ ನಿಲ್ಲಿಸಿದ ಹುಡುಗ ಜನರ ನೆಚ್ಚಿನ 'ರಾಕಿ ಭಾಯ್'

ಅದನ್ನು ಗ್ಲೋಬಲ್‌ ಲೆವೆಲ್‌ ಸಿನಿಮಾ ಅಂತ ಕರೀತೀನಿ. ವಿಶ್ವಮಟ್ಟದಲ್ಲಿ ಸಿನಿಮಾ ಕೊಂಡೊಯ್ಯಲು ದಾರಿಗಳಿವೆ. ಅವನ್ನು ನಾವು ಕಂಡುಕೊಳ್ಳಬೇಕಷ್ಟೇ. ಆ ನಿಟ್ಟಿನಲ್ಲಿ ಇದು ನಮ್ಮ ಮೊದಲ ಹೆಜ್ಜೆ ಅನ್ನಬಹುದು. ಸಿನಿಮಾ ಜಗತ್ತಿನಲ್ಲಿ ಪ್ರೆಶರ್‌ ಅನ್ನೋದು ಯಾವಾಗಲೂ ಪ್ಲೆಜರ್‌ ಆಗಿರುತ್ತೆ. ಒತ್ತಡದಲ್ಲೇ ಖುಷಿ ಕಾಣುವ ಜನ ನಾವು. ಗೆಲುವಿಗಾಗಿ ನಮ್ಮ ಹೋರಾಟ ಸದಾ ಜೀವಂತವಾಗಿರುತ್ತದೆ’ ಎಂದಿದ್ದಾರೆ.

ಇನ್ನು ಯಶ್‌ ಇತ್ತೀಚೆಗಷ್ಟೇ ತಮ್ಮ 36ನೇ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡಿದ್ದಾರೆ. ಕೋವಿಡ್‌ (Covid) ಹಿನ್ನೆಲೆಯಲ್ಲಿ ಕೇವಲ ಕುಟುಂಬ ಸದಸ್ಯರೊಂದಿಗೆ ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಪತ್ನಿ ರಾಧಿಕಾ ಪಂಡಿತ್ (Radhika Pandit) ಹಾಗೂ ಇಬ್ಬರು ಮಕ್ಕಳೊಂದಿಗೆ  ಹುಟ್ಟುಹಬ್ಬ ಆಚರಣೆಯ ಫೋಟೊಗಳನ್ನು ಯಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ವಿವಿಧ ಕ್ಷೇತ್ರದ ಗಣ್ಯರು ಕೂಡ ಯಶ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. 

ಯಶ್ ಹುಟ್ಟುಹಬ್ಬದ ಪ್ರಯುಕ್ತ 'ಕೆಜಿಎಫ್ 2' ಚಿತ್ರತಂಡ ಸ್ಪೆಷಲ್ ಪೋಸ್ಟರ್‌ನ್ನು (Poster) ಬಿಡುಗಡೆ ಮಾಡಿದ್ದಾರೆ. ಪೋಸ್ಟರ್‌ನಲ್ಲಿ ಯಶ್ ಡೆಡ್ಲಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ 'ಎಚ್ಚರ ಮುಂದೆ ಅಪಾಯವಿದೆ' ಎಂಬ ಬರಹವಿದೆ. ಈ ಪೋಸ್ಟರನ್ನು ಹೊಂಬಾಳೆ ಸಂಸ್ಥೆ (Hombale Films) ಹಾಗೂ 'ಕೆಜಿಎಫ್‌' ನಿರ್ದೇಶಕ ಪ್ರಶಾಂತ್‌ ನೀಲ್‌ (Prashanth Neel) ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಹ್ಯಾಪ್ ಬರ್ತ್ ಡೇ ಮೈ ರಾಕಿ ಬಾಯ್ ಎಂದು ಪ್ರಶಾಂತ್ ನೀಲ್ ಬರೆದುಕೊಂಡಿದ್ದಾರೆ. 

Yash Birthday: ಹುಟ್ಟುಹಬ್ಬಕ್ಕೆ ಶುಭಕೋರಿದ ಹೊಂಬಾಳೆ ಫಿಲಂಸ್, ಹೊಸ ಪೋಸ್ಟರ್

ಯಶ್ ಅಭಿಮಾನಿಗಳು (Fans) 'ಕೆಜಿಎಫ್ 2' ಸಿನಿಮಾದ ಹೊಸ ಪೋಸ್ಟರ್‌ನ್ನು ಟ್ವಿಟ್ಟರ್‌ನಲ್ಲಿ (Twitter) ಟ್ರೆಂಡಿಂಗ್ ಮಾಡಿದ್ದು, ಯಶ್‌ಬಾಸ್ ಬರ್ತ್‌ಡೇ ಎನ್ನುವ ಆ್ಯಶ್ ಟ್ಯಾಗ್ ಮಾಡಿದ್ದಾರೆ. ಜೊತೆಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ, ಗುಜರಾತ್‌ನಿಂದ ಬಂಗಾಳದವರೆಗೂ ಪ್ಯಾನ್‌ ಇಂಡಿಯಾ ಟ್ವೀಟರ್ ಟ್ರೆಂಡಿಂಗ್ (Trending) ಮಾಡಿದ್ದರು.

'ಕೆಜಿಎಫ್ 2' ಚಿತ್ರಕ್ಕೆ ರವಿ ಬಸ್ರೂರ್ (Ravi Basrur) ಸಂಗಿತ ಸಂಯೋಜನೆಯಿದ್ದು, ಪ್ರಕಾಶ್ ರಾಜ್ (Prakash Raj), ತೆಲುಗು ನಟ ರಾವ್ ರಮೇಶ್ (Rao Ramesh) ಮತ್ತು ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಚಿತ್ರದ ಆಕರ್ಷಣೆಯಾಗಿದ್ದಾರೆ. ಅಧೀರನಾಗಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ರಮೀಕಾ ಸೇನ್‌ ಪಾತ್ರದಲ್ಲಿ ಬಾಲಿವುಡ್‌ ನಟಿ ರವೀನಾ ಟಂಡನ್​ (Raveena Tandon) ಅಭಿನಯಿಸಿದ್ದಾರೆ. ಯಶ್‌ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ (SriNidhi Shetty) ನಟಿಸಿದ್ದಾರೆ. 

click me!