ನಟ ಜಗ್ಗೇಶ್ ಅವರು ಗುಟ್ಟಾಗಿದ್ದ ಸಂಗತಿಯನ್ನು ರಟ್ಟು ಮಾಡಿರುವ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅದೇನು ಎಂಬ ಕುತೂಹಲವಿದ್ದರೆ ನೋಡಿ, ಅದು ನಟ ಜಗ್ಗೇಶ್ ಅವರು ನಟ ಪುನೀತ್ ರಾಜ್‌ಕುಮಾರ್ ಅವರನ್ನು ಮೊದಲ ಭೇಟಿಯಾದ ಕ್ಷಣ ಯಾವುದು ಎಂಬುದಕ್ಕೆ ಉತ್ತರ..
ನಟ ಜಗ್ಗೇಶ್ ಅವರು ಗುಟ್ಟಾಗಿದ್ದ ಸಂಗತಿಯನ್ನು ರಟ್ಟು ಮಾಡಿರುವ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅದೇನು ಎಂಬ ಕುತೂಹಲವಿದ್ದರೆ ನೋಡಿ, ಅದು ನಟ ಜಗ್ಗೇಶ್ ಅವರು ನಟ ಪುನೀತ್ ರಾಜ್‌ಕುಮಾರ್ ಅವರನ್ನು ಮೊದಲ ಭೇಟಿಯಾದ ಕ್ಷಣ ಯಾವುದು ಎಂಬುದಕ್ಕೆ ಉತ್ತರ. ಹೌದು, ನಟ ಜಗ್ಗೇಶ್ ಅವರು ಪುನೀತ್ ಜತೆ ಇದ್ದಂತಹ ಒಂದು ವೇದಿಕೆಯಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಆ ವೀಡಿಯೋ ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ನಟ ಜಗ್ಗೇಶ್ ಅವರು 'ನಾನು ಪುನೀತ್ ರಾಜ್‌ಕುಮಾರ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು ರಾಘಣ್ಣನ ಮದುವೆಯಲ್ಲಿ ಎಂದಿದ್ದಾರೆ. ರಾಘಣ್ಣನ (ರಾಘವೇಂದ್ರ ರಾಜ್‌ಕುಮಾರ್) ಮದುವೆಯಾಗಿದ್ದು 1988ರಲ್ಲಿ. ಈ ಸಂಗತಿಯನ್ನು ವೇದಿಕೆ ಮೇಲೆ ಹಂಚಿಕೊಂಡಿದ್ದ ನಟ ಜಗ್ಗೇಶ್ ಅವರು ಇನ್ನೂ ಒಂದು ವಿಷಯವನ್ನು ಸಹ ಹಂಚಿಕೊಂಡಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಮದುವೆಗೆ ಬಂದಿದ್ದ ನಟ ಜಗ್ಗೇಶ್ ಅವರನ್ನು ಅಣ್ಣಾವ್ರು ಪುನೀತ್ ಅವರಿಗೆ ಹೇಗೆ ಪರಿಚಯಿಸಿದರು ಎಂಬುದನ್ನು ಸಹ ಹೇಳಿಕೊಂಡಿದ್ದಾರೆ ನಟ ಜಗ್ಗೇಶ್.
ಇಬ್ಬರಿಂದಲೂ ಡಿವೋರ್ಸ್ ಪಡೆದು ಒಂಟಿಯಾದ್ರು ಅಂಬಿಕಾ; ನಿಜ ಜೀವನ ಯಾಕೆ 'ಚಕ್ರವ್ಯೂಹ'ವಾಯ್ತು?
ರಾಘವೇಂದ್ರ ರಾಜ್‌ಕುಮಾರ್ ಅವರು ಮಂಗಳಾ ಅವರನ್ನು ಮದುವೆಯಾದ ಆ ಕ್ಷಣದಲ್ಲಿ ಅಲ್ಲಿ ಹಾಜರಿದ್ದ ನಟ ಜಗ್ಗೇಶ್ ಅವರನ್ನು ಡಾ ರಾಜ್‌ಕುಮಾರ್ ಅವರು ಅಲ್ಲಿ ಸೂಟು ಬೂಟು ಹಾಕಿಕೊಂಡು ನಿಂತಿದ್ದ ಪುನೀತ್ ಅವರಿಗೆ ಪರಿಚಯಿಸುತ್ತ 'ಇವರೇ ನೋಡಪ್ಪ ನಮ್ಮ ರಜನಿಕಾಂತ್' ಎಂದಿದ್ದರಂತೆ. ಆ ಫೋಟೋವನ್ನು ಈಗಲೂ ತಾವು ಇಟ್ಟುಕೊಂಡಿರುವದಾಗಿ ನಟ ಜಗ್ಗೇಶ್ ಹೇಳಿಕೊಂಡಿದ್ದಾರೆ. ಅಂದರೆ ಜಗ್ಗೇಶ್ ಅವರು ಪುನೀತ್ ಅವರನ್ನು ಭೇಟಿಯಾದಾಗ ಪುನೀತ್ ವಯಸ್ಸು 13 ರಿಂದ 14. ಆದರೆ, ಇಂದು ನಟ ಪುನೀತ್ ರಾಜ್‌ಕುಮಾರ್ ಅವರು ನೆನಪು ಮಾತ್ರ!
ಸೇಲ್ಸ್‌ಮ್ಯಾನ್, ಕ್ಯಾಷಿಯರ್ ಆಗಿದ್ರು ವಿಜಯ್ ಸೇತುಪತಿ; ಕೋಟ್ಯಾಧಿಪತಿಯ ಹಿಂದಿನ ಕಥೆ ರೋಚಕ!
ಹೌದು, ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಸಹ ಪಡೆದಿರುವ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರು ಇಂದು ನಮ್ಮೊಂದಿಗಿಲ್ಲ. ಆದರೆ, ಅವರ ನೆನಪು ಯಾವತ್ತೂ ಕನ್ನಡಿಗರ ಮನೆಮನಗಳಲ್ಲಿ ಅಜರಾಮರವಾಗಿ ಇರುತ್ತದೆ. ನಟ ಜಗ್ಗೇಶ್ ಅವರು ಹೇಳಿದ ಮಾತು ಕೇಳಿ ಸ್ವತಃ ಅಲ್ಲಿದ್ದ ನಟ ಪುನೀತ್ ರಾಜ್‌ಕುಮಾರ್ ಅವರು ಅಂದು ವೇದಿಕೆಯಲ್ಲಿ ಕಣ್ಣರಳಿಸಿ ನಕ್ಕಿದ್ದನ್ನು ಇಂದಿಗೂ ಪುನೀತ್ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಬಂಗಾರದ ಮನುಷ್ಯನಿಗೂ ನಾಗರಹಾವಿಗೂ ಮಧ್ಯೆ ದ್ವೇಷ ತಂದಿಟ್ಟಿದ್ದು ಯಾರು; ಹಳೆಯ ಗುಟ್ಟು ರಟ್ಟಾಯ್ತು!