ಅವ್ರಪ್ಪ ಬಂದ್ರೂ ಸಂವಿಧಾನ ಬದಲಿಸೋಕಾಗಲ್ಲ, ಗಂಗೆಯಲ್ಲಿ ಮಿಂದ್ರೆ ಪಾಪ ಹೋಗಲ್ಲ: ನಟ ಕಿಶೋರ್

Published : Jan 30, 2025, 03:31 PM ISTUpdated : Jan 30, 2025, 03:35 PM IST
ಅವ್ರಪ್ಪ ಬಂದ್ರೂ ಸಂವಿಧಾನ ಬದಲಿಸೋಕಾಗಲ್ಲ, ಗಂಗೆಯಲ್ಲಿ ಮಿಂದ್ರೆ ಪಾಪ ಹೋಗಲ್ಲ: ನಟ ಕಿಶೋರ್

ಸಾರಾಂಶ

ಹಿಂದೂ ರಾಷ್ಟ್ರದ ಹೆಸರಿನಲ್ಲಿ ಮನುಸ್ಮೃತಿ ಆಧಾರಿತ ಸಂವಿಧಾನ ರಚನೆಯ ಟೀಕಿಸಿದ ನಟ ಕಿಶೋರ್, ಇದು ವರ್ಗೀಯ ಬೇಧ ಮತ್ತು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತದೆ ಎಂದಿದ್ದಾರೆ. ಧರ್ಮಾಂಧತೆ ಆಧಾರಿತ ಯಾವುದೇ ಕ್ರಮ ಭಯೋತ್ಪಾದನೆಗೆ ಸಮಾನ ಎಂದು ಅಭಿಪ್ರಾಯಪಟ್ಟ ಅವರು, ಇಂತಹ ಕಾರ್ಯಗಳು ಅಧಿಕಾರದ ದುರ್ಬಳಕೆ ಮಾತ್ರ ಎಂದಿದ್ದಾರೆ. ಜನರ ಪ್ರಜ್ಞೆ ಇನ್ನೂ ಹಾಳಾಗಿಲ್ಲ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಮನುವಾದವನ್ನು ವಿರೋಧಿಸಿ ಡಾ ಬಿಆರ್‌ ಅಂಬೇಡ್ಕರ್ ಅವ್ರು ಮನುಸ್ಮೃತಿಯನ್ನು ಸುಟ್ಟಹಾಕಿ ಭಾರತದ ಸಂವಿಧಾನ ರಚಿಸಿದ್ದಾರೆ. ಈಗ ಹಿಂದೂ ರಾಷ್ಟ್ರ ಕಟ್ಟಬೇಕೆಂದು ಹೊರಟಿರುವವರು ಈ ಮನುಸ್ಮೃತಿ ಹಾಗೂ ಚಾಣಕ್ಯನ ನೀತಿಗಳನ್ನು ಆಧರಿಸಿ 201 ಪುಟಗಳ ಹೊಸ ಸಂವಿಧಾನ ಮಾಡೋಕೆ ಹೊರಟಿದ್ದಾರೆ. ಇದಕ್ಕೆ ಏನು ಹೇಳ್ತೀರಾ?' ಎಂದು ನಿರೂಪಕರು ನಟ ಕಿಶೋರ್ (Actor Kishore) ಅವರನ್ನು ಕೇಳಿದ್ದಾರೆ. ಎಂದಿನಂತೆ, ಮೈಕ್ ನೋಡಿದ ತಕ್ಷಣ ಮನಸ್ಸಿನಲ್ಲಿರೋದು ಹೇಳುವ ನಟ ಕಿಶೋರ್ ಅವರ ಅನಿಸಿಕೆಯನ್ನು ಹೇಳಿದ್ದಾರೆ. ಹಾಗಿದ್ದರೆ ನಟ ಕಿಶೋರ್ ಅದೇನು ಹೇಳಿದ್ದಾರೆ?

