
ಸ್ಯಾಂಡಲ್‌ವುಡ್ ನಟ ಪೃಥ್ವಿ ಅಂಬಾರ್ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಸೆಲೆಬ್ರಟಿ ಆಗುವ ಬದಲು ಸಂದರ್ಶಕರಾಗಿ ನಿರೂಪಣೆ ಮಾಡುತ್ತಿದ್ದಾರೆ. ಪೃಥ್ವಿ ಪಕ್ಕದಲ್ಲಿ ಸೆಲೆಬ್ರಿಟಿಯಾಗಿ ನಟಿ ರಿಷಿಕಾ ನಾಯ್ಕ್ ಕುಳಿತಿದ್ದಾರೆ. ಪ್ರಶ್ನೆ ಕೇಳುತ್ತಿರುವ ಪೃಥ್ವಿ ಅಂಬಾರ್ 'ಹುಡುಗಿಯರು ಹುಡುಗರಲ್ಲಿ ರಹಸ್ಯವಾಗಿ ನೋಡುವ ಮೂರು (3) ವಿಷಯಗಳು ಯಾವವು' ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಟಿ ರಿಷಿಕಾ ನಾಯ್ಕ್ 'ಹುಡುಗರ ಮೈ ವಾಸನೆ, ಅವರೆಷ್ಟು ತಮಾಷೆ ಮಾಡುವ ವ್ಯಕ್ತಿ, ಎಂದು ಹೇಳಿ ಯೋಚನೆ ಮಾಡತೊಡಗಿದ್ದಾರೆ.
ಸ್ವಲ್ಪ ಹೊತ್ತಿನ ಬಳಿಕ ಮಾತನಾಡಿದ ನಟಿ ರಿಷಿಕಾ 'ನಾನು ಯಾವುದನ್ನು ಹೇಳಬೇಕು, ಯಾವುದನ್ನು ಹೇಳಬಾರದು ಎಂದು ಯೋಚನೆ ಮಾಡುತ್ತಿದ್ದೆ' ಎಂದಿದ್ದಾರೆ. ಅದಕ್ಕೆ ನಿರೂಪಕ ಪೃಥ್ವಿ ಅಂಬಾರ್ 'ಏ ಹಾಗೆಲ್ಲಾ ಮಾಡ್ಬೇಡಿ, ನಮಗೆ ಸ್ವಲ್ಪ ಜಾಸ್ತಿ ಕಂಟೆಂಟ್ ಆದ್ರೂ ಸಿಗುತ್ತೆ' ಎಂದಿದ್ದಾರೆ. ಅದಕ್ಕೆ ರಿಷಿಕಾ 'ಏನಾದ್ರೂ ಟ್ಯಾಲೆಂಟ್' ಎನ್ನುತ್ತಿದ್ದಂತೆ ಪೃಥ್ವಿ ಅಂಬಾರ್ 'ಅಂದ್ರೆ, ನಿಮ್ ಮುಂದೆ ಬಂದು ಅಬ್ರು ಕುಣಿಬೇಕಾ..?' ಎಂದು ಕೇಳಿದ್ದಾರೆ. ಅದಕ್ಕೆ ರಿಷಿಕಾ ನಾಯ್ಕ್ 'ಹಾಗಲ್ಲ, ಅವರಲ್ಲಿ ಏನಾದ್ರೂ ಟ್ಯಾಲೆಂಟ್ ಇರ್ಬೇಕು ಅಂದ್ರೆ ನಾನು ಹೇಳಿದ್ದು ಅವರು ನಟ, ಸಂಗೀತಗಾರ ಅಥವಾ ಡಾನ್ಸರ್ ಆಗಿರರ್ಬೇಕು' ಎಂದಿದ್ದಾರೆ.
ತೆರೆಗೆ ಬರಲು ಸಜ್ಜಾಗಿದೆ ನೆನಪಿರಲಿ ಪ್ರೇಮ್-ಮಾನ್ವಿತಾ ಸಿನಿಮಾ; 'ಅಪ್ಪಾ ಐ ಲವ್ ಯೂ' ಅಂತಿರೋದು ಯಾರು?
