ಬೆಂಗಳೂರಿನ 1522 ಪಬ್‌ ತೋರಿಸಿಕೊಟ್ಟಿದ್ದೇ ಸ್ಪಂದನಾ; ಪತ್ನಿ ಪಾರ್ಟಿ ಕ್ರೇಜ್‌ ಬಗ್ಗೆ ರಿವೀಲ್ ಮಾಡಿದ ವಿಜಯ್‌ರಾಘವೇಂದ್ರ!

By Vaishnavi Chandrashekar  |  First Published Sep 2, 2024, 12:43 PM IST

ಸಖತ್ ಲೈವ್ಲಿ ಹಾಗೂ ಎನರ್ಜಿಟಿಕ್ ಆಗಿದ್ದ ಸ್ಪಂದನಾ ಪಾರ್ಟಿಗಳು ಎಷ್ಟು ಇಷ್ಟ ಪಡುತ್ತಿದ್ದರು? ಮನೆಯಲ್ಲಿ ಹೇಗೆ ಪಾರ್ಟಿ ಆಯೋಜಿಸುತ್ತಿದ್ದರು ಎಂದು ರಾಘು ರಿವೀಲ್ ಮಾಡಿದ್ದಾರೆ. 


17ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ತಮ್ಮ ಯೂಟ್ಯೂಬ್ ಚಾನೆಲ್ ಆರಂಭಿಸುತ್ತಾರೆ. ಪ್ರೀತಿಯ ಪತ್ನಿ ಸ್ಪಂದನಾಳ ಬಗ್ಗೆ ಮಾತನಾಡಿ ಅಪ್ಲೋಡ್ ಮಾಡಿರುವ ವಿಡಿಯೋ ಲಕ್ಷಗಟ್ಟಲೆ ವೀಕ್ಷಣೆ ಪಡೆಯುತ್ತದೆ, ಪಾಸಿಟಿವ್ ಕಾಮೆಂಟ್ಸ್‌ಗಳು ಹರಿದು ಬರುತ್ತದೆ. ಇದೀಗ ಎರಡನೇ ಎಪಿಸೋಡ್ ಅಪ್ಲೋಡ್ ಮಾಡಿರುವ ವಿಜಯ್ ರಾಘವೇಂದ್ರ ಸ್ಪಂದನಾಳಿಗೆ ಇರುವ ಪಾರ್ಟಿ ಕ್ರೇಜ್ ಮತ್ತು ಆತ್ಮೀಯ ಸ್ನೇಹಿತರಾದ ಕಿರಣ್ ಬಗ್ಗೆ ಮಾತನಾಡಿದ್ದಾರೆ. 

'ನಾನು ತುಂಬಾ ಬೋರ್ ಹೊಡೆಸುತ್ತೀನಿ ಎಂದು ಹೆಚ್ಚಾಗಿ ಸ್ನೇಹಿತರ ಜೊತೆ ಸ್ಪಂದನಾ ಹೊರ ಹೋಗುತ್ತಿದ್ದಳು. ನಾವು ನಾವಾಗಿ ಎಂಜಾಯ್ ಮಾಡುವ ಸ್ವಾತಂತ್ರ್ಯ ಇದ್ದಿದ್ದು ಬೆಂಗಳೂರಿನ 1522 ಪಬ್‌ನಲ್ಲಿ. ನಮ್ಮಿಬ್ಬರ ಆತ್ಮೀಯ ಸ್ನೇಹಿತ ಕಿರಣ್ ಕಿನ್ನ. ತಮ್ಮ ಹೆಂಡತಿಗಿಂತ ಹೆಚ್ಚಾಗಿ ಬೈಗುಳ ಕೇಳಿರುವುದು ಸ್ಪಂದನಾಳಿಂದ. ಸ್ಪಂದನಾಳ ಮೌನದಲ್ಲಿ ನಗು ಇರುತ್ತದೆ. ಸ್ಪಂದನಾ ಮಾತನಾಡುವುದಿಲ್ಲ ಎಂದು ಎಲ್ಲರೂ ಹೇಳುತ್ತಿದ್ದರು ಆದರೆ ಆಕೆ ಮಾತನಾಡುತ್ತಿದ್ದದ್ದು ಕಿರಣ್ ಜೊತೆ ಮಾತ್ರ' ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ.

Tap to resize

Latest Videos

ಸಾಗರ್‌ ಜೊತೆ ಸುತ್ತಾಡುತ್ತಿರುವುದನ್ನು ಜನ ನೋಡಿದ್ದಾರೆ; ರಿಲೇಷನ್‌ಶಿಪ್ ಅಫೀಶಿಯಲ್ ಮಾಡಲು ಕಾರಣ ಬಿಚ್ಚಿಟ್ಟ ರಂಜನಿ ರಾಘವನ್!

