ಮೃತ ಪತ್ನಿ ಸ್ಪಂದನಾ ಅವರ ಬಗ್ಗೆ ಮಾತನಾಡುತ್ತಾ ಭಾವುಕರಾದರು ನಟ ವಿಜಯ್ ರಾಘವೇಂದ್ರ. ಅವರು ಹೇಳಿದ್ದೇನು?
ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಸಾವನ್ನಪ್ಪಿ ಒಂಬತ್ತು ತಿಂಗಳಾಗುತ್ತಾ ಬಂದಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ, ಸ್ಪಂದನಾ ಅವರು ತಮ್ಮ ಸ್ನೇಹಿತೆಯರೊಟ್ಟಿಗೆ ಬ್ಯಾಂಕಾಕ್ (Bangkok) ಹೋಗಿದ್ದಾಗ ಅವರಿಗೆ ಹೃದಯ ಸ್ತಂಭನವಾಗಿ ನಿಧನರಾಗಿದ್ದಾರೆ. ಈ ಅಕಾಲಿಕ ಸಾವು ಎಲ್ಲರಿಗೂ ಆಘಾತವನ್ನು ಉಂಟು ಮಾಡಿತ್ತು. ಇದು ಭಾರಿ ಮಟ್ಟದಲ್ಲಿ ಸುದ್ದಿಯೂ ಆಗಿತ್ತು. ಪತ್ನಿಯನ್ನು ಕಳೆದುಕೊಂಡಿರುವ ನಟ ವಿಜಯ ರಾಘವೇಂದ್ರ ಅವರು ಇಂದಿಗೂ, ಪತ್ನಿಯ ನೆನಪುಗಳನ್ನು ಮೆಲುಕು ಹಾಕುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಪತ್ನಿ ಜೊತೆಗಿನ ಸವಿ ನೆನಪುಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ನಟ, ಆ್ಯಂಕರ್ ರ್‍ಯಾಪಿಡ್ ರಶ್ಮಿ ಅವರ ಜೊತೆಗಿನ ಸಂದರ್ಶನದಲ್ಲಿ ಆ ದಿನಗಳನ್ನು ನೆನಪು ಮಾಡಿದ್ದಾರೆ.
ಒಂದು ಕ್ಷಣಕ್ಕೆ ಒಂದು ಹೆಜ್ಜೆ ಅನ್ನುವ ರೀತಿಯ ಜೀವನ ನನ್ನದು. ಬದುಕಿನಲ್ಲಿ ಹೀಗೆಯೇ ಆಗುತ್ತದೆ ಎನ್ನುವುದು ಯಾರಿಗೂ ತಿಳಿದಿರುವುದೇ ಇಲ್ಲ. ಆದರೆ ಒಮ್ಮೊಮ್ಮೆ ದಿಢೀರನೆ ಆಗುವ ಘಟನೆಗಳು ಮನಸ್ಸನ್ನು ಎಷ್ಟು ಜರ್ಜರಿತರನ್ನಾಗಿ ಮಾಡುತ್ತದೆಯೋ ಅಷ್ಟೇ ಜೀವನವನ್ನು ಗಟ್ಟಿ ಕೂಡ ಮಾಡುತ್ತದೆ. ನನ್ನ ಲೈಫ್ನಲ್ಲಿಯೂ ಹಾಗೆಯೇ ಆಗಿಬಿಟ್ಟತು. ಜೀವನ ಸರಿಯಾಗಿ ಹೋಗುತ್ತಿರುವ ಸಂದರ್ಭದಲ್ಲಿ ಒಂದೇ ಸಲಕ್ಕೆ ಭಗವಂತ ಶಾಕ್ ಕೊಟ್ಟು ಇಡೀ ಬದುಕನ್ನೇ ಅಲ್ಲಾಡಿಸಿಬಿಟ್ಟ. ಆದರೆ ಆ ಸಮಯದಲ್ಲಿ ನನ್ನ ಕುಟುಂಬ, ಸ್ನೇಹಿತರು, ಮೀಡಿಯಾಗಳು ಹಾಗೂ ಸಹೋದ್ಯೋಗಿಗಳು ನೀಡಿರುವ ಧೈರ್ಯವನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಪೇರೆಂಟಿಂಗ್ ಬಗ್ಗೆ ವಿಜಯ್ ರಾಘವೇಂದ್ರ ಹೇಳಿದ್ದೇನು? ಇಂದಿನ ಕಾಲಕ್ಕೆ ಈ ಅಡ್ವೈಸ್ ಸೂಕ್ತವೇ?
