ಕೊನೆಗೂ ಡಾಲಿ ಮದುವೆ ಫಿಕ್ಸ್.. ಡಾಕ್ಟರ್ ಜೊತೆ ಧನಂಜಯ್ ಕಲ್ಯಾಣ: ಹುಡುಗಿ ಯಾರು ಗೊತ್ತಾ?

Published : Nov 01, 2024, 05:59 AM IST
ಕೊನೆಗೂ ಡಾಲಿ ಮದುವೆ ಫಿಕ್ಸ್.. ಡಾಕ್ಟರ್ ಜೊತೆ ಧನಂಜಯ್ ಕಲ್ಯಾಣ: ಹುಡುಗಿ ಯಾರು ಗೊತ್ತಾ?

ಸಾರಾಂಶ

ಡಾಲಿ ಧನಂಜಯ ಯಾವಾಗ ಮದುವೆ ಆಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಡಾಲಿ ಧನಂಜಯ ಅವರಿಗೆ ಹುಡುಗಿ ಸಿಕ್ಕಿದ್ದಾರೆ. ಆ ಹುಡುಗಿಯ ಹೆಸರು...  

ಡಾಲಿ ಧನಂಜಯ ಯಾವಾಗ ಮದುವೆ ಆಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಡಾಲಿ ಧನಂಜಯ ಅವರಿಗೆ ಹುಡುಗಿ ಸಿಕ್ಕಿದ್ದಾರೆ. ಆ ಹುಡುಗಿಯ ಹೆಸರು ಡಾ. ಧನ್ಯತಾ. ವೈದ್ಯೆ ಧನ್ಯತಾ ಚಿತ್ರದುರ್ಗದವರು. ಕೆಲವು ವರ್ಷಗಳಿಂದ ಸ್ನೇಹಿತರಾಗಿದ್ದ ಧನಂಜಯ ಹಾಗೂ ಡಾಕ್ಟರ್ ಧನ್ಯತಾ ಅವರ ನಡುವೆ ಇತ್ತೀಚೆಗೆ ಪ್ರೀತಿ ಹುಟ್ಟಿಕೊಂಡಿದೆ. ಇಬ್ಬರ ಪ್ರೇಮ ಕತೆಗೆ ಪೋಷಕರು ಕೂಡ ಒಪ್ಪಿಗೆ ಕೊಟ್ಟಿದ್ದು, ಫೆಬ್ರವರಿ ತಿಂಗಳಲ್ಲಿ ಮದುವೆ ಆಗಲಿದ್ದಾರೆ. ಆ ಮೂಲಕ ಆಕ್ಟರ್‌, ಡಾಕ್ಟರ್‌ ಕೈ ಹಿಡಿಯುತ್ತಿದ್ದಾರೆ. ಧನಂಜಯ ಅವರನ್ನು ಕೈ ಹಿಡಿಯುತ್ತಿರುವ ಧನ್ಯತಾ ಅವರು ಗೈನಕಾಲಜಿಸ್ಟ್ ಆಗಿದ್ದಾರೆ. ಇಬ್ಬರು ಜತೆಗೂಡಿ ವಿಶೇಷವಾಗಿ ಫೋಟೋಶೂಟ್ ಕೂಡ ಮಾಡಿಕೊಂಡಿದ್ದಾರೆ.