'ಅವ್ರೆಲ್ಲಾ ಮೊದಲಿನಿಂದಲೂ ಮನುವಾದವನ್ನು ಸಪೋರ್ಟ್ ಮಾಡ್ಕೊಂಡೇ ಬಂದಿದಾರೆ. ಇದು ಎಲ್ಲೀತನಕ ಹೋಗುತ್ತೆ? ಹಿಂದು ರಾಷ್ಟ್ರ ಮಾಡ್ತಾರೆ. ಆಮೇಲೆ ಮುಂದೇನು? ಮುಸ್ಲಿಂ ಏನಾಗ್ತಾರೆ? ಸೆಕೆಂಡ್ ಕ್ಲಾಸ್ ಸಿಟಿಜನ್ಸ್ ಅಂತ ಆಗ್ತಾರೆ. ಆಗ ಅವ್ರ ವಿರುದ್ಧ ಹೊಡೆದಾಡ್ಕೊಂಡೇ ಬಿದ್ದಿರ್ಬೇಕು ನೀವು.. ಇಲ್ಲಿರೋ ನೆಕ್ಸ್ ಅಜೆಂಡಾ, ಯಾರಿಗಾದ್ರೂ ಕೆಲಸ ಸಿಗುತ್ತಾ ಯಾರಿಗಾದ್ರೂ? ಕೆಲಸ ಸಿಗೋದು ಯಾರಿಗೆ? ದಂಗೆ ಮಾಡುವಂಥವ್ರಿಗೆ, ಮಸೀದೆ ಮುಂದೆ ಹೋಗಿ ಡಿಜೆ ಡಾನ್ಸ್ ಮಾಡುವಂಥವ್ರಿಗೆ. ಒಬ್ರನ್ನ ಒಬ್ರು ಕೊಲ್ಲೋರಿಗೆ. 

ಬೆಂಗಳೂರು ಫಿಲ್ಮ್‌ ಫೆಸ್ಟಿವಲ್‌ಗೆ ನಟ ಕಿಶೋರ್‌ ಕುಮಾರ್‌ ರಾಯಭಾರಿ!

ಮಿಕ್ಕವ್ರಿಗೆ ಏನು, ಆನಾಗುತ್ತೆ? ಇವ್ರು ಬೆಟರ್‌ಮೆಂಟ್ ಏನಾಗುತ್ತೆ ಅಂತ ಹೇಳಿದ್ರೆ ಖಂಡಿತ ಮಾಡ್ಬಹುದು. ಇವ್ರು ಹೇಳೋದ್ರಿಂದ ಏನೂ ಬೆಟರ್‌ಮೆಂಟ್ ಆಗೋದಕ್ಕೆ ಸಾಧ್ಯವಿಲ್ಲ. ಹೊಸ ಸಂವಿಧಾನ ತರ್ತಾರೆ, ಸರಿ.. ಮನಸ್ಮೃತಿನಲ್ಲಿ ಏನಿತ್ತು? ಯಾರಿಗೂ ಗೊತ್ತಿಲ್ಲ. ಅವ್ರೆಲ್ಲೇ ಯಾರಿಗಾದ್ರೂ ಕೇಳಿ, ಯುಸಿಸಿ ಅಂತ ಇತ್ತಲ್ಲ, ಅದೇ ತರ.. ಅದ್ರಲ್ಲಿ ಏನಿದೆ ಅಂತ ಯಾರಿಗೂ ಸರಿಯಾಗಿ ಗೊತ್ತಿಲ್ಲ.. ಏನೂ ಇಲ್ದೇ ಸುಮ್ನೆ ಏನೋ ಹೇಳ್ತಾರೆ ಮಾಡ್ತೀನಿ ಅಂತ.. 

ಇವೆಲ್ಲಾ ಡೈವರ್ಷನ್ ಟೆಕ್ನಿಕ್, ಯಾವಾಗ್ಲೂ ಮಾಡ್ತಾನೇ ಇರ್ತಾರೆ.. ಇವ್ರಲ್ಲ, ಇವ್ರ ಅಪ್ಪ ಬಂದ್ರೂನೂ ಸಂವಿಧಾನ ಬದಲಾಯಿಸೋಕೆ ಆಗಲ್ಲ.. ಯಾಕಂದ್ರೆ, ಭಾರತದ ಜನಗಳ ಪ್ರಜ್ಞೆ ಅಷ್ಟೊಂದೆಲ್ಲಾ ಹಾಳಾಗಿಲ್ಲ. ಇವ್ರು ಎಷ್ಟೇ ಡೈವರ್ಟ್‌ ಮಾಡಿದ್ರೂ ಅದು ಸರ್ಟನ್‌ ಕ್ಲಾಸ್‌ ಅಷ್ಟೇ ಸೀಮಿತ ಆಗಿದೆ. ಇವೆಲ್ಲಾ ಪೊಳ್ಳು.. ಧರ್ಮ ಅಂದ್ರೆನೇ ಅಧರ್ಮದ ವಿರುದ್ಧ ಪದ.. ಅಂದ್ರೆ ಧರ್ಮ ಅಂದ್ರೆ, ಅಧರ್ಮ ಅಂದ್ರೆ ಕೆಟ್ಟ ಕೆಲಸ, ಅಂದ್ರೆ ಧರ್ಮ ಅಂದ್ರೆ ಒಳ್ಳೇ ಕೆಲಸ ಅಷ್ಟೇ!

