ಸಿನೆಮಾದಲ್ಲಿ ಚಾನ್ಸ್ ಕೊಡ್ತಿನಿ ಅಂತ 75 ಲಕ್ಷ ಪಡೆದ ಸ್ಯಾಂಡಲ್ ವುಡ್ ನಿರ್ಮಾಪಕ, ಬಾಳು ಕೊಡ್ತಿನಿನೆಂದು ಅತ್ಯಾಚಾರ!

Published : Jun 14, 2023, 10:59 PM IST
ಸಿನೆಮಾದಲ್ಲಿ ಚಾನ್ಸ್ ಕೊಡ್ತಿನಿ ಅಂತ 75 ಲಕ್ಷ ಪಡೆದ ಸ್ಯಾಂಡಲ್ ವುಡ್ ನಿರ್ಮಾಪಕ, ಬಾಳು ಕೊಡ್ತಿನಿನೆಂದು ಅತ್ಯಾಚಾರ!

ಸಾರಾಂಶ

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಲವ್ , ಸೆಕ್ಸ್ ,ದೋಖಾ ಬೆಳಕಿಗೆ ಬಂದಿದೆ. 'ಟೊಮ್ಯಾಟೊ'ದಲ್ಲಿ ಚಾನ್ಸ್ ಕೊಡುಸ್ತಿನಿ  ಎಂದು  75 ಲಕ್ಷ ತೆಗೆದುಕೊಂಡು ನಿರ್ಮಾಪಕ ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ.

ಬೆಂಗಳೂರು (ಜೂ.14): ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಲವ್ , ಸೆಕ್ಸ್ ,ದೋಖಾ ಬೆಳಕಿಗೆ ಬಂದಿದೆ. 'ಟೊಮ್ಯಾಟೊ'ದಲ್ಲಿ ಚಾನ್ಸ್ ಕೊಡುಸ್ತಿನಿ  ಎಂದು  75 ಲಕ್ಷ ತೆಗೆದುಕೊಂಡು ಮಹಿಳೆಯ ಮರ್ಯಾದೆಯನ್ನೂ ತೆಗೆದಿರುವ ಘಟನೆ ಬೆಳಕಿಗೆ ಬಂದಿದೆ.

"ದಿ ಕಲರ್ ಆಫ್ ಟೊಮೆಟೋ" ಚಿತ್ರ ನಿರ್ಮಾಪಕನ ವಿರುದ್ಧ ಮಹಿಳೆ  ಅತ್ಯಾಚಾರ ದೂರ ದಾಖಲಿಸಿದ್ದಾರೆ. ಚಿತ್ರರಂಗದಲ್ಲಿ ಮಿಂಚಬೇಕು ಎಂದು ಕನಸು ಕಂಡಿದ್ದವಳ ಮೇಲೆ ನಿರ್ಮಾಪಕ  ಅತ್ಯಾಚಾರ ಎಸಗಿದ್ದಾನೆ. ಸಿನಿಮಾ ಮಾಡೋದಾಗಿ 75 ಲಕ್ಷ ಹಣ ಪಡೆದುಕೊಂಡಿದ್ದನಂತೆ ಸಿನಿಮಾ ರಿಲೀಸ್ ಆದ್ಮೆಲೆ ಬಿಗ್ ಹಿಟ್ ಆಗುತ್ತೆ 75 ಲಕ್ಷದ ಬದಲಾಗಿ 1.5 ಕೋಟಿ ಕೊಡ್ತಿನಿ ಎಂದು ನಂಬಿಸಿದ್ದನಂತೆ. ಈ ಮೂಲಕ ನಟನೆಗೆ ಅವಕಾಶ ಕೊಡೋದಾಗಿ ನಿರ್ಮಾಪಕ ವಂಚನೆ ಮಾಡಿದ್ದಾನೆ. The colour of tomoto  ಎಂಬ ವಿಲಕ್ಷಣ ಹೆಸರಿನ ಚಿತ್ರ ನಿರ್ಮಾಪಕ ಈ ಕೃತ್ಯ ಎಸಗಿದ್ದು, 50 ಹಾಗೂ ದಿ ಕಲರ್ಸ್ ಆಫ್ ಟೊಮೋಟೋ ಎಂಬ ಎರಡು ಚಿತ್ರ ಮಾಡ್ತಿನಿ ಹೀಗಾಗಿ 75 ಲಕ್ಷ ಬೇಕು ಎಂದು ನಿರ್ಮಾಪಕ ಕುಮಾರ್  ಹೇಳಿದ್ದನಂತೆ.

ಚಿತ್ರದಲ್ಲಿ ಅವಕಾಶ ಸಿಗುತ್ತೆ ಹಾಗು ಕೊಟ್ಟ ಹಣ ಡಬಲ್ ಆಗಿ ರಿಟರ್ನ್ ಬರುತ್ತೆ ಎಂದು ನಂಬಿದ್ದ ಮಹಿಳೆ ಹಣ ನೀಡಿದ್ದಳು. ಸಿನೆಮಾದಲ್ಲಿ ಚಾನ್ಸ್ ಕೊಡಿಸ್ತಿನಿ, ನಂತರ ಬಾಳು ಕೊಡ್ತಿನಿ ಎಂದು ನಂಬಿಸಿದ ಕುಮಾರ್  ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನಂತೆ.

ಸ್ವಲ್ಪ ದಿನಗಳ ಬಳಿಕ ಮಹಿಳೆ ಹಣ ವಾಪಾಸ್ ಕೇಳಿದ್ದಾಳೆ. ಒಂದಷ್ಟು ದಿನ ಸಬೂಬು ಹೇಳಿಕೊಂಡೇ ತಿರುಗಾಡುತ್ತಿದ್ದ ನಿರ್ಮಾಪಕ ಕುಮಾರ್ ಬಳಿಕ ಯಾವಾಗ ಹಣಕ್ಕಾಗಿ ಮಹಿಳೆ ಒತ್ತಡ ಹಾಕಿದ್ಲೋ ತನ್ನ ಕಚೇರಿಗೆ ಕರೆಸಿಕೊಂಡಿದ್ದಾನೆ. ಚೆಕ್ ಕೊಡ್ತಿನಿ ಬಾ ಎಂದು ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾನಂತೆ. ಸಂತ್ರಸ್ತ ಮಹಿಳೆ  ಹೀಗೆಂದು ದೂರು ನೀಡಿದ್ದಾಳೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ಯದ ಗಡಿ ಆನೇಕಲ್‌ನಲ್ಲಿ ದರ್ಶನ್ 'ಡೆವಿಲ್‌'ಗೆ ಹೀಗೆಲ್ಲಾ ಆಗ್ತಿದ್ಯಾ?
ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು