ಹುಲ್ಲು ಹಾಸಿನ ಮೇಲೆ ಪರಸ್ಪರ ಹಗ್ ಮಾಡಿಕೊಂಡು ನಿಂತಿದ್ದಾರೆ ಯಶ್ ಹಾಗು ರಾಧಿಕಾ ಪಂಡಿತ್. ಅವರಿಬ್ಬರ ಫೋಟೋವನ್ನು ದೂರದಲ್ಲಿ ನಿಂತು ತೆಗೆಯುತ್ತಿರುವ ಆಯಿರಾ ಬಗ್ಗೆ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ನಟಿ ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಗಳು ಆಯಿರಾ ಬಗ್ಗೆ ಅಚ್ಚರಿಯ ಕಾಮೆಂಟ್ ಒಂದನ್ನು ಹಾಕಿದ್ದಾರೆ. 'ನನ್ನ ಹೊಸ ಪರ್ಸನಲ್ ಫೋಟೋಗ್ರಾಫರ್' ಎಂಬ ಕಾಮೆಂಟ್ ಮಾಡಿ, ಎರಡು ಪೋಟೋಗಳನ್ನು ಶೇರ್ ಮಾಡಿದ್ದಾರೆ ರಾಧಿಕಾ ಪಂಡಿತ್. ಒಂದು ಫೋಟೋದಲ್ಲಿ ರಾಧಿಕಾ ಪಂಡಿತ್ ಹಾಗೂ ಯಶ್ ಒಂದು ಜಾಗದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಫೋಟೋ ತೆಗೆಯುತ್ತಿರುವವರು ಬೇರೆ ಯಾರೂ ಅಲ್ಲ, ಸ್ವತಃ ಯಶ್-ರಾಧಿಕಾ ಮಗಳು ಆಯಿರಾ.
ಇನ್ನೊಂದು ಫೋಟೋದಲ್ಲಿ ರಾಧಿಕಾ ಪಂಡಿತ್ ಮಾತ್ರ ನಿಂತಿದ್ದು, ಆಯಿರಾ ಫೋಟೋ ಕ್ಲಿಕ್ಕಿಸುತ್ತಿದ್ದಾರೆ. ಆದರೆ, ಈ ಫೋಟೋವನ್ನು ತೆಗೆದಿದ್ದು ಯಾರು ಎಂಬ ಗುಟ್ಟನ್ನು ರಾಧಿಕಾ ಪಂಡಿತ್ ರಟ್ಟು ಮಾಡಿಲ್ಲ. ಮಗಳು ಆಯಿರಾ ಟೈಮರ್ ಇಟ್ಟು ಕ್ಲಿಕ್ಕಿಸಿದ್ದಾ ಅಥವಾ ಬೇರೆ ಯಾರೋ ತೆಗೆದಿದ್ದಾ? ಅಥವಾ ಯಶ್-ರಾಧಿಕಾ ಮಗಳು ಇನ್ಯಾವುದೋ ಫೋಟೋ ತೆಗೆಯುತ್ತಿದ್ದಾಗ, ಈ ಫೋಟೋವನ್ನು ಯಶ್ ಅವರೇ ಟೈಮರ್-ಸ್ಟ್ಯಾಂಡ್ ಇಟ್ಟು ಕ್ಲಿಕ್ಕಿಸದರಾ ಎಂಬುದು ಸದ್ಯಕ್ಕೆ ತೀವ್ರ ಕುತೂಹಲ ಸೃಷ್ಟಿಸುತ್ತಿದೆ.
ಹುಡುಗರ ದೇಹದ ಸ್ಮೆಲ್, ಸ್ಕಿಲ್ ಬಗ್ಗೆ ಸೀಕ್ರೆಟ್ ಆಗಿ ಆಬ್ಸರ್ವ್ ಮಾಡ್ತಾರಂತೆ ರಿಷಿಕಾ ನಾಯ್ಕ್; ಹುಶಾರ್!
