ಸಿನಿಮಾ ಉದ್ದಕ್ಕೂ ನಾನು ಬೀಡ ಹಾಕೊಂಡೆ ಇದ್ದೆ; ರಿಷಬ್ ಶೆಟ್ಟಿ

By Suvarna News  |  First Published Sep 25, 2022, 11:24 AM IST

ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಉದ್ದಕ್ಕೂ ಬೀಡ ಹಾಕೊಂಡೆ ಶೂಟಿಂಗ್ ಮಾಡಿರುವುದಾಗಿ ಹೇಳಿದ್ದಾರೆ. ರಿಷಬ್ ಹೇಳಿಕೆ ಅಚ್ಚರಿ ಮೂಡಿಸಿದೆ. 


ಸ್ಯಾಂಡಲ್ ವುಡ್‌ನ ನಿರ್ದೇಶಕ, ನಟ ರಿಷಬ್ ಶೆಟ್ಟಿ ಬಹುನಿರೀಕ್ಷೆಯ ಕಾಂತಾರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರದ ಹಾಡು ಸಹ ಅಭಿಮಾನಿಗಳ ಹೃದಯ ಗೆದ್ದಿದೆ. ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಕಾಂತಾರ ಸಿನಿಮಾ ಇದೇ ತಿಂಗಳು ಸೆಪ್ಟಂಬರ್ 30ರಂದು ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಮತ್ತು ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾತಂಡ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದೆ. ಅನೇಕ ವಾಹಿನಿ ಹಾಗೂ ಯೂಟ್ಯೂಬ್ ಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ನಟ ರಿಷಬ್ 'ಕನ್ನಡ ಪಿಕ್ಚರ್' ಯೂ ಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. 

ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಉದ್ದಕ್ಕೂ ಬೀಡ ಹಾಕೊಂಡೆ ಶೂಟಿಂಗ್ ಮಾಡಿರುವುದಾಗಿ ಹೇಳಿದ್ದಾರೆ. ಇನ್ನು ಮಾತು ಮುಂದುವರೆಸಿದ ರಿಷಬ್ ಕೆಲವೊಂದು ವಿಚಾರಗಳನ್ನು ಮಾತಾಡೊಕ್ಕೆ ಹೋಗಬಾರದು, ಇವತ್ತು ಮಾತಾಡಿದೆಲ್ಲ ರಾಜಕೀಯ ಆಗುತ್ತೆ ಎಂದು ಹೇಳಿದ್ದಾರೆ. ಸದ್ಯ ರಿಷಬ್ ಸಂದರ್ಶನದ ಪ್ರೋಮೋ ಮಾತ್ರ ರಿಲೀಸ್ ಆಗಿದೆ. ಪ್ರೋಮೋದಲ್ಲಿ ಇಂಟ್ರಸ್ಟಿಂಗ್ ವಿಚಾರ ಬಿಚ್ಚಿಟ್ಟ ರಿಷಬ್ ಇನ್ನು ಸಂದರ್ಶನದಲ್ಲಿ ಏನೆಲ್ಲ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.   

Kantara Trailer; ರಿಷಬ್ - ಕಿಶೋರ್ ಕಾದಾಟ, ಟ್ರೈಲರ್ ನೋಡಿ ಫ್ಯಾನ್ಸ್ ಹೇಳಿದ್ದೇನು?

Tap to resize

Latest Videos

ಕಾಂತಾರ ಸಿನಿಮಾದಲ್ಲಿ ಕಂಬಳ ಕ್ರೀಡೆಯೇ ಹೈಲೆಟ್. ಈ ಬಗ್ಗೆ ಮಾತನಾಡಿದ ರಿಷಬ್ 'ನಮ್ಮ ಕುಟುಂಬನೇ ಕಂಬಳ ನಡೆಸುತ್ತೆ. ಆ ಗದ್ದೆ ನಮ್ಮ ಮನೆಯದ್ದೆ' ಎಂದು ಹೇಳಿದರು. ನಾವು ಅದೇ ದೈವವನ್ನು ನಂಬಿದ್ದೇವೆ, ಪೂಜಿಸುತ್ತೇವೆ ಎಂದು ಅಲ್ಲಿನ ದೇವರ ಆರಾಧನೆ ಬಗ್ಗೆಯೂ ಮಾತನಾಡಿದ್ದಾರೆ. ಇನ್ನು ಸಾಕಷ್ಟು ವಿಚಾರಗಳನ್ನು ರಿಷಬ್ ರಿವೀಲ್ ಮಾಡಿದ್ದಾರೆ. 

ಕಾಂತಾರ ಬಗ್ಗೆ ಹೇಳುವುದಾದರೆ ಕರಾವಳಿಯ ಕಂಬಳ ಕ್ರೀಡೆ, ಭೂತಕೋಲ, ಆಚಾರ, ವಿಚಾರಗಳನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ.  ಕರಾವಳಿಯ ಸಂಸ್ಕೃತಿ ಜೊತೆಗೆ ಕಾಡಿನ ಜೊತೆ ಬದುಕುವ ಜನರು ಮತ್ತು ಸರ್ಕಾರಿ ಅಧಿಕಾರಿಗಳ ಸಂಘರ್ಷ ಕೂಡ ಇದೆ.  ಫಾರೆಸ್ಟ್ ಅಧಿಕಾರಿಯಾಗಿ ಆಗಿ ಮಿಂಚಿರುವ ಕಿಶೋರ್ ಪ್ರಕೃತಿಯ ರಕ್ಷಣೆಗೆ ಮುಂದಾದರೆ ಆಚರಣೆ, ಸಾಂಪ್ರದಾಯ ಉಳಿಸಲು ರಿಷಬ್ ಹೋರಾಡುತ್ತಾರೆ. ಇಬ್ಬರ ಕಿತ್ತಾಟ, ಘರ್ಷಣೆ ಕಾಂತಾರ ಸಿನಿಮಾದಲ್ಲಿದೆ. 

Puneeth Rajkumar ಕಾಂತಾರ ಸಿನಿಮಾ ಕೈ ಬಿಟ್ಟು ರಿಷಬ್‌ ಶೆಟ್ಟಿನೇ ನಟಿಸಬೇಕು ಅಂದಿದ್ದೇಕೆ?

ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮತ್ತು ಕಿಶೋರ್, ಸಪ್ತಮಿ ಗೌಡ ಜೊತೆಗೆ ಪ್ರಶೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಕೆಜಿಎಫ್ ಖ್ಯಾತಿಯ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕಾಂತಾರ ಮೂಡಿಬಂದಿದೆ. ರಿಷಬ್ ಶೆಟ್ಟಿ ಅವರು ನಟಿಸುವ ಜೊತೆಗೆ ನಿರ್ದೇಶನದ ಜಬಾವ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಜನೀಶ್ ಲೋಕಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಕಾಂತಾರ ಸಿನಿಮಾ ಇದೇ ತಿಂಗಳು ಅಂದರೆ ಸೆಪ್ಟಂಬರ್ 30ರಂದು ರಿಲೀಸ್ ಆಗುತ್ತಿದೆ.    

click me!