'ವಿದ್ಯಾಪತಿ'ಗೆ ಕಿಕ್ ಸ್ಟಾರ್ಟ್; ಹೊಸ ಅವತಾರದಲ್ಲಿ ನಾಗಭೂಷಣ್-ರಂಗಾಯಣ ರಘು

Published : Mar 22, 2024, 05:36 PM ISTUpdated : Mar 22, 2024, 05:37 PM IST
'ವಿದ್ಯಾಪತಿ'ಗೆ ಕಿಕ್ ಸ್ಟಾರ್ಟ್; ಹೊಸ ಅವತಾರದಲ್ಲಿ ನಾಗಭೂಷಣ್-ರಂಗಾಯಣ ರಘು

ಸಾರಾಂಶ

ಇಕ್ಕಟ್ ಕಥೆ ಹೇಳಿದ್ದ ಇಶಾಂ ಮತ್ತು ಹಸೀಂ ಖಾನ್ ‘ವಿದ್ಯಾಪತಿ’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಗಭೂಷಣ್..

ಪ್ರತಿಭಾನ್ವಿತ ನಿರ್ದೇಶಕರಿಗೆ ವೇದಿಕೆಯಾಗಿರುವ ಡಾಲಿ ಪಿಕ್ಚರ್ಸ್ ಮತ್ತೊಂದು ಹೊಸ ಕಥೆ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ. ಡಾಲಿ ಪಿಚ್ಚರ್ಸ್ ನ ನಾಲ್ಕನೇ ಕೊಡುಗೆ ವಿದ್ಯಾಪತಿ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಕ್ಕಿದೆ. ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗ್ತಿದೆ. 

ವಿದ್ಯಾಪತಿಯಾಗಿ ನಾಗಭೂಷಣ್ ಬಣ್ಣ ಹಚ್ಚಿದ್ದು, ಅವರು ಕರಾಟೆ ಕಿಂಗ್ ಅವತಾರ ತಾಳಿದ್ದಾರೆ. ರಂಗಾಯಣ ರಘು ಕೂಡ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವಿದ್ಯಾಪತಿ ಶೂಟಿಂಗ್ ಮೇಕಿಂಗ್ ವಿಡಿಯೋ ತುಣುಕನ್ನು ಚಿತ್ರತಂಡ ರಿವೀಲ್ ಮಾಡಿದೆ.  1 ನಿಮಿಷ ಮೇಕಿಂಗ್ ಝಲಕ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. 

ನನ್ನ ಹೊಸ ಪರ್ಸನಲ್‌ ಫೋಟೋಗ್ರಾಫರ್; ಮಗಳು ಆಯಿರಾ ಬಗ್ಗೆ ರಾಧಿಕಾ ಪಂಡಿತ್ ಕಾಮೆಂಟ್!

ಇಕ್ಕಟ್ ಕಥೆ ಹೇಳಿದ್ದ ಇಶಾಂ ಮತ್ತು ಹಸೀಂ ಖಾನ್ ‘ವಿದ್ಯಾಪತಿ’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಗಭೂಷಣ್ ಗೆ ನಾಯಕಿಯಾಗಿ ಉಪಾಧ್ಯಕ್ಷ ಬ್ಯೂಟಿ ಮಲೈಕಾ ವಸೂಪಾಲ್ ಕಾಣಿಸಿಕೊಳ್ಳಲಿದ್ದಾರೆ.

ಹುಡುಗರ ದೇಹದ ಸ್ಮೆಲ್‌, ಸ್ಕಿಲ್‌ ಬಗ್ಗೆ ಸೀಕ್ರೆಟ್‌ ಆಗಿ ಆಬ್ಸರ್ವ್‌ ಮಾಡ್ತಾರಂತೆ ರಿಷಿಕಾ ನಾಯ್ಕ್; ಹುಶಾರ್‌!

ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ಟಗರು ಪಲ್ಯ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಮತ್ತೊಮ್ಮೆ ಡಾಲಿ ಜೊತೆ ಕೈ ಜೋಡಿಸಿದ್ದಾರೆ.

ಶಾಹಿದ್ ಕಪೂರ್ 'ಅಶ್ವತ್ಥಾಮ'ನಿಗೆ 'ಅವನೇ ಶ್ರೀಮನ್ನಾರಾಯಣ' ಸಚಿನ್ ರವಿ ಸೂತ್ರಧಾರ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?