ನಟ ದರ್ಶನ್ ನೋಡಲು ಜೈಲಿಗೆ ಬಂದ ಹೆಂಡ್ತಿ ವಿಜಯಲಕ್ಷ್ಮೀ ಮತ್ತು ನಟ ವಿನೋದ್ ಪ್ರಭಾಕರ್

By Sathish Kumar KHFirst Published Jun 24, 2024, 1:17 PM IST
Highlights

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ವಿಚಾರಣಾಧೀನ ಕೈದಿ ನಟ ದರ್ಶನ್ ನೋಡಲು ಆತನ ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ವಿನೋದ್ ಪ್ರಭಾರ್ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.

ಬೆಂಗಳೂರು (ಜೂ.24): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ವಿಚಾರಣಾಧೀನ ಕೈದಿ ನಟ ದರ್ಶನ್ ನೋಡಲು ಆತನ ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ವಿನೋದ್ ಪ್ರಭಾರ್ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.

ನಟಿ ಪವಿತ್ರಾಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ ಎಂಬ ಹಿನ್ನೆಲೆಯಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ದರ್ಶನ್ ಅಂಡ್ ಗ್ಯಾಂಗ್ ಈಗ ಜೈಲು ಸೇರಿದೆ. ನಟ ದರ್ಶನ್, ಆತನ 2ನೇ ಹೆಂಡತಿ ನಟಿ ಪವಿತ್ರಾಗೌಡ, ನಟ ಪ್ರದೂಶ್ ಸೇರಿ ಒಟ್ಟು 16 ಜನರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ, ಮೊದಲ ಪತ್ನಿ ವಿಜಯಲಕ್ಷ್ಮಿ ಅವರು ಗಂಡ ಜೈಲು ಸೇರಿದ 3ನೇ ದಿನ ಆತನನ್ನು ನೋಡಲು ಜೈಲಿಗೆ ಆಗಮಿಸಿದ್ದಾರೆ.

Latest Videos

ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯೊಂದಿಗೆ ನಟಿ ಪವಿತ್ರಾಗೌಡ ಕಿರಿಕ್; ಒಳ್ಳೆ ಊಟ, ಮೆತ್ತನೆ ಹಾಸಿಗೆಗೆ ಹಠ

ಇನ್ನು ಪರಪ್ಪನ ಅಗ್ರಹಾರದ ಜೈಲಿಗೆ ಗಂಡನನ್ನು ಭೇಟಿಯಾಗಲು ತೆರಳಿದ್ದ ವಿಜಯಲಕ್ಷ್ಮಿಗೆ ಜೈಲಿನ ಸಿಬ್ಬಂದಿ ವಿಶೇಷ ಆತಿಥ್ಯ ನೀಡಿದ್ದಾರೆ. ದರ್ಶನ್ ಬೇಟಿಗೆ ಆಗಮಿಸಿರುವ ಪತ್ನಿ  ವಿಜಯಲಕ್ಷ್ಮಿ ಹಾಗೂ ಪುತ್ರ ಅವರು ಮಾಧ್ಯಮದವರ ಕ್ಯಾಮೆರಾಗಳನ್ನು ನೋಡಿ ತುಸು ದೂರದಲ್ಲಿ ಕಾರನ್ನು ನಿಲ್ಲಿಸಿದ್ದರು. ಅಲ್ಲಿಗೆ ತೆರಳಿದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಕ್ರೈಂ ಪೇದೆ ಗಣೇಶ್, ಅವರನ್ನು ಭೇಟಿ ಮಾಡಿ ವಿಶೇಷ ಆತಿಥ್ಯದ ಮೂಲಕ ಜೈಲಿನೊಳಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲು ಮುಂದಾಗಿದ್ದಾರೆ. ಇನ್ನು ನಟ ದರ್ಶನ್ ಸೆಲೆಬ್ರಿಟಿ ಆಗಿದ್ದರಿಂದ ಈ ವ್ಯವಸ್ಥೆ ಮಾಡಲಾಗುತ್ತಿದೆ ಎಂಬ ಮಾತು ಕೂಡ ಕೇಳಿಬರುತ್ತಿವೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೋ, ಇಲ್ಲವೋ ಪೊಲೀಸರೇ ಸ್ಪಷ್ಟಪಡಿಸಬೇಕು.