ಹುಡ್ಗಿ ಹಿಂದೆ ಸುತ್ತಾಡೋ ಹುಡುಗ್ರು ಯಶ್ ಅಂದು ಹೇಳಿದ್ನ ಇಂದೂ ಫಾಲೋ ಮಾಡ್ತಿದಾರಾ?

ಹಿಂದೂ ಮುಸ್ಲಿಂ ಹೀಗೆ ಧರ್ಮಾಂಧತೆ ಎಲ್ಲಿದ್ದರೂ ಡೇಂಜರ್.. ಇವ್ರುಗಳಿಗೂ ಮುಸ್ಲಿಂ ಆತಂಕವಾದಿಗಳಿಗೂ ಯಾವುದೇ ವ್ಯತ್ಯಾಸ ಇಲ್ಲ. ಅವ್ರೂ ಧರ್ಮದ ಆಧಾರದ ಮೇಲೇ ಜನರನ್ನ ಒಡಿತಾರೆ, ಇವ್ರೂ ಅಷ್ಟೇ.. ಅವ್ರು ಯಾರೇ ಆಗಿರ್ಲಿ, ಧರ್ಮದ ಆಧಾರದಲ್ಲಿ ಜನರನ್ನು ಒಡಿತಾ ಇದಾರೆ ಅಂದ್ರೆ ಜನರಲ್ಲಿ ಆತಂಕ ಸೃಷ್ಟಿಸ್ತಾ ಇದಾರೆ ಅಂತಾನೇ.. ಅವ್ರು ಟೆರರಿಸ್ಟ್ ಅಥವಾ ಪ್ರಧಾನಿ ಯಾರೇ ಆಗಿದ್ರೂ ಅವರಿಬ್ಬರಲ್ಲಿ ಬೇಧ ಇಲ್ಲ' ಎಂದಿದ್ದಾರೆ.

ಇನ್ನು, ಗಂಗೆಯಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರ ಆಗಲ್ಲ.. ಫಸ್ಟ್ ಆಪ್ ಆಲ್‌ ಪಾಪಗಳನ್ನೇ ಮಾಡಬಾರ್ದು.. ಗಂಗೆ ಏನ್ ಮಾಡ್ತಾಳೆ ಪಾಪ, ಅದೊಂದು ಜೀವನದಿ, ಪ್ರಕೃತಿಯ ಶಕ್ತಿ ಅಷ್ಟೇ,, ಇವ್ರು ಜನರನ್ನು ದಾರಿ ತಪ್ಪಿಸ್ತಾ ಇದಾರೆ ಅಷ್ಟೇ.. ಅಧಿಕಾರ ಇರೋವರೆಗೂ ಇವೆಲ್ಲಾ ನಡೆಯುತ್ತೆ.. ಅಧಿಕಾರ ಹೋದ್ಮೇಲೆ ಎಲ್ಲಾ ಪರಿಣಾಮ ಗೊತ್ತಾಗುತ್ತೆ' ಎಂದಿದ್ದಾರೆ ಖಾಸಗಿ ಚಾನೆಲ್‌ ಸಂದರ್ಶನವೊಂದರಲ್ಲಿ ನಟ ಕಿಶೋರ್.

ಪೌರಾಣಿಕ ಕಥೆಗೆ ಆಧುನಿಕ ಸ್ಪರ್ಶ, ಡಾರ್ಲಿಂಗ್ ಪ್ರಭಾಸ್ ಮತ್ತೊಂದು ಸಿನಿಮಾಗೆ ಸಜ್ಜು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