
ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Rocking Star Yash) ಅವರ ಅಮ್ಮ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮೊನ್ನೆಯಷ್ಟೇ ಸಿನಿಮಾ ನಿರ್ಮಾಣ ಸಂಸ್ಥೆಗೆ ಚಾಲನೆ ಕೊಟ್ಟಿದ್ದಾರೆ. ಸದ್ಯದಲ್ಲೇ ಅವರು ಒಂದು ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎಂಬುದೂ ಸಹ ಬಹಿರಂಗವಾಗಿದೆ. ಅ ಚಿತ್ರಕ್ಕೆ ನಟ ಪೃಥ್ವಿ ಅಂಬಾರ್ ನಾಯಕರು ಎಂಬ ಸಂಗತಿ ಕೂಡ ಈಗ ಜಗಜ್ಜಾಹೀರಾಗಿದೆ.
ನಟ ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡ ಧಾರಾವಾಹಿಯಲ್ಲಿ ಸಣ್ಣಪುಟ್ಟ ಪಾತ್ರಗಳ ಮೂಲಕ ಬಣ್ಣ ಹಚ್ಚಿ, ಬಳಿಕ ಕನ್ನಡ ಸಿನಿಮಾಗಳಲ್ಲಿ ಹೀರೋ ಆದವರು. ಸದ್ಯ ಭಾರತದ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರೋದು ಎಲ್ಲರಿಗೂ ಗೊತ್ತು. ಈಗ ಯಶ್ ಅಮ್ಮ ಪುಷ್ಪಾ ಸರದಿ, ಹೌದು ಅವರು ಸ್ಯಾಂಡಲ್‌ವುಡ್ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ, ನಿರ್ಮಾಪಕಿಯಾಗಿ ಬಂದಿದ್ದಾರೆ.
ಯಶ್ ಸ್ಟಾರ್ ಆಗಿದ್ದಾಯ್ತು, ಈಗ 'ರಾಕಿ' ಅಮ್ಮ ಪುಷ್ಪಾ ಚಿತ್ರರಂಗಕ್ಕೆ ಬರ್ತಿದಾರೆ; ದಾರಿಬಿಡಿ..!
ತಾಯಿ ಪುಷ್ಪಾ ಅವರು 'ನಿರ್ಮಾಪಕಿ' ಆಗುತ್ತೇನೆ ಎಂದಾಗ, 'ನೀವು ಆರಾಮವಾಗಿರಿ, ಯಾಕೆ ಇವೆಲ್ಲಾ..' ಎಂದಿದ್ದರಂತೆ ಮಗ ಯಶ್. ಆದರೆ, 'ಡ್ರೈವರ್ ಮಗ ಹೀರೋ ಆಗಿ ಗೆದ್ದಿದ್ದಾನೆ ಎಂದ ಮೇಲೆ ಡ್ರೈವರ್ ಪತ್ನಿ ಕೂಡ ನಿರ್ಮಾಪಕಿಯಾಗಿ ಗೆಲ್ಲುತ್ತಾರೆ ಎಂಬ ನಂಬಿಕೆ ಇದೆ ಎಂದು ಯಶ್ ತಾಯಿ ಪುಷ್ಪಾ ಹೇಳಿದ್ದಾರೆ. ಈ ಸಂಗತಿಯನ್ನು ಪುಷ್ಪಾ ಅವರು ಅದೆಷ್ಟು ಆತ್ಮವಿಶ್ವಾಸದಿಂದ ಹೇಳಿದ್ದಾರೆ ಎಂದರೆ, ಎದುರಿಗಿದ್ದವರು ನಿರ್ಮಾಪಕಿ ಪುಷ್ಪಾ ಅವರನ್ನು ಕಲ್ಪಿಸಿಕೊಂಡು ಒಂದು ಕ್ಷಣ ಮೈಮರೆತಿದ್ದಾರೆ.
