ತಣ್ಣೀರ್ ಬಾವಿ ಬಗ್ಗೆ ಹೇಳಿ ಆ್ಯಂಕರ್​ ಅನುಶ್ರೀ-ರಾಜ್ ಬಿ ಶೆಟ್ಟಿ ನಕ್ಕಿದ್ದು ಯಾಕೆ? ಏನೋ ಇದೆ ಮ್ಯಾಟರ್...!

By Shriram Bhat  |  First Published Jul 30, 2024, 11:32 AM IST

'ನನಗೆ ಒಂದು ಸಿನಿಮಾದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಬೇಕೆಂದು ಕನಸಿದೆ. ನನಗೆ ಅದು ಸಿಕ್ಕಾಪಟ್ಟೆ ಇಷ್ಟ. ಯಾಕೆಂದರೆ,  ಜವಾಬ್ದಾರಿ ಜಾಸ್ತಿ ಇರಲ್ಲ, ಕಮ್ಮಿ ಇರುತ್ತೆ. ಏನೇ ಮಿಸ್ಟೇಕ್ ಆದ್ರೂ ಬೈಯ್ಯೋದು ಡೈರೆಕ್ಟರ್ ಅಥವಾ ನಟನಟಿಯರಿಗೆ...


ತುಳುನಾಡಿನ ನಟ-ನಿರ್ದೇಶಕರಲ್ಲಿ ಈಗ ಚಾಲ್ತಿಯಲ್ಲಿದ್ದು ಖ್ಯಾತಿ ಪಡೆದವರಲ್ಲಿ ರಾಜ್‌ ಬಿ ಶೆಟ್ಟಿ (Raj B Shetty) ಕೂಡ ಒಬ್ಬರು. ಅವು ಅನೇಕ ಸಂದರ್ಶನಗಳಲ್ಲಿ ತಮ್ಮ ಲೈಫ್ ಸ್ಟೋರಿ ಹೇಳಿದ್ದಾರೆ. ತಮ್ಮ ಜೀವನದ ಅನುಭವಗಳನ್ನು, ಏರಿಳಿತಗಳನ್ನು, ಕೆಲವು ಸಿದ್ಧಾಂತಗಳನ್ನು, ಸ್ವನಂಬಿಕೆಗಳನ್ನು ಹಾಗು ಅವುಗಳನ್ನು ಮೀರಿದ ಕೆಲವು ಸ್ವಾನುಭವಗಳನ್ನೂ ಸಹ ಸೋಷಿಯಲ್ ಮೀಡಿಯಾಗಳ ಮೂಲಕ, ಯೂಟ್ಯೂಬ್ ಚಾನಲ್‌ಗಳ ಮೂಲಕ ಹಂಚಿಕೊಂಡಿದ್ದಾರೆ. 

ಆಂಕರ್ ಅನುಶ್ರೀ (Ancho Anushree) ಬಗ್ಗೆ ಎಲ್ಲರಿಗೂ ಗೊತ್ತು. ಅಚ್ಚಗನ್ನಡದ ತುಳುನಾಡಿನ ಚೆಲುವೆ ಅನುಶ್ರೀ ಪಟಪಟನೆ ಮಾತನಾಡುವ ಮ್ಯಾಜಿಕಲ್ ಗೊಂಬೆ. ಇಲ್ಲಿ ನಟಿ, ನಿರೂಪಕಿ ಅನುಶ್ರೀ ಜೊತೆ ರಾಜ್‌ ಬಿ ಶೆಟ್ಟಿಯವರು ಅದೇನು ಹೇಳಿದ್ದಾರೆ ಎಂದು ನೋಡೋಣ. ರಾಜ್‌ ಬಿ ಶೆಟ್ಟಿ 'ನಾನು ನಟ ಆಗೋದಕ್ಕೂ ಮೊದಲು ಹಾಗೂ ಆದಮೇಲೆ ಕೂಡ ನಾನು ಕ್ರೌಡ್ ಕ್ಲಿಯರಿಂಗ್ ಕೂಡ ಮಾಡಿದ್ದೇನೆ, ಮಾಡುತ್ತೇನೆ. ನನಗೆ ಕೆಲಸಗಳಲ್ಲಿ ಮೇಲುಕೀಳು ಎಂಬ ಯಾವುದೇ ಭಾವನೆಯಿಲ್ಲ. 

Tap to resize

Latest Videos

undefined

ಶಂಕರ್‌ ನಾಗ್ ಕಂಡ್ರೆ ಡಾ ರಾಜ್‌ಕುಮಾರ್‌ಗೆ ಆಗ್ತಾ ಇರ್ಲಿಲ್ಲ ಅನ್ನೋದು ಶುದ್ಧ ಸುಳ್ಳು, ಇಲ್ಲಿ ನೋಡಿ!

