
ಕನ್ನಡ ಚಿತ್ರರಂಗದಲ್ಲಿ ನಟ ಹಾಗೂ ನಿರ್ದೇಶಕ ರಘುರಾಮ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್. ದಿನೇ ದಿನೇ ತಮ್ಮ ವೃತ್ತಿ ಜೀವನದಲ್ಲಿ ಕಂಡ, ಎದುರಿಸಿದ ಅದ್ಭುತ ಕ್ಷಣಗಳನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಇತ್ತೀಚೆಗೆ ರಘುರಾಮ್ ಅವರು ತಮ್ಮ ಬಾಲ್ಯದ ಫೋಟೋ ಜೊತೆಗೆ ಮಿನುಗುತಾರೆ ಕಲ್ಪನಾ ಬರೆದ ಕೆಲವು ಸಾಲುಗಳನ್ನೂ ಶೇರ್ ಮಾಡಿಕೊಂಡಿದ್ದಾರೆ. 'ಮಿನುಗುತಾರೆ ಕಲ್ಪನಾ ನನ್ನ ಅಮ್ಮನ ಸ್ನೇಹಿತೆ. ಈ ನನ್ನ ಬಾಲ್ಯದ ಫೋಟೋ ಹಿಂದೆ ಅವರ ಕೈ ಬರಹದಲ್ಲಿ ನನಗೆ ಆಶೀರ್ವದಿಸಿ, ಹಾರೈಸಿದ ಈ ಫೋಟೋ ನನಗೆ ಅತ್ಯಂತ ವಿಶೇಷವಾದದ್ದು,' ಎಂದು ಬರೆದುಕೊಂಡಿದ್ದಾರೆ.
ಕಲ್ಪನಾ ಅವರು ' ಶ್ರೀ ಗುರು ಮಗುವಿಗೆ ದೀರ್ಘಾಯುರಾರೋಗ್ಯ, ಆಯಸ್ಸು ಕೊಟ್ಟು ಕಾಪಾಡಲೆಂದು ಮನಸ್ಸಿನಿಂದ ಆಶೀರ್ವದಿಸುವೆ,' ಎಂದು ದಿನಾಂಕದೊಂದಿಗೆ ರಘುರಾಮ್‌ಗೆ ವಿಶ್ ಮಾಡಿದ್ದಾರೆ.
ಕಲ್ಪನಾ 80ರ ದಶಕದ ಕನ್ನಡದ ಖ್ಯಾತ ನಟಿ. ಮೂಲತಃ ದಕ್ಷಿಣ ಕನ್ನಡದವರಾದ ಇವರು ವಿಭಿನ್ನ ಪಾತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದವರು. 'ಬೆಳ್ಳಿಮೋಡ' 'ಬಂಗಾರದ ಹೂವು' 'ಗೆಜ್ಜೆಪೂಜೆ' 'ಶರಪಂಜರ' 'ಕರುಳಿನ ಕರೆ' 'ಮಣ್ಣಿನ ಮಗ' 'ನಾಂದಿ...' ಮುಂತಾದ ಚಿತ್ರಗಳ ಮೂಲಕ ವಿಭಿನ್ನ ಪಾತ್ರಗಳಿಂದಲೇ ಕನ್ನಡಿಗರ ನೆಚ್ಚಿನ ನಟಿಯಾಗಿ ಮೆರೆದವರು. ಅವರ ಶರಪಂಜರ ಮಾನಸಿಕ ಅಸ್ವಸ್ಥೆ ಪಾತ್ರ ಪ್ರತಿಯೊಬ್ಬ ಚಿತ್ರ ನಟಿಯ ಕನಸಿನ ಪಾತ್ರವೂ ಹೌದು. ಅವರ ಅದ್ಭುತ ನಟನೆಗೆ ಮಾರು ಹೋಗದವರೇ ಇಲ್ಲ.
SIIMA Award ನಲ್ಲಿ 'ಟಗರು'ಗಿಲ್ಲ ಮನ್ನಣೆ; ನಿರ್ದೇಶಕ ಫುಲ್ ಗರಂ!
ಚರ್ಮ ಸಮಸ್ಯೆಯಿಂದ ಈ ನಟಿ ಬಳಲುತ್ತಿದ್ದರು ಎನ್ನಲಾಗುತ್ತಿತ್ತು. ಖಿನ್ನತೆಗೂ ಗುರಿಯಾಗಿದ್ದರು. ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿ, ಬದುಕಿ ಬಂದಿದ್ದ ಕಲ್ಪನಾ ಕಡೆಗೂ 50ಕ್ಕೂ ಹೆಚ್ಚು ನಿದ್ರೆ ಮಾತ್ರೆಗಳನ್ನೇ ನುಂಗಿ ಆತ್ಮಹತ್ಯೆ ಮಾಡಿಕೊಂಡರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.