'ರೈಡರ್‌' ಡಬ್ಬಿಂಗ್‌ ಮುಗಿಸಿದ ನಿಖಿಲ್‌ ಕುಮಾರಸ್ವಾಮಿ!

Suvarna News   | Asianet News
Published : Sep 27, 2021, 05:38 PM IST
'ರೈಡರ್‌' ಡಬ್ಬಿಂಗ್‌ ಮುಗಿಸಿದ ನಿಖಿಲ್‌ ಕುಮಾರಸ್ವಾಮಿ!

ಸಾರಾಂಶ

ರಿಲ್ಯಾಕ್ಸ್‌ ಮೂಡ್‌ನಲ್ಲಿ ನಟ ನಿಖಿಲ್ ಕುಮಾರ್. ಚಿತ್ರದ ಡಬ್ಬಿಂಗ್ ಕೆಲಸ ಮುಗಿದಿದೆ. ಪುತ್ರನ ಜೊತೆ ಜಾಲಿ ಟೈಮ್ ಶುರು...  

ಸ್ಯಾಂಡಲ್‌ವುಡ್‌ (Sandalwood) ಯುವರಾಜ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಬಹು ನಿರೀಕ್ಷೆಯ 'ರೈಡರ್‌' (Rider) ಚಿತ್ರ  ರಿಲೀಸ್‌ಗೆ ಸಿದ್ಧವಾಗುತ್ತಿದೆ. ಇದರ ಜೊತೆ ಡಬ್ಬಿಂಗ್‌ (Dubbing) ಕೆಲಸವೂ ನಡೆಯುತ್ತಿದೆ.  ಡಬ್ಬಿಂಗ್‌ನಲ್ಲಿ ಭಾಗಿಯಾಗಿದ್ದ ನಿಖಿಲ್ ತಮ್ಮನ್ನು ದೊಡ್ಡ ಪರದೆ ಮೇಲೆ ನೋಡಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.  ಲಹರಿ (Lahari) ಸಂಸ್ಥೆ ನಿರ್ಮಾಣ ಮಾಡಿದ ಈ ಚಿತ್ರವನ್ನು ತೆಲುಗಿನ ವಿಜಯ್‌ ಕುಮಾರ್‌ (Vijay Kumar) ಕೊಂಡ ನಿರ್ದೇಶನ ಮಾಡಿದ್ದಾರೆ.

‘ಡಬ್ಬಿಂಗ್‌ ಮಾಡುವಾಗ ತುಂಬಾ ದಿನಗಳ ನಂತರ ತಮ್ಮನ್ನು ದೊಡ್ಡ ಪರದೆ ಮೇಲೆ ನೋಡಿಕೊಂಡು ಖುಷಿ ಆಗುತ್ತಿದೆ. ನಿರೀಕ್ಷೆಯಂತೆ ಸಿನಿಮಾ ಮೂಡಿ ಬಂದಿದೆ. ಪೋಸ್ಟ್‌ ಪ್ರೊಡಕ್ಷನ್‌ (Post Production) ಕೆಲಸಗಳನ್ನು ಮುಗಿಸಿಕೊಂಡು ಆದಷ್ಟು ಬೇಗ ಸಿನಿಮಾ, ಚಿತ್ರಮಂದಿರಗಳಿಗೆ ಬರಲಿದೆ,’ ಎಂದು ನಿಖಿಲ್‌ ಕುಮಾರ್‌ ಸಂಭ್ರಮ ವ್ಯಕ್ತಪಡಿಸಿದ್ದಾರೆ.  ಚಿತ್ರದ ಟೀಸರ್ (Teaser) ಹಾಗೂ ಪೋಸ್ಟರ್ ನೋಡಿದರೆ ಇದು ಮಾಸ್ ಸಿನಿಮಾ ಎಂದೆನಿಸುತ್ತದೆ. ಆದರೆ, ನಿಖಿಲ್ ಆಯ್ಕೆ ಮಾಡಿಕೊಳ್ಳುವ ಸ್ಕ್ರಿಪ್ಟ್ ಡಿಫರೆಂಟ್ ಆಗಿರುತ್ತದೆ. ಚಿತ್ರದಲ್ಲಿ ಬೇರೆ ಎಲಿಮೆಂಟ್ಸ್ ಇದ್ದೇ ಇರುತ್ತವೆ ಎಂಬುವುದು ನೆಟ್ಟಿಗರ ನಿರೀಕ್ಷೆ.

ಇನ್ನು ಸೆಪ್ಟೆಂಬರ್ 24ರಂದು ಕುಟುಂಬಕ್ಕೆ ಗಂಡು ಮಗು (Baby Boy) ಬರ ಮಾಡಿಕೊಂಡ ನಿಖಿಲ್ ಕುಮಾರಸ್ವಾಮಿ ಸಖತ್ ಬ್ಯುಸಿಯಾಗಿದ್ದಾರೆ. ಮಗ, ಪತ್ನಿ ಜೊತೆ ಸಮಯ ಕಳೆಯುತ್ತಿದ್ದಾರೆ. ದೊಡ್ಡ ಗೌಡರ ಮನೆಗೆ ಚಿಕ್ಕ ಗೌಡರ ಆಗಮನಿದಾಗ ಸ್ವಾಗತಿಸಲು, ನಿಖಿಲ್ ಫ್ಯಾನ್ಸ್‌ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮಗು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಫೋಟೋ ಹಂಚಿಕೊಂಡ ನಿಖಿಲ್, ಪುತ್ರನನ್ನು ಅತಿ ಚಿಕ್ಕ ವಯಸ್ಸಿಗೇ ಸೆಲೆಬ್ರಿಟಿ ಕಿಡ್ (Celebrity Kid) ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಸಿನಿಮಾ ಹಾಗೂ ರಾಜಕೀಯದಲ್ಲಿ ಬ್ಯುಸಿಯಾಗಿರುವ ನಿಖಿಲ್ ತಮ್ಮ ಮುಂದಿನ ಪ್ಲಾನ್ ಬಗ್ಗೆ ಎಲ್ಲಿಯೂ ರಿವೀಲ್ ಮಾಡಿಲ್ಲ. ಸದ್ಯಕ್ಕೆ ಪೇರೆಂಟಿಂಗ್‌ ಫೇಸ್ (Parenting Phase) ಎಂಜಾಯ್ ಮಾಡುತ್ತಿದ್ದಾರೆ. 

'ರೈಡರ್‌' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆದ ಯುವರಾಜ ನಿಖಿಲ್!

'ನನ್ನ ಜೀವನದಲ್ಲಿ ಇನ್ನೊಂದು ಶುಭ ಘಳಿಗೆ ಬಂದಿದೆ. ತಮ್ಮ ಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದ. ತಾತನಾದೆ ಎಂದು ಹೇಳಲು ಅತೀವ ಸಂತಸವಾಗುತ್ತಿದೆ. ಕಂದನಿಗೆ ನಿಮ್ಮೆಲ್ಲರ ಹಾರೈಕೆ ಮತ್ತು ಆಶೀರ್ವಾದ ಇರಲೆಂದು ಪ್ರಾರ್ಥನೆ ಮಾಡುತ್ತೇನೆ,' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ಸಹ  ಟ್ಟೀಟ್ ಮಾಡಿ, ಸಂತಸ ವ್ಯಕ್ತಪಡಿಸಿದ್ದರು. 

ಬೆಂಗಳೂರಿನ Aster ಆಸ್ಪತ್ರೆಯಲ್ಲಿ ಮಗು ಜನನವಾಗಿದ್ದು, ಮಗುವನ್ನು ನೋಡಲು ಬಂದವರಿಗೆ ದೊಡ್ಡ ಸ್ವೀಟ್ಸ್ ಡಬ್ಬಿಯೇ ಸಿದ್ದವಾಗಿತ್ತು. ಮಾಜಿ ಪ್ರಧಾನ ಮಂತ್ರಿ ದೇವೇಗೌಡರೂ (HD Deve Gowda) ಮತ್ತು ಪತ್ನಿ ಚೆನ್ನಮ್ಮ ಸಹ ಮರಿ  ಮೊಮ್ಮೊಗನನ್ನು ಮುದ್ದಾಡುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. 

ನಿಖಿಲ್ ಕುಮಾರಸ್ವಾಮಿ ಕನ್ನಡ ಪೋಸ್ಟ್: ಕನ್ನಡ ಬರೆಯೋಕೆ ಬರಲ್ವಾ? ಟ್ರೋಲ್!

ಸೀತಾರಾಮ ಕಲ್ಯಾಣ (Seetharama Kalyana) ಚಿತ್ರದ ನಂತರ ನಿಖಿಲ್ ಅವರ ಯಾವ ಸಿನಿಮಾವೂ ಬಿಡುಗಡೆ ಆಗಿಲ್ಲ. ದೊಡ್ಡ ತಾರಾ ಬಳಗ ಹಾಗೂ ಬಿಗ್ ಬಜೆಟ್ ಸಿನಿಮಾ ನೋಡಿ ವೀಕ್ಷಕರಿಗೆ ರೈಡರ್ ಚಿತ್ರ ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?