ಒಬ್ಬರು ಬರಹಗಾರರು ಅಥವಾ ಕಲಾವಿದರು ಬದುಕಿದ್ದರೆ ಮಾತ್ರ ಬರೆಯಲು ಸಾಧ್ಯ ಎಂದಿದ್ದಾರೆ ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ. ಒಂದು ಮೊಟ್ಟೆಯ ಕಥೆ ಸಿನಿಮಾಗಿಂತ ಮೊದಲು ನಾನು ಐದು ಸಿನಿಮಾ ಸ್ಕ್ರಿಪ್ಟ್‌ಗಳನ್ನು ಬರೆದಿದ್ದೇನೆ. ಆದರೆ ಅದಕ್ಕೆ ನನಗೆ ಸಿಕ್ಕಿರುವ ಅಡ್ವಾನ್ಸ್‌ ಪೇಮೆಂಟ್ ಕೇವಲ ಐದು ನೂರು ರೂಪಾಯಿ ಎಂದಿದ್ದಾರೆ ರಾಜ್ ಬಿ ಶೆಟ್ಟಿ. ಬರಹಗಾರರು, ಕಲಾವಿದರು ಮೊದಲು ಬದುಕಬೇಕು. ಅದಕ್ಕೆ ತಕ್ಕ ವ್ಯವಸ್ಥೆ ಮಾಡಿಕೊಂಡು ನಂತರ ನಮ್ಮ ಗುರಿಯ ಕಡೆ ಗಮನ ಹರಿಸಬಹುದು. 

ಇನ್ನೊಂದು ಅಚ್ಚರಿಯ ಸಂಗತಿಯನ್ನು ನಟ-ನಿರ್ದೇಶಕ ರಾಜ್‌ ಬಿ ಶೆಟ್ಟಿ ಹೇಳಿದ್ದಾರೆ. ಅದು'ನನಗೆ ಒಂದು ಸಿನಿಮಾದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಬೇಕೆಂದು ಕನಸಿದೆ. ನನಗೆ ಅದು ಸಿಕ್ಕಾಪಟ್ಟೆ ಇಷ್ಟ. ಯಾಕೆಂದರೆ,  ಜವಾಬ್ದಾರಿ ಜಾಸ್ತಿ ಇರಲ್ಲ, ಕಮ್ಮಿ ಇರುತ್ತೆ. ಏನೇ ಮಿಸ್ಟೇಕ್ ಆದ್ರೂ ಬೈಯ್ಯೋದು ಡೈರೆಕ್ಟರ್ ಅಥವಾ ನಟನಟಿಯರಿಗೆ. ಅಲ್ಲಿ ಕಲಿಯೋದಕ್ಕೆಡ ತುಂಬಾ ಇರುತ್ತೆ, ಮತ್ತು ನಾವು ಎಷ್ಟು ಬೇಕಾದ್ರೂ ಕಲಿಬಹುದು. ನನಗೆ ಅಸೋಸಿಯೇಟ್ ಕೆಲಸ ಅಂದ್ರೆ ಸಖತ್ ಇಷ್ಟ' ಅಂದಿದ್ದಾರೆ ರಾಜ್ ಬಿ ಶೆಟ್ಟಿ. 

ಪ್ಯಾನ್ ಇಂಡಿಯಾ ಟ್ರೆಂಡ್ ಭೂತಪ್ರೇತವೇ? ಇದಕ್ಕೆ ಬೈದರೆ ಸಮಸ್ಯೆ ಪರಿಹಾರ ಆಗುವುದೇ? ಯೆಸ್ or ನೋ..?!

ಒಟ್ಟಿನಲ್ಲಿ, ಒಂದು ಮೊಟ್ಟೆಯ ಕತೆ ಚಿತ್ರದ ಮೂಲಕ ರಾಜ್ ಬಿ ಶೆಟ್ಟಿಯವರು ಒಂದು ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ ಎನ್ನಬಹುದು. ಕಾರಣ, ನಟರಾಗಲು ಜಮ್ ಬಾಡಿ ಬೇಕು, ಹೈಟ್-ಪರ್ಸನಾಲಿಟಿ ಅದೂ ಇದೂ ಅಂತ ಯಾವುದೆಲ್ಲಾ ಬೇಕು ಎಂಬುದನ್ನು ಸುಳ್ಳು ಮಾಡಿದ್ದಾರೆ. ಟ್ಯಾಲೆಂಟ್ ಇದ್ದರೆ, ಪರ್ಸನಾಲಿಟಿಗೆ ತಕ್ಕ ಪಾತ್ರವನ್ನು ಸೃಷ್ಟಿಸಿಕೊಂಡರೆ ಇಲ್ಲಿ ಯಾರೇ ಬೇಕಾದರೂ ನಟರಾಗಬಹುದು, ನಿರ್ದೇಶಕರಾಗಬಹುದು ಎಂಬುದನ್ನು ಸಾಕ್ಷಿ ಸಮೇತ ಪ್ರೂವ್ ಮಾಡಿದ್ದಾರೆ ಎನ್ನಬಹುದು. 
 

click me!