ಹೌದು, ಪೃಥ್ವಿ ಅಂಬಾರ್ ನಾಯಕತ್ವದಲ್ಲಿ ಯಶ್ ಅಮ್ಮ ಪುಷ್ಪಾರ ಸಿನಿಮಾ ನಿಮಾರ್ಣದ ಜರ್ನಿ ಪ್ರಾರಂಭವಾಗಲಿದೆ. ಆ ಚಿತ್ರಕ್ಕೆ ನಿರ್ದೇಶಕರು ಯಾರು, ಎಲ್ಲಿ ಶೂಟಿಂಗ್, ಈ ಎಲ್ಲಾ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಅನಿರೀಕ್ಷಿತ ಎಂಬಂತೆ, ಯಶ್ ಅಮ್ಮ ಪುಷ್ಪಾ ಸಿನಿಮಾ ನಿರ್ಮಾಣಕಾರ್ಯ ಶುರುಮಾಡಿದ್ದಾರೆ. ಸೊಸೆ ರಾಧಿಕಾ ಪಂಡಿತ್ ನಿರ್ಮಾಪಕಿಯಾಗಿ ಅತ್ತೆ ಪುಷ್ಪಾರ ಮಾರ್ಗದರ್ಶನ ತೆಗೆದುಕೊಳ್ಳಬಹುದು ಎಂದು ಹಲವರು ಮಾತನಾಡುತ್ತಿದ್ದಾರೆ. ಆದರೆ, ಈಗ ಸ್ವತಃ ಪುಷ್ಪಾ ಅವರೇ ನಿರ್ಮಾಪಕಿ ಪಟ್ಟ ಅಲಂಕರಿಸಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದಂತೆ ನಟಿಸಿ ಮತ್ತೊಂದು ವಿವಾದಕ್ಕೆ ಕೈ ಹಾಕಿದ್ರಾ ಜಾವೇದ್ ಅಖ್ತರ್..?!
ನಟ ಯಶ್ ಅವರ ಅಮ್ಮ ಪುಷ್ಪಾ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬಂದಿದ್ದಾರೆ. ಪುಷ್ಪಾರ ಹೊಸ ಪ್ರೊಡಕ್ಷನ್ ಹೌಸ್‌ಗೆ 'ಪಿಎ' (PA) ಎಂದು ನಾಮಕರಣ ಮಾಡಲಾಗಿದೆ. ಯಶ್ ಅಮ್ಮನ ನಿರ್ಮಾಣ ಸಂಸ್ಥೆ ಹೆಸರು PA. ಅಂದ್ರೆ 'ಪುಷ್ಪಾ ಹಾಗೂ ಅರುಣ್ ಕುಮಾರ್ ಪ್ರೊಡಕ್ಷನ್ ಹೌಸ್' ಅಂತ. ಸದ್ಯ ಈ ವಿಷಯ ತಿಳಿದ ಯಶ್ ಅಭಿಮಾನಿಗಳು ಖುಷಿಯಿಂದ ಕುಣಿದು ಕುಪ್ಪಳಿಸತೊಡಗಿದ್ದಾರೆ. ಆಕಾಶದಲ್ಲಿ ಹಾರಾಡತೊಡಗಿದ್ದಾರೆ. ಏಕೆಂದರೆ, ನಟ ಯಶ್ ಅವರು ಈಗಾಗಲೇ 'ರಾಮಾಯಣ' ಚಿತ್ರಕ್ಕೆ ನಿರ್ಮಾಪಕ ಆಗಿದ್ದಾರೆ. ಇದೀಗ, ಅಮ್ಮನ ನಿರ್ಮಾಣ ಸಂಸ್ಥೆ ಸಹ ಹುಟ್ಟಿಕೊಂಡಿದೆ. ಯಶ್‌ಗೆ ಇನ್ನೇನು ಬೇಕು ಹೇಳಿ..?!
ಇತ್ತೀಚೆಗೆ, ಅಂದ್ರೆ 29 ಏಪ್ರಿಲ್ 2025ರ ಮಂಗಳವಾರ ಬೆಳಿಗ್ಗೆ ಈ ಪಿಎ ಪ್ರೊಡಕ್ಷನ್ ಹೌಸ್‌ನ ಮೊದಲ ಚಿತ್ರದ ಘೋಷಣೆ ಆಗಿದೆ. ಈ ಚಿತ್ರದಲ್ಲಿ 'ದಿಯಾ' ಸಿನಿಮಾದ ಖ್ಯಾತಿಯ ನಟ ಪೃಥ್ವಿ ಅಂಬಾರ್ ನಾಯಕರಾಗಿ ನಟಿಸಲಿದ್ದಾರೆ. ಕಾವ್ಯಾ ಶೈವ, ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರವನ್ನು ಉತ್ತಮ ಕಥೆಯೊಂದಿಗೆ ಸಿದ್ಧಪಡಿಸಲಿದ್ದು, ಮೊಟ್ಟಮೊದಲ ಚಿತ್ರವನ್ನು 'ಧಾಂಧೂಂ' ಎನ್ನುವಂತೆ ನಿರ್ಮಾಣ ಮಾಡಲು ಯಶ್ ಪೋಷಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ವಿಷ್ಣುವರ್ಧನ್ ಮಾಡಿದ್ದು ಇದೊಂದೇ ತಪ್ಪು; ಡಾ ರಾಜ್ ವಿಷ್ಯದಲ್ಲಿ ಸಮಸ್ಯೆ ಆಗಿದ್ದಕ್ಕೆ ಅದೊಂದೇ ಕಾರಣ!?
ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಯಶ್ ಪೋಷಕರು, ಅಂದರೆ ರಾಕಿಂಗ್ ಸ್ಟಾರ್ ಅಮ್ಮ ಪುಷ್ಪಾ ಅವರು ಸ್ವಂತ ನಿರ್ಮಾಣ ಸಂಸ್ಥೆ ಓಪನ್ ಮಾಡುತ್ತಿರುವ ಸುದ್ದಿ ಸಕತ್ ವೈರಲ್ ಆಗಿದೆ. ಸದ್ಯ ಟಾಕ್ಸಿಕ್ ಹೆಸರಿನ ಪ್ಯಾನ್ ವರ್ಲ್ಡ್ ಸಿನಿಮಾ ಹಾಗೂ ರಾಮಾಯಣ ಹೆಸರಿನ ಬಿಗ್ ಬಜೆಟ್ ಬಾಲಿವುಡ್ ಸಿನಿಮಾಗಳಲ್ಲಿ ಯಶ್ ನಟಿಸುತ್ತಿದ್ದಾರೆ. ರಾಮಾಯಣ ಚಿತ್ರಕ್ಕೆ ಯಶ್ ಬಂಡವಾಳ ಹೂಡಿದ್ದು, ಈ ಮೂಲಕ ಅವರು ಈಗಾಗಲೇ ನಿರ್ಮಾಪಕ ಎಂಬ ಪಟ್ಟ ಗಿಟ್ಟಿಸಿದ್ದಾರೆ. ಯಶ್ ಪತ್ನಿ ರಾಧಿಕಾ ಪಂಡಿತ್ ಕೂಡ ಸಿನಿಮಾ ನಿರ್ಮಾಪಕಿ ಆಗಲಿದ್ದಾರೆ ಎಂದು ಕೆಲವು ವರ್ಷಗಳ ಹಿಂದೆ ಹೇಳಲಾಗುತ್ತಿತ್ತು. ಆದರೆ ಈಗ ಯಶ್ ಅಮ್ಮ ಪುಷ್ಪಾ ಅವರು 'ಪಿಎ' ಪ್ರೊಡಕ್ಷನ್ ಹೌಸ್ ತೆರೆದಿದ್ದಾರೆ.
ಪೃಥ್ವಿ ಅಂಬರ್ ನಟನೆಯಲ್ಲಿ, ಯಶ್ ಅಮ್ಮ ಪುಷ್ಪಾ ನಿರ್ಮಾಣ ಸಂಸ್ಥೆಯಿಂದ ಹೊರಬರಲಿರುವ ಸಿನಿಮಾ ಹೆಸರು ಏನು ಎಂಬುದು ಇನ್ನಷ್ಟೇ ಬಹಿರಂಗ ಆಗಬೇಕಿದೆ. ಯಶ್ ಅಮ್ಮನ ಮೊದಲ ಸಿನಿಮಾ ಘೋಷಣೆ ಆಗಿರುವ ಸುದ್ದಿ ಈಗ ಕರ್ನಾಟಕದ ತುಂಬಾ ಬಿರುಗಾಳಿಯಂತೆ ಹಬ್ಬತೊಡಗಿದೆ. ಮಿಕ್ಕ ಮಾಹಿತಿ ಮುಂದೆ ಬಹಿರಂಗವಾಗಲಿದ್ದು ಅದಕ್ಕಾಗಿ ಯಶ್ ಅಭಿಮಾನಿಗಳು ಕಾಯುತ್ತಿದ್ದಾರೆ. ಸಿನಿಮಾ ಮುಹೂರ್ತ ಯಾವಾಗ, ಶೂಟಿಂಗ್ ಸ್ಪಾಟ್ ಎಲ್ಲಿ? ಎಲ್ಲವೂ ಟೈಮ್ ಬಂದಾಗ ಗೊತ್ತಾಗಲಿದೆ, ಸ್ವಲ್ಪ ಕಾಯಬೇಕು ಅಷ್ಟೇ!
ನನ್ನ ಮೂಗು-ಮುಖದ ಬಗ್ಗೆ ಕಾಮೆಂಟ್ ಮಾಡ್ತಾರೆ; ತೀರಾ ಮನಸ್ಸಿಗೆ ತಗೊಂಡ್ರೆ ಬಿಟ್ಟು ಓಡಿ ಹೋಗ್ಬೇಕು ಅಷ್ಟೇ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.