ಕಾಲು ಮುರಿದುಕೊಂಡ ನವರಸನಾಯಕ ಜಗ್ಗೇಶ್: ಸಂಪೂರ್ಣ ವಿಶ್ರಾಂತಿಗೆ ವೈದ್ಯರ ಸೂಚನೆ

Published : Jun 17, 2023, 01:00 PM IST
ಕಾಲು ಮುರಿದುಕೊಂಡ ನವರಸನಾಯಕ ಜಗ್ಗೇಶ್: ಸಂಪೂರ್ಣ ವಿಶ್ರಾಂತಿಗೆ ವೈದ್ಯರ ಸೂಚನೆ

ಸಾರಾಂಶ

ನವರಸನಾಯಕ ಜಗ್ಗೇಶ್ ಕಾಲು ಮುರಿದುಕೊಂಡಿದ್ದಾರೆ. ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರ ಸೂಚನೆ ನೀಡಿದ್ದಾರೆ. 

ಸ್ಯಾಂಡಲ್‌ವುಡ್ ಹಿರಿಯ ನಟ ಜಗ್ಗೇಶ್ ಕಾಲು ಮುರಿದು ಕೊಂಡಿದ್ದಾರೆ.  ಸಖತ್ ಆಕ್ಟೀವ್ ಆಗಿದ್ದ ಜಗ್ಗೇಶ್ ಇದೀಗ ಕಾಲು ಮುರಿದುಕೊಂಡು ಸಂಪೂರ್ಣ ವಿಶ್ರಾಂತಿಯಲ್ಲಿದ್ದಾರೆ. ಈ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟ ಜಗ್ಗೇಶ್ ಸದಾ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ. ಯಾವುದೇ ವಿಚಾರಗಳ ಬಗ್ಗೆಯಾದರೂ ಅಭಿಪ್ರಾಯ ಹೊರಹಾಕುತ್ತಿರುತ್ತಾರೆ. ಇದೀಗ ಜಗ್ಗೇಶ್ ತನ್ನ ಆರೋಗ್ಯದ ಬಗ್ಗೆಯೂ ಬಹಿರಂಗ ಪಡಿಸಿದ್ದಾರೆ. 

ಮುರಿದುಕೊಂಡಿರುವ ಕಾಲಿನ ಫೋಟೋ ಶೇರ್ ಮಾಡಿ ಅಚಾತುರ್ಯ ಆಗಿದೆ ಎಂದು ಹೇಳಿದ್ದಾರೆ. 'ಸಣ್ಣ ಅಚಾತುರ್ಯ. ನಡಿಗೆಯಿಂದ ಪಾದದ ಮೂಳೆ ಮುರಿತ. 6ವಾರದ ದಿಗ್ಭಂಧನ ನಡಿಗೆಗೆ' ಎಂದು ಹೇಳಿದ್ದಾರೆ. ಬ್ಯಾಂಡೆಡ್ ಹಾಕಿರುವ ಕಾಲಿನ ಫೋಟೋ ಶೇರ್ ಮಾಡಿದ್ದಾರೆ. 

ಅರವತ್ತಾಗಿದೆ ಅಂದ್ಕೋಬೇಡಿ, ವಯಸ್ಸಾಯ್ತು ಅನ್ನೋದೆಲ್ಲ ನಿಮ್ಮ ತಲೆಗೆ ಬರದೇ ಇರಲಿ ಅಂತಾರೆ ಜನ: ಜಗ್ಗೇಶ್‌

ಜಗ್ಗೇಶ್ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಮತ್ತು ಆಪ್ತರು ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ. ಅನೇಕರು ವಿಶ್ರಾಂತಿ ಪಡೆಯಿರಿ, ದೇವರ ದಯೆಯಿಂದ ಶೀಘ್ರ ಗುಣಮುಖರಾಗಿ ಎಂದು ಹೇಳುತ್ತಿದ್ದಾರೆ. ಅಭಿಮಾನಿಗಳ ಪ್ರೀತಿಯ ಹಾರೈಕೆ ಜಗ್ಗೇಶ್ ಬೇಗ ಓಡಾಡುವಂತೆ ಆಗಲಿದೆ.

ಬೆಂಗಳೂರು ಮಹಾಮಳೆ: ನಟ ಜಗ್ಗೇಶ್ ಐಷಾರಾಮಿ ಕಾರು ಮುಳುಗಡೆ

ಜಗ್ಗೇಶ್ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ರಾಘವೇಂದ್ರ ಸ್ಟೋರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸಂತೋಷ್ ಆನಂದ್‌ರಾಮ್ ಸಾರಥ್ಯದಲ್ಲಿ ಬಂದ ರಾಘವೇಂದ್ರ ಸ್ಟೋರ್ ನಿರೀಕ್ಷೆಯ ಗೆಲುವು ದಾಖಲಿಸಿಲ್ಲ. ಹೊಂಬಾಳೆ ಫಿಲ್ಮ್ಸ್‌ನಲ್ಲಿ ಸಿನಿಮಾ ಮೂಡಿ ಬಂದಿತ್ತು. ಸದ್ಯ ಜಗ್ಗೇಶ್ ರಂಗನಾಯಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗೆ ಗುರು ಪ್ರಸಾದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜಗ್ಗೇಶ್ ಮತ್ತು ಗುರು ಪ್ರಸಾದ್ ಕಾಂಬಿನೇಷನ್‌ನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿದ್ದುಬಿದ್ದೂ ನಗುವಂತೆ 'ಆಭಾಸ' ಸೃಷ್ಟಿಸಿದ ತೆಲುಗು ಸಿನಿಮಾದಿಂದ ಕನ್ನಡಕ್ಕೆ 'ಡಬ್' ಆಗಿರೋ ಹಾಡು; ಏನ್ ಗುರೂ ಇದೂ..!?
ಕುಟುಂಬವೇ ಹೆಮ್ಮೆಪಡುವಂತೆ ಮಾಡಿದ Kiccha Sudeep ಮಗಳು ಸಾನ್ವಿ! ಇದಪ್ಪಾ..ಸಾಧನೆ ಅಂದ್ರೆ..!