ಒಟ್ಟಿನಲ್ಲಿ, ಯಶ್-ರಾಧಿಕಾ ಮಗಳು ಆಯಿರಾ ಅಪ್ಪ-ಅಮ್ಮನ ಫೋಟೋವನ್ನು ಸ್ವತಃ ತೆಗೆಯುವಷ್ಟು ದೊಡ್ಡವಳಂತೂ ಆಗಿದ್ದಾಳೆ. ಹುಲ್ಲು ಹಾಸಿನ ಮೇಲೆ ಪರಸ್ಪರ ಹಗ್ ಮಾಡಿಕೊಂಡು ನಿಂತಿದ್ದಾರೆ ಯಶ್ ಹಾಗು ರಾಧಿಕಾ ಪಂಡಿತ್. ಅವರಿಬ್ಬರ ಫೋಟೋವನ್ನು ದೂರದಲ್ಲಿ ನಿಂತು ತೆಗೆಯುತ್ತಿರುವ ಆಯಿರಾ ಬಗ್ಗೆ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು 'ಫ್ಯೂಚರ್ ಪ್ರಿನ್ಸೆಸ್' ಎಂದು ಕಾಮೆಂಟ್ ಮಾಡಿದ್ದರೆ, ಹಲವರು 'ನಿಮ್ಮ ಹೊಸ ಪರ್ಸನಲ್ ಫೊಟೋಗ್ರಾಫರ್ ಸೂಪರ್' ಎಂದು ಕಾಮೆಂಟ್ ಮಾಡಿದ್ದಾರೆ.
'ಒಂದು ಮಾನವ ಜೀವವನ್ನು ರಕ್ಷಿಸಿದರೆ....' ಇಸ್ಲಾಂ ಸಂದೇಶವನ್ನು ಮನಮುಟ್ಟುವಂತೆ ಬಿಚ್ಚಿಟ್ಟ ಶಾರುಖ್ ಖಾನ್
ಇನ್ನೂ ಕೆಲವರು, ಮಗಳು ಫೋಟೋ ತೆಗೆಯುವುದನ್ನು ಎಷ್ಟು ಚೆನ್ನಾಗಿ ಎಂಜಾಯ್ ಮಾಡುತ್ತಿದ್ದಾರೆ ನೋಡಿ ಸ್ಯಾಂಡಲ್‌ವುಡ್ ಕ್ಯೂಟ್ ಜೋಡಿ' ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ, ನಟ ಯಶ್ ಹಾಗು ನಟಿ ರಾಧಿಕಾ ಪಂಡಿತ್ ತಮ್ಮ ಮಕ್ಕಳೊಂದಿಗೆ ಟೈಮ್ ಸ್ಪೆಂಡ್ ಮಾಡುವುದನ್ನು ಮರೆಯುತ್ತಿಲ್ಲ. ರಾಧಿಕಾ ಅವರಂತೂ ಮಕ್ಕಳ ಪಾಲನೆ-ಪೋಷಣೆಗೇ ತಮ್ಮ ಹೆಚ್ಚಿನ ಸಮಯವನ್ನು ನೀಡುತ್ತಿದ್ದಾರೆ ಎಂಬುದು ಆಗಾಗ ಗಮನಕ್ಕೆ ಬರುತ್ತದೆ.
ಏಕೆಂದರೆ, ರಾಧಿಕಾ ಪಂಡಿತ್ ಯಾವತ್ತೂ ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾ ಆಕ್ಟಿವ್ ಆಗಿಯೇ ಇರುತ್ತಾರೆ. ತಮ್ಮ ಮಕ್ಕಳ ಫೋಟೋಗಳನ್ನು, ಗಂಡ ಹಾಗೂ ಮಕ್ಕಳ ಜತೆಗಿನ ಫೊಟೋಗಳು ಹಾಗೂ ವೀಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ.