ನಟ ವೀರೇಂದ್ರ ಬಾಬು ವಿರುದ್ಧ ಮಹಿಳೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಆರೋಪ; ವಿಡಿಯೋ ತೋರಿಸಿ 15 ಲಕ್ಷ ಬೆದರಿಕೆ!

Published : Aug 12, 2023, 12:03 PM ISTUpdated : Aug 12, 2023, 12:25 PM IST
ನಟ ವೀರೇಂದ್ರ ಬಾಬು ವಿರುದ್ಧ ಮಹಿಳೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಆರೋಪ; ವಿಡಿಯೋ ತೋರಿಸಿ 15 ಲಕ್ಷ ಬೆದರಿಕೆ!

ಸಾರಾಂಶ

2021ರಲ್ಲಿ ನಡೆದ ಘಟನೆ ಬಯಲು. ವೀರೇಂದ್ರ ಬಾಬು ಹಾಗೂ ಸ್ನೇಹಿತರ ಮೇಲೆ ಕೊಡಿಗೆಹಳ್ಳಿಯಲ್ಲಿ ದೂರು ದಾಖಲು....   

2011ರಲ್ಲಿ ಸ್ವಯಂ ಕೃಷಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟ ಹಾಗೂ ನಿರ್ಮಾಪಕನಾಗಿ ಕಾಲಿಟ್ಟ ವೀರೇಂದ್ರ ಬಾಬು ವಿರುದ್ಧ ಎರಡನೇ ದೂರು ದಾಖಲಾಗಿದೆ. ಅತ್ಯಾಚಾರ ಆರೋಪದ ಮೇಲೆ ಕೊಡಿಗೆಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಹೌದು! ನಟ ವೀರೇಂದ್ರ ಬಾಬು ಮಾಹಿಳಗೆಯೊಬ್ಬರಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿರುವ ಆರೋಪ ಕೇಳಿ ಬಂದಿದೆ. ಅತ್ಯಾಚಾರ ಮಾಡಿ ಅದನ್ನು ವಿಡಿಯೋ ಮಾಡಿಕೊಂಡು ಆಗಾಗ ಬೆದರಿಕೆ ಹಾಕುತ್ತಿದ್ದರಂತೆ. ಸುಮ್ಮನೆ ಬೆದರಿಕೆ ಅಲ್ಲ ಆಕೆಯಿಂದ 15 ಲಕ್ಷ ಹಣ ಡಿಮ್ಯಾಂಡ್‌ ಇಟ್ಟು ಬೆದರಿಕೆ ಹಾಕುತ್ತಿದ್ದರಂತೆ. ಒಂದು ವೇಳೆ ಹಣ ನೀಡದಿದ್ದರೆ ವಿಡಿಯೋ ಲೀಕ್ ಮಾಡುವುದಾಗಿಯೂ ಬೆದರಿಕೆ ಹಾಕುತ್ತಿದ್ದರಂತೆ.

ಮದುವೆ ದಿನವೇ ಹುಟ್ಟುಹಬ್ಬ, ವರ್ಷದೊಳಗೆ ಎಂಟ್ರಿ ಕೊಟ್ಟ ಕಂದಮ್ಮ; 'ಕಾಮಿಡಿ ಕಿಲಾಡಿಗಳು' ಸದಾ ಫೋಟೋ ವೈರಲ್!

ಈ ಘಟನೆ 2021ರಲ್ಲಿ ನಡೆದಿದೆ. ಅಂದೇ ಆ ಮಹಿಳೆ ಒಡವೆ ಮಾರಿ ಹಣ ಕೊಟ್ಟಿದ್ದಾರೆ. ಅಲ್ಲಿಗೆ ಸುಮ್ಮನಾಗಿದ್ದ ವೀರೇಂದ್ರ ಬಾಬು ಕಳೆದ ಜುಲೈ 30ರಿಂದ ಮತ್ತೆ ಮಹಿಳೆಗೆ ಕರೆ ಮಾಡಿ ಮತ್ತೊಮ್ಮೆ ಬೆದರಿಕೆ ಹಾಕಿದ್ದಾನೆ. ಒಮ್ಮೆ ಮಹಿಳೆಯನ್ನು ಕಾರಿನಲ್ಲಿ ಸುತ್ತಾಡಿಸಿ ಮೈ ಮೇಲಿದ್ದ ಚಿನ್ನಾಭರಣಗಳನ್ನು ಕಿತ್ತುಕೊಂಡಿದ್ದಾನೆ. ವೀರೇಂದ್ರ ಸುಮ್ಮನೆ ಬೆದರಿಕೆ ಹಾಕುತ್ತಿರಲಿಲ್ಲ ಪಾಯಿಂಟ್ ಬ್ಲಾಕ್‌ ಗನ್‌ ಇಟ್ಟು ಬೆದರಿಸುತ್ತಿದ್ದ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವೀರೇಂದ್ರ ಬಾಬು ಮತ್ತು ಸ್ನೇಹಿತರ ವಿರುದ್ಧ ಕೊಡಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳು ಆರೆಸ್ಟ್‌ ಆಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ. 