ಇದೇ ವೇಳೆ ಪತ್ನಿ ಸ್ಪಂದನಾ ಅವರ ಸ್ವಭಾವದ ಕುರಿತು ಮಾತನಾಡಿರುವ ವಿಜಯ್ ರಾಘವೇಂದ್ರ ಅವರು, ಆಕೆ ಇಂದಿಗೂ ನನಗೆ ಸ್ಫೂರ್ತಿ. ಅವಳೇ ನನ್ನ ಜೀವನದ ಸೆಂಟರ್ ಪಾಯಿಂಟ್ ಕೂಡ. ಈಗಲೂ ಅವಳು ನನ್ನ ಜೊತೆ ಇದ್ದಾಳೆ ಎಂದಿದ್ದಾರೆ. ಮನೆಯಲ್ಲಿ ಸಾಕಷ್ಟು ತರ್ಲೆ ಮಾಡುತ್ತಿದ್ದಳು, ಕಾಲೆಳೆಯುತ್ತಿದ್ದಳು. ಆದರೆ ಹೊರಗಡೆ ಬಂದಾಗ ಮಾತ್ರ ಅವಳ ಸ್ವಭಾವ ಕೂಡಲೇ ಬದಲಾಗುತ್ತಿತ್ತು. ಅದ್ಹೇಗೆ ಎನ್ನುವುದು ನನಗೂ ಅಚ್ಚರಿ. ಯಾರು ಏನೇ ಎಷ್ಟೇ ಉದ್ದದ ಪ್ರಶ್ನೆ ಕೇಳಲಿ ಅದಕ್ಕೆ ಅವಳು ಹಾಂ, ಹೂಂ, ಓಕೆ ಅಂದಷ್ಟೇ ಉತ್ತರ ಕೊಡುತ್ತಿದ್ದಳು ಎಂದಿದ್ದಾರೆ. ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಶ್ಮಿ ಅವರು ಮಾಡಿರುವ ಸಂದರ್ಶನವನ್ನೂ ನೆನಪಿಸಿಕೊಂಡ ವಿಜಯ್ ರಾಘವೇಂದ್ರ ಅವರು, ಅಂದು ನಿಮಗೇ ನೆನಪಿರಬಹುದು. ಎಷ್ಟು ಉದ್ದುದ್ದ ಪ್ರಶ್ನೆ ಕೇಳಿದ್ರಿ, ಆದರೂ ಹಾಂ ಹೂ ಅನ್ನೋದಷ್ಟೇ ಅವಳ ಉತ್ತರವಾಗಿತ್ತು. ಆದರೆ ಮನೆಯಲ್ಲಿ ಮಾತ್ರ ಸಕತ್ ತರ್ಲೆ ಮಾಡುತ್ತಿದ್ದಳು ಎಂದು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
ಅವಳ ಮೌನವೇ ನನಗೆ ಬದುಕನ್ನೂ ಕಟ್ಟಿಕೊಟ್ಟಿದೆ. ಅವಳಲ್ಲಿದ್ದ ಮೌನ ಶೂನ್ಯ ಸೃಷ್ಟಿಮಾಡಲಿಲ್ಲ, ಬದಲಿಗೆ ಬದುಕುವನ್ನು ಕಲಿಸಿದೆ. ಅವಳು ನನ್ನ ಲೈಫ್ನ ಫೋಕಸ್ ಪಾಯಿಂಟ್ ಆಗಿದ್ದವಳು, ಈಗಲೂ ಅವಳು ನನ್ನ ಜೊತೆ ಇದ್ದಾಳೆ. ನನ್ನ ಪರ್ಸನ್ಯಾಲಿಟಿ ಡೆವಲಪ್ಮೆಂಟ್ ಎಲ್ಲವೂ ಸ್ಪಂದನಾ ಸೆಂಟ್ರಿಕ್ಕೇ ಆಗಿದೆ ಎಂದಿದ್ದಾರೆ. ಆಕೆಯ ಸಾವಿನ ಬಳಿಕ ಜೀವನ ನೋಡುವ ರೀತಿ ಏಕೆ ಬದಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ ವಿಜಯ್ ಅವರು, ಇಲ್ಲ ಹಾಗೇನಿಲ್ಲ. ಮೊದಲಿನಿಂದಲೂ ಸಾಕಷ್ಟು ಏರಿಳಿತಗಳನ್ನು ಕಂಡುಕೊಂಡು ಬಂದವ ನಾನು. ಜೀವನ ನನಗೆ ಬರೀ ಯಶಸ್ಸನ್ನೇ ಕೊಟ್ಟು ಕುರುಡನನ್ನಾಗಿ ಮಾಡಲಿಲ್ಲ. ಆದ್ದರಿಂದ ಮನಸ್ಥಿತಿ ಹಾಗೆಯೇ ಇದೆ ಎಂದಿದ್ದಾರೆ. ಇದೇ ವೇಳೆ ಜೀವನದ ಕುರಿತು ಮಾತನಾಡಿರುವ ಅವರು, ನಮಗೆ ಗೊತ್ತು ಅಂದುಕೊಂಡಾಗ ಭಗವಂತ ಟಕ್ ಅಂತ ಬದುಕನ್ನು ಚೇಂಜ್ ಮಾಡ್ತೇನೆ. ಏನೂ ಗೊತ್ತಿಲ್ಲ ಅಂದುಕೊಂಡಾಗ ಜೊತೆಯಲ್ಲಿರ್ತಾನೆ. ಅದನ್ನು ನಾನು ಅರಿತುಕೊಂಡಿದ್ದೇನೆ. ಅದರಂತೆಯೇ ಬಾಳುತ್ತಿದ್ದೇನೆ ಎಂದಿದ್ದಾರೆ.
ಪುಟ್ಟಕ್ಕನಿಗಿಂದು ಹುಟ್ಟುಹಬ್ಬದ ಸಂಭ್ರಮ: ರಾಷ್ಟ್ರೀಯ ಕಲಾವಿದೆಯಾಗಿ ಮಿಂಚಬೇಕಿದ್ದ ನಟಿಗೆ ಸಿಕ್ಕಿಲ್ಲವೇ ಅವಕಾಶ?