'ಸ್ಪಂದನಾ ಹಾಗೆ ಹೀಗೆ ಅಂತ ಜನರು ಅಂದುಕೊಂಡಿರುತ್ತಾರೆ ಆದರೆ ಆಕೆ ಇರುವಷ್ಟು ಓಪನ್ ಹಾರ್ಟ್ ಫ್ರೆಂಡ್‌ ನನ್ನ ಲೈಫ್‌ನಲ್ಲಿ ಇಲ್ಲ. ಸ್ಪಂದನಾಳನ್ನು ಅರ್ಥ ಮಾಡಿಕೊಂಡರೆ ಅಕೆ ದೇವತೆ ಎಂದು ಗೊತ್ತಾಗುತ್ತದೆ. ಒಂದು ದಿನ ಇಬ್ಬರು ಹುಡುಗಿಯರ ಜೊತೆ ನಾನು ಕುಳಿತಿದ್ದೆ ಆಗ ಅವರು ಶಾಟ್ಸ್‌ ತೆಗೆದುಕೊಳ್ಳುತ್ತಿದ್ದರು ಆಗ ಸ್ಪಂದನಾ ಆ ಶಾಟ್ಸ್‌ ಗ್ಲಾಸ್‌ಗೆ ಅರ್ಧ ನೀರು ಹಾಕಿ ಕಳುಹಿಸಿದ್ದಾಳೆ. ಆ ಹುಡುಗಿಯರು ಕುಡಿದು ಏನೋ ಬದಲಾವಣೆ ಆಗಿದೆ ಅಂದ್ರು...ಏನು ನಮ್ಮ ಪಬ್‌ ಬಗ್ಗೆ ಈ ರೀತಿ ಮಾತನಾಡಬೇಡ ಎಂದು ನಾನು ಹೇಳಿ ವಾದ ಮಾಡುತ್ತಿದ್ದರೆ ಅಲ್ಲಿ ಸ್ಪಂದನಾ ಈ ತರ್ಲೆ ಮಾಡಿದ್ದಾರೆ' ಎಂದು ಸ್ನೇಹಿತ ಕಿರಣ್ ಹೇಳಿದ್ದಾರೆ.

ತರುಣ್- ಸೋನಲ್ ಚರ್ಚ್ ವೆಡ್ಡಿಂಗ್ ಫೋಟೋ ವೈರಲ್; ಮಂಗಳೂರಿಗೆ ಕಾಲಿಡುತ್ತಿದ್ದಂತೆ ಹೇರ್‌ಸ್ಟೈಲ್‌ ಬದಲಾಯಿಸಿದ ನಿರ್ದೇಶಕ!

ಸ್ಪಂದನಾ ಕೆಲವೊಮ್ಮೆ ಮನೆಯಲ್ಲಿ ಪಾರ್ಟಿ ಆಯೋಜಿಸುತ್ತಿದ್ದರು. ಪತ್ನಿ ಏನೇ ಅಡುಗೆ ಮಾಡಿದ್ದರೂ ಹಾಗೆ ಹೀಗೆ ಎಂದು ಕಾಮೆಂಟ್ ಮಾಡದೆ ವಿಜಯ್ ರಾಘವೇಂದ್ರ ಸೇವಿಸುತ್ತಿದ್ದರು ಈ ಗುಣ ಸ್ಪಂದನಾಳಿಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಸ್ನೇಹಿತ ಕಿರಣ್ ಬರಲು ಕಾಯುತ್ತಿದ್ದರಂತೆ, ಕಿರಣ್ ಸೇವಿಸಿ ಏನು ಕಡಿಮೆ ಏನು ಹೆಚ್ಚಾಗಿದೆ ಎಂದು ಹೇಳಿದ ಮೇಲೆ ಅಡುಗೆಯಲ್ಲಿ ತಕ್ಷಣವೇ ಬದಲಾವಣೆ ಮಾಡುತ್ತಿದ್ದರು. ಅತ್ತಿಗೆ ನನಗೆ ಪ್ರಾನ್ಸ್‌ ಬೇಕು ಎಂದು ಪ್ರಜ್ವಲ್ ದೇವರಾಜ್ ಹೇಳಿದರೆ ಸಾಕು ತಕ್ಷಣ ಮಾಡಿಕೊಡುತ್ತಿದ್ದರಂತೆ. ಮನೆಯಲ್ಲಿ 7-8 ವೆರೈಟಿ ಅಡುಗೆಗಳನ್ನು ಮಾಡಿ ಸ್ನೇಹಿತರನ್ನು ಕರೆದು ಮನೆಯಲ್ಲಿ ಪಾರ್ಟಿ ಆಯೋಜಿಸುತ್ತಿದ್ದ ಸ್ಪಂದನಾ ತುಂಬಾ ಲೈವ್ಲಿ ವ್ಯಕ್ತಿ ಅಂತಾರೆ ಚಿನ್ನಾರೆ ಮುತ್ತ. 

 

click me!