
ಬೆಂಗಳೂರು, (ಜೂನ್.15): ಆಕಸ್ಮಿಕ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಸ್ಯಾಂಡಲ್ವುಡ್ ಯುವ ನಟ ಸಂಚಾರಿ ವಿಜಯ್ ಇಂದು (ಮಂಗಳವಾರ) ಇಹಲೋಕ ತ್ಯಜಿಸಿದ್ದಾರೆ.
ಅಕಾಲಿಕವಾಗಿ ಪ್ರಾಣತೆತ್ತ ಯುವ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಕುಟುಂಬದವರು ಸಂಚಾರಿ ವಿಜಯ್ ಅವರ ಅಂಗಾಂಗಳನ್ನ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದರು. ಹಾಗಾಗಿ, ಸಂಚಾರಿ ವಿಜಯ್ ಅವರ ಅಂಗಾಂಗ ಟ್ರಾನ್ಸ್ಪ್ಲಾಂಟೇಷನ್ ಯಶಸ್ವಿಯಾಗಿದೆ.
ದುರಂತ ಅಂತ್ಯ: ಕಳದ ವರ್ಷ ಇದೇ ದಿನ ಸುಶಾಂತ್, ಇಂದು ಸಂಚಾರಿ ವಿಜಯ್
ಇಬ್ಬರ ಬಾಳಿಗೆ ಬೆಳಕಾದ ವಿಜಯ್ ಕಣ್ಣುಗಳು
ಹೌದು...ನಟ ಸಂಚಾರಿ ವಿಜಯ್ ಅವರು ಇನ್ಮುಂದೆ ಇಲ್ಲದಿದ್ದರು. ಅವರ ಕಣ್ಣುಗಳು ಜೀವಂತವಾಗಿದ್ದಾರೆ. ವಿಜಯ್ ಕಣ್ಣುಗಳನ್ನ ಇಬ್ಬರು ಯುವಕರಿಗೆ ಕಣ್ಣು ಅಳವಡಿಕೆ ಆಪರೇಷನ್ ಯಶಸ್ವಿಯಾಗಿದೆ.
ವಿಜಯ್ ವಯಸ್ಸಿನ ಒಬ್ಬರಿಗೆ ಹಾಗೂ ಮತ್ತೊಬ್ಬ ಯುವಕನಿಗೆ ಕಣ್ಣು ಜೋಡಣೆ ಯಶಸ್ವಿಯಾಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಬೆಂಗಳೂರಿನ ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಸುಜಾತಾ ರಾಥೋಡ್ ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಜಾತಾ ರಾಥೋಡ್, ವಿಜಯ್ ಕಣ್ಣುಗಳು ಉತ್ತಮವಾಗಿ ಇದ್ದವು. ನಮ್ಮಲ್ಲಿ ಇಬ್ಬರಿಗೆ ಕಣ್ಣನ್ನ ಹಾಕಲಾಗಿದೆ. ಈ ಅವರಿಬ್ಬರು ವಿಜಯ್ ಅವರ ಕಣ್ಣಿನಿಂದ ಜಗತ್ತನ್ನ ನೋಡುವಂತಾಗಿದೆ. ಆಪರೇಷನ್ ಆಗಿದ್ದು 6 ರಿಂದ 8 ಗಂಟೆ ಬಳಿಕ ದೃಷ್ಟಿ ಬರಲಿದ್ದು, 24 ಗಂಟೆಯೊಳಗೆ ಅವರ ದೃಷ್ಟಿ ಯಾವ ಪ್ರಮಾಣದಲ್ಲಿದೆ ಗೊತ್ತಾಗತ್ತೆ ಎಂದು ಹೇಳಿದರು.
ಇನ್ನು ಸಂಚಾರಿ ವಿಜಯ್ ಅವರ ಕಿಡ್ನಿ ಟ್ರಾನ್ಸ್ಪ್ಲಾಂಟೇಷನ್ ಯಶಸ್ವಿಯಾಗಿದ್ದು ಮಹಿಳೆಯೊಬ್ಬರಿಗೆ ಕಿಡ್ನಿ ಟ್ರಾನ್ಸ್ಪ್ಲಾಂಟೇಷನ್ ಮಾಡಲಾಗಿದೆ. 34 ವರ್ಷದ ಮಹಿಳೆಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕಿಡ್ನಿ ಟ್ರಾನ್ಸ್ಪ್ಲಾಂಟೇಷನ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.