ಇಂಡಸ್ಟ್ರಿ ಬಗ್ಗೆ ಕೆಟ್ಟದಾಗಿ ಮಾತಾಡೋದು ಬಿಡಿ: ನಾವೇ ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ನೆಗಟಿವ್ ಆಗಿ ಮಾತಾಡಬಾರದು. ನಿರಂತರವಾಗಿ ಕೆಲಸ ಮಾಡ್ಬೇಕು. ಅದರಿಂದಷ್ಟೇ ಇಂಡಸ್ಟ್ರಿ ಉಳಿಯೋದು ಎಂದು ಜಿಂಗೋ ಟೀಸರ್ ವೇಳೆ ಡಾಲಿ ಧನಂಜಯ್ ಪ್ರತಿಕ್ರಿಯಿಸಿದ್ದರು. ಈ ವರ್ಷ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಿದ್ರಿಂದ ಅಭಿಮಾನಿಗಳ ಜೊತೆಗೆ ಬರ್ತಡೇ ಆಚರಿಸೋಕೆ ಆಗ್ಲಿಲ್ಲ. ಜಿಂಗೋ ಟೀಸರ್‌ಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ. ಜಿಂಗೋ ಪೊಲಿಟಿಕಲ್ ಥ್ರಿಲ್ಲರ್ ಕಥೆಯನ್ನೊಳಗೊಂಡಿದೆ. ಭಾರತ್ ಜೋಡೋ ಯಾತ್ರೆಯ ರಾಹುಲ್‌ ಗಾಂಧಿ ಘಟನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಜಿಂಗೋ ಕಂಟೆಂಟ್ ತುಂಬಾ ಅದ್ಭುತವಾಗಿದೆ ಎಂದು ಡಾಲಿ ಧನಂಜಯ್ ಹೇಳಿದರು. 

ದೀಪಾವಳಿಗೆ ಡಾಲಿ ಧನಂಜಯ್, ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ನಟನೆಯ ಜೀಬ್ರಾ ತೆರೆಗೆ

ಧನಂಜಯ್ ಹುಟ್ಟುಹಬ್ಬದ ಅಂಗವಾಗಿ ಜಿಂಗೋ ಫಸ್ಟ್ ಜಲಕ್ ಬಿಡುಗಡೆ ಮಾಡಲಾಗಿತ್ತು. ರಾಜಕಾರಣಿಯಾಗಿ ಡಾಲಿ ಕಾಣಿಸಿಕೊಂಡಿದ್ದು, ಉದ್ದ ಕೂದಲು ಬಿಟ್ಟು ಖಡಕ್ ಡೈಲಾಗ್ ಹೊಡೆಯುತ್ತಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಜಿಂಗೋ ಅಸಲಿಗೆ ರಾಜಕಾರಣಿನಾ ಅಥವಾ ಕ್ರಾಂತಿಕಾರಿನ ಎಂಬ ಕುತೂಹಲವನ್ನು ಹುಟ್ಟುಹಾಕಿತ್ತು. ಚಿತ್ರಕ್ಕೆ ಹಾರಿಸ್ ಅಹಮದ್ ಕಥೆ ಚಿತ್ರಕಥೆ ಬರೆದಿದ್ದು, ಶಶಾಂಕ್ ಸೋಗಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತ್ರಿಷೂಲ್ ವಿಷನರಿ ಸ್ಟುಡಿಯೋಸ್ ಹಾಗೂ ಡಾಲಿ ಪಿಕ್ಚರ್ಸ್ ಬ್ಯಾನರ್‌ನಡಿ ಬಿ ನರೇಂದ್ರ ರೆಡ್ಡಿ ಹಾಗೂ ಡಾಲಿ ಧನಂಜಯ್ ಜಿಂಗೋ ಚಿತ್ರ ನಿರ್ಮಿಸುತ್ತಿದ್ದು, ರಾಘವೇಂದ್ರ ಮಾಯಕೊಂಡ ಸಂಭಾಷಣೆ ಚಿತ್ರಕ್ಕಿದೆ. ಇನ್ನು ಜಿಂಗೋ ಎಂದರೆ ವ್ಯಕ್ತಿಯೋರ್ವನ ನಿಕ್ ನೇಮ್ ಎನ್ನುತ್ತದೆ ಚಿತ್ರತಂಡ. ಹಾಗಿದ್ರೆ ಯಾರು ಈ ಜಿಂಗೋ ಎಂಬುದೇ ಸದ್ಯಕ್ಕಿರುವ ಕುತೂಹಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್