ಸೈಮಾ ಅತ್ಯುತ್ತಮ ನಾಯಕಿ ಪ್ರಶಸ್ತಿ ಅಂತಿಮ ಸುತ್ತು; ಪಟ್ಟಿಯಲ್ಲಿ ಕನ್ನಡತಿ ನೇಹಾ ಶೆಟ್ಟಿ

1.8 ಕೋಟಿ ಮೋಸ:

ಕೆಲವು ತಿಂಗಳುಗಳ ಹಿಂದೆ ವೀರೇಂದ್ರ ಬಾಬು 1.8 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಬೆಂಗಳೂರಿನ ಯಲಹಂಕ ವಾಸಿಯಾಗಿರುವ ವಿರೇಂದ್ರಬಾಬು, ಮುಂದಿನ ಚುನಾವಣೆ ವೇಳೆಗೆ ರಾಷ್ಟ್ರೀಯ ಜನಹಿತ ಪಕ್ಷ ಮಾಡೋದಾಗಿ ಹೇಳಿದ್ದರಂತೆ. ಆ ಪಕ್ಷಕ್ಕೆ ರಾಜ್ಯಾದ್ಯಂತ, ಎಂಎಲ್‌ಎ, ಎಂಪಿ ಸೇರಿದಂತೆ ವಿವಿಧ ಸ್ಥಾನಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ ಎಂದು ಹುಡುಕಾಡುತ್ತಿದ್ದರು ಎನ್ನಲಾಗಿದೆ.ಎಮ್‌ಎಲ್‌ಎ ಆಗಬೇಕು ಎಂದು ಆಸೆ ಇರೋರು, ಲಕ್ಷಾಂತರ ರೂಪಾಯಿ ಹಣ ನೀಡಬೇಕಾಗುತ್ತೆ. ಆ ಹಣದಲ್ಲಿ ಆರ್ಯನ್​ ಇನ್ಫೋ ಟೆಕ್​ ಅನ್ನೋ ಕಂಪೆನಿ ಅಡಿ ವಿಕೇರ್​ ಲರ್ನಿಂಗ್​ ಆ್ಯಪ್​ ಮೂಲಕ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಆನ್ಲೈನ್ ಶಿಕ್ಷಣ ಸೇರಿದಂತೆ, ವಿವಿಧ ಉಪಕರಣಗಳನ್ನು ನೀಡುವ ಮೂಲಕ ಜನರನ್ನು ತಮ್ಮ ಪಕ್ಷದ ಕಡೆಗೆ ಸೆಳೆಯುವ ಪ್ಲಾನ್ ಬಗ್ಗೆ ಹೇಳಿಕೊಂಡಿದ್ರು. ಇದನ್ನು ನಂಬಿದ ಬಸವರಾಜ್ ಘೋಷಲ್ ಎಂಬ ವ್ಯಕ್ತಿ ಸೇರಿದಂತೆ ಹಲವಾರು ಮಂದಿ ವಿರೇಂದ್ರಬಾಬುಗೆ 1.8 ಕೋಟಿ ಹಣ ನೀಡಿದ್ದರಂತೆ. ಈಗ ಹಣ ಪಡೆದ ವೀರೇಂದ್ರ ಬಾಬು ಸೇರಿದಂತೆ ಏಳು ಜನರ ಮೇಲೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಅಲ್ಲದೇ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸುವ ನೆಪದಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ಹಣ ಕಲೆಕ್ಟ್ ಮಾಡಿ ಯಾವುದೇ ಸಹಾಯ ಮಾಡದೇ ವಂಚಿಸಿದ್ದಾರೆ. ಹಾಗಾಗಿ ಈ ಬಗ್ಗೆ ಸೂಕ್ತ  ಕ್ರಮ ತೆಗೆದುಕೊಂಡು ತನಿಖೆ ನಡೆಸುವಂತೆ ದೂರುದಾರ ಬಸವರಾಜ್ ಘೋಷಲ್ ದೂರು ನೀಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!