ಜೈಲಿಗೆ ಬಂದ ನಟ ವಿನೋದ್ ಪ್ರಭಾಕರ್:
ಜೈಲಿನಲ್ಲಿ ಎರಡು ದಿನ ಕಳೆದಿರುವ ನಟ ದರ್ಶನ್ ನೋಡಲು ಆತನ ಆಪ್ತ ಸ್ನೇಹಿತ ನಟ ವಿನೋದ್ ಪ್ರಭಾಕರ್ ಕೂಡ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ. ಇವರನ್ನು ಪೊಲೀಸರು ಹಂತ ಹಂತವಾಗಿ ತಪಾಸಣೆ ಮಾಡಿ ಜೈಲಿನ ಒಳಗೆ ನೋಡಲು ಅವಕಾಶ ಕೊಡಲು ಮುಂದಾಗಿದ್ದಾರೆ. ಗೇಟಿನ ಹೊರಗೆ ಕಾರನ್ನು ನಿಲ್ಲಿಸಿ ಸಾಮಾನ್ಯ ಜನರಂತೆ ನಡೆದುಕೊಂಡ ಹೋದ ವಿನೋದ್ ಪ್ರಭಾಕರ್ ಅವರಿಗೆ ಮೊಬೈಲ್ ನಿಷೇಧದ ಬಗ್ಗೆ ಮಾಹಿತಿ ನೀಡಿ ನಂತರ ಒಳಗೆ ಬಿಡಲು ಮುಂದಾಗಿದ್ದಾರೆ. ಇನ್ನು ನಟ ದರ್ಶನ್ ಮತ್ತು ವಿನೋದ್ ಪ್ರಭಾಕರ್ ಸ್ನೇಹಿತರಾಗಿದ್ದು 'ನವಗ್ರಹ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಜೈಲಿನಲ್ಲಿ ಮೊದಲ ದಿನ ಕಳೆದ ದರ್ಶನ್..! ಸೆರೆಮನೆಯಲ್ಲಿ ನಟನಿಗೆ ಹೇಗಿತ್ತು ಸೌಕರ್ಯ ?

ದರ್ಶನ್ ಗ್ಯಾಂಗ್‌ನ ಕೆಲ ಆರೋಪಿಗಳ ಸ್ಥಳಾಂತರಕ್ಕೆ ಮನವಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಗ್ಯಾಂಗ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಟ ದರ್ಶನ್ ಸೇರಿದಂತೆ ಕೆಲ ಆರೋಪಿಗಳನ್ನು ತುಮಕೂರು ಜೈಲಿಗೆ ಸ್ಥಳಾಂತರ ಮಾಡಲು ಪೊಲೀಸರು ಮನವಿ ಮಾಡಿದ್ದಾರೆ. ಈ ಕುರಿತು ಅರ್ಜಿ ಇಂದು 24 ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆಯಾಗಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಒಂದೇ ಕಡೆ ಇರುವುದು ಸುರಕ್ಷಿತವಲ್ಲ.  ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ ದಿನವೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂರ್ ಪ್ರಸನ್ನ ಕುಮಾರ್ ಮನವಿ ಮಾಡಿದ್ದರು. ಆದರೆ ವಿಚಾರಣೆಯನ್ನು ಜೂನ್ 24ಕ್ಕೆ ಮುಂದೂಡಲಾಗಿತ್ತು. ಪೊಲೀಸರ ಮನವಿಗೆ ದರ್ಶನ್ ಹಾಗೂ ಆತನ ಗ್ಯಾಂಗ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

click me!