ಅದಕ್ಕೆ ನಟ ಪೃಥ್ವಿ ಅಂಬಾರ್ 'ಅಂದ್ರೆ ಏನಾದ್ರೂ ಸ್ಕಿಲ್ಸ್ ಇರ್ಬೇಕು' ಎಂದಿದ್ದಾರೆ. ಅದನ್ನು ಒಪ್ಪಿಕೊಂಡ ರಿಷಿಕಾ 'ಹೌದು, ಹೌದು, ಅದನ್ನೇ ನಾನು ಹೇಳಿದ್ದು' ಎಂದು ಹೇಳಿ ಆ ಮಾತುಕತೆಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ತಕ್ಷಣವೇ ರಿಷಿಕಾ 'ವಾಟ್ ಅಬೌಟ್ ಯೂ' ಎಂದಿದ್ದಾರೆ. ಅದಕ್ಕೆ ಶಾಕ್ ಆದ ನಟ ಪೃಥ್ವಿ 'ವಾಟ್, ನಾನಾ..? ಹುಡುಗರ ಬಗ್ಗೆ ನಾನು ಸೀಕ್ರೆಟ್ ಆಗಿ ಯಾಕೆ ಆಬ್ಸರ್ವ್ ಮಾಡ್ಬೇಕು? ಆ ರೀತಿಯ ಆಸಕ್ತಿ ನನಗಿಲ್ಲ. ಸೀಕ್ರೆಟ್ ಆಗಿ ನೋಡೋದು ಏನೂ ಇಲ್ಲ, ಡೈರೆಕ್ಟ್ ಆಗಿಯೇ ನೋಡ್ತೀನಿ, ಅವ್ರು ಯಾವ್ ಥರದ್ದು ಶೂ ಹಾಕಿದಾರೆ, ಯಾವ್ ಥರದ್ದು ವಾಚ್ ಕಟ್ಟಿದಾರೆ ಅಂತ' ಎಂದಿದ್ದಾರೆ ಪೃಥ್ವಿ.
'ಒಂದು ಮಾನವ ಜೀವವನ್ನು ರಕ್ಷಿಸಿದರೆ....' ಇಸ್ಲಾಂ ಸಂದೇಶವನ್ನು ಮನಮುಟ್ಟುವಂತೆ ಬಿಚ್ಚಿಟ್ಟ ಶಾರುಖ್ ಖಾನ್
ಒಟ್ಟಿನಲ್ಲಿ, ನಟ ಪೃಥ್ವಿ ಅಂಬಾರ್ ಸಂದರ್ಶನ ಮಾಡುವಾಗ ಸಖತ್ ಎಂಜಾಯ್ ಮಾಡಿದ್ದಾರೆ. ಪಕ್ಕದಲ್ಲಿ ಕುಳಿತು ಪ್ರಶ್ನೆಗಳನ್ನು ಎದುರಿಸಿ ಉತ್ತರ ಹೇಳುತ್ತಿದ್ದ ರಿಷಿಕಾ ನಾಯ್ಕ್ ಕೂಡ ಇಂಟರ್‌ವ್ಯೂ ಅನ್ನು ಚೆನ್ನಾಗಿ ಎಂಜಾಯ್ ಮಾಡಿದ್ದಾರೆ. ಅವರಿಬ್ಬರ ಮಾತುಕತೆ ಹಾಗು ಕಚಗುಳಿ ಇಡುವಂಥ ತಮಾಷೆಗಳಿಗೆ ವೀಕ್ಷಕರು ಫುಲ್ ಫಿದಾ ಆಗಿದ್ದಾರೆ ಎಂಬುದನ್ನು ವೀಡಿಯೋ ನೋಡಿದವರು ಮಾಡಿರುವ ಕಾಮೆಂಟ್ ಮೂಲಕ ಅರ್ಥ ಮಾಡಿಕೊಳ್ಳಬಹುದು.
ರೌಡಿಸಂ ಕಥೆ ಹೇಳಲು ಹೊರಟ ಸಿಂಹ-ಪ್ರತಾಪ್ ಸಿಂಹ; ಸ್ಯಾಂಡಲ್‌ವುಡ್‌ನಲ್ಲಿ ಬರಲಿದೆ 'ಓಂ ಕಾಳಿ'
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.