
ಕನ್ನಡ ಚಿತ್ರರಂಗದ ಅದ್ಭುತ ನಟ ನವೀನ್ ಶಂಕರ್ ಸಿಕ್ಕಾಪಟ್ಟೆ ಸಣ್ಣಗಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೇವಲ 60 ದಿನಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ. 65 ಕೆಜಿ ಇದ್ದ ನವೀನ್ ಈಗ 50 ಕೆಜಿ ಆಗಿದ್ದಾರೆ. ಈ ಸಮಯದಲ್ಲಿ ಜನರು, ಆಹಾರ ಮತ್ತು ಸಂಪರ್ಕದಿಂದ ದೂರು ಉಳಿದುಬಿಟ್ಟಿದ್ದರು. ಆದರೆ ಈ ಜರ್ನಿಯಲ್ಲಿ ಎದುರಿಸಿದ ಕಷ್ಟಗಳನ್ನು ನವೀನ್ ಹಂಚಿಕೊಂಡಿದ್ದಾರೆ.
'ನನ್ನ ಪಾತ್ರದ ಸೈಕಲಾಜಿಕಲ್ ಕ್ಯಾರೆಕ್ಟರ್ ಪ್ರವೇಶ ಮಾಡಲು ಪ್ರಯತ್ನ ಮಾಡಿದ್ದೀನಿ- ಒಮ್ಮೆ ಆತ ಕಾಡಿಗೆ ಹೋಗುತ್ತಾರೆ ಅಲ್ಲಿ ತನ್ನ ಜೀವನದಲ್ಲಿ ಸಂಪೂರ್ಣ ಆಸಕ್ತಿ ಕಳೆದುಕೊಳ್ಳುತ್ತಾನೆ. ಕೊನೆ ಸ್ಟೇಜ್‌ನಲ್ಲಿ ವಾಟರ್ ಔಟ್ ಸಮಯ ಎಂದು ಕರೆಯುತ್ತಾರೆ ಆಗ ಸುಮಾರು 12 ಗಂಟೆಗಳ ಕಾಲ ನೀರು ಸೇವಿಸುವುದಿಲ್ಲ. ಇಲ್ಲಿ ನಾನು ಮಾಡಿ ತಪ್ಪು ಏನೆಂದೆ ಹೆಚ್ಚು ಶ್ರಮ ಹಾಕಿ 24 ಗಂಟೆಗಳ ಕಾಲ ನೀರು ಕುಡಿಯದೆ ಇದ್ದೆ. ಈ ಸಮಯದಲ್ಲಿ ಬಿಡದಿಯಲ್ಲಿ ರೂಮ್ ಮಾಡಿಕೊಂಡಿದ್ದೆ. ಆಗ ಎಲ್ಲರಿಂದ ಸಂಪರ್ಕ ಕಳೆದುಕೊಂಡಿದ್ದ ಫೋನ್ ಆಫ್ ಮಾಡಿದ್ದೆ. ಅಂದು ಬೆಳಗ್ಗೆ ಬಾತ್‌ರೂಮ್‌ನಲ್ಲಿ ಸಿಕ್ಕಾಪಟ್ಟೆ ಬೆವರಲು ಶುರು ಮಾಡಿದ್ದೆ ಎಷ್ಟರ ಮಟ್ಟಕ್ಕೆ ನೋವು ಶುರುವಾಯ್ತು ಅಂದರೆ ನನ್ನ ಕಥೆ ಮುಗಿಯಿತ್ತು ಅಂದುಕೊಂಡಿದ್ದೆ. ಒಂದು ಹೆಜ್ಜೆ ಇಡಲು ಸಾಧ್ಯವಾಗುತ್ತಿರಲಿಲ್ಲ ಹೀಗಾಗಿ ಹೋಟೆಲ್ ರಿಸೆಪ್ಶನ್ ಅಥವಾ ಸ್ನೇಹಿತರನ್ನು ಸಂಪರ್ಕ ಮಾಡಲು ಆಗಲಿಲ್ಲ. ನಾನು ಓದಿಕೊಂಡಿರುವ ಪ್ರಕಾರ, ಸ್ವಲ್ಪ ಚಾಕೋಲೇಟ್, ಸ್ವಲ್ಪ ನೀರು, ಸ್ವಲ್ಪ ಉಪ್ಪು ಸೇವಿಸಿದೆ. ಆಸ್ಪತ್ರೆ ತಲುಪುವಷ್ಟರಲ್ಲಿ ಚೇತರಿಸಿಕೊಂಡೆ. ವೈದ್ಯರು ಸರಿಯಾಗಿ ಬೈದು ನನ್ನ ಡಯಟ್‌ಗೆ ಬ್ರೇಕ್ ಹಾಕಿದ್ದರು' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ನವೀನ್ ಮಾತನಾಡಿದ್ದಾರೆ.
ಮದುವೆ ಆಗಿರುವ ಬಿಗ್ ಬಾಸ್ ರಜತ್ ಕಿಶನ್‌ಗೆ ಗರ್ಲ್‌ಫ್ರೆಂಡ್ ಇದ್ದಾಳಾ? ಗೆಳೆಯ ವಿನಯ್ ಗೌಡ ಹೇಳಿಕೆ ವೈರಲ್
'ಕಲಾವಿದರು ಬಾಡಿ ಟ್ರಾನ್‌ಫಾರ್ಮೇಷನ್ ಮಾಡುವಾಗ ಡಯಟೀಶಿಯನ್, ಟ್ರೈನರ್ ಮತ್ತು ಡಾಕ್ಟರ್ ಮೂವರು ಸಂಪರ್ಕದಲ್ಲಿ ಇರುತ್ತಾರೆ. ನನ್ನ ಟ್ರೈನರ್ ಗಣೇಶ್ ನನ್ನ ಬಾಡಿಯನ್ನು ಅನಲೈಸ್ ಮಾಡಿ ಡಯಟ್ ನೀಡಿದ್ದರು. ಇಡೀ ಸಮಯ ಡಯಟ್ ಚೆಕ್ ಮಾಡುತ್ತಿದ್ದರು ಆದರೆ ಮೂರು ದಿನಗಳ ಕಾಲ ಯಾರ ಸಂಪರ್ಕದಲ್ಲೂ ಇರಲಿಲ್ಲ ಆಗ ಮಾಡಲಿಲ್ಲ. ಆದರೆ ನಾನು ಮಾಡುತ್ತಿದ್ದಿದ್ದು ಸರಿ ಅಲ್ಲ. ಮುಂದಿನ ಸಲ ನಾನು ಬಾಡಿ ಟ್ರಾನ್ಸ್‌ಫಾರ್ಮ್ ಮಾಡುವಾಗ ಸಮಯ ತೆಗೆದುಕೊಳ್ಳಲು ನಿರ್ಧರಿಸಿದ್ದೀನಿ' ಎಂದು ನವೀನ್ ಹೇಳಿದ್ದಾರೆ.
ಹೌದು ನಾನು ಮರಾಠಿ ಆದರೆ ಕನ್ನಡ ತುಂಬಾ ಚೆನ್ನಾಗಿ ಬರುತ್ತೆ; ಯಮುನಾ ಶ್ರೀನಿಧಿಗೆ ತಿರುಗೇಟು ಕೊಟ್ಟ ಗೌತಮಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.