ಆಕ್ಷನ್ ಪ್ರಿನ್ಸ್ , ಸ್ಯಾಂಡಲ್‌ವುಡ್ ನಟ ಧುವ ಸರ್ಜಾ ಮತ್ತು ಪ್ರೇರಣಾ ದಂಪತಿ ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಕುಟುಂಬಸ್ಥರ ಸಮುಖದಲ್ಲಿ ಪುತ್ರ ಮತ್ತು ಪುತ್ರಿಗೆ ಧ್ರುವ ಸರ್ಜಾ ನಾಮಕರಣ ನೆರವೇರಿಸಿದ್ದಾರೆ.
ಆಕ್ಷನ್ ಪ್ರಿನ್ಸ್ , ಸ್ಯಾಂಡಲ್‌ವುಡ್ ನಟ ಧುವ ಸರ್ಜಾ ಮತ್ತು ಪ್ರೇರಣಾ ದಂಪತಿ ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಕುಟುಂಬಸ್ಥರ ಸಮುಖದಲ್ಲಿ ಪುತ್ರ ಮತ್ತು ಪುತ್ರಿಗೆ ಧ್ರುವ ಸರ್ಜಾ ನಾಮಕರಣ ನೆರವೇರಿಸಿದ್ದು, ಪುತ್ರಿಯ ಹೆಸರು ರುದ್ರಾಕ್ಷಿ ಧ್ರುವ ಸರ್ಜಾ ಎಂದೂ ಪುತ್ರನ ಹೆಸರು ಹಯಗ್ರೀವ ಎಂದು ಹೆಸರಿಟ್ಟಿದ್ದಾರೆ. ಅರ್ಜುನ್ ಸರ್ಜಾ ನಾಮಕರಣ ಸಮಾರಂಭದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.
ಶಿವನಿಗೆ ಬಹಳ ಪ್ರಿಯವಾದುದು ರುದ್ರಾಕ್ಷಿ, ಮಹಿರಾವಣನನ್ನ ಸಂಹಾರ ಮಾಡುವ ಸಲುವಾಗಿ ವಾಯುಪುತ್ರ ಹನುಮಂತನು ಪಂಚಮುಖಿ ಆಂಜನೇಯಸ್ವಾಮಿಯಾಗಿ ಅವತಾರ ತಾಳುತ್ತಾನೆ. ಪಂಚಮುಖಿ ಎಂದರೆ ಐದು ಮುಖಗಳು ಎಂದರ್ಥ. ಇದರಲ್ಲಿ ಹನುಮಂತನ ಮುಖ ಸೇರಿದಂತೆ ನರಸಿಂಹ, ವರಾಹ, ಹಯಗ್ರೀವ ಹಾಗೂ ಗರುಡ ಸೇರಿದಂತೆ ಐದು ಮುಖಗಳಾಗಿವೆ.
ಅಕ್ಟೋಬರ್2 ರ 2022 ರಲ್ಲಿ ಧ್ರುವ ದಂಪತಿಗೆ ಮೊದಲ ಮಗಳ ಜನನವಾಗಿತ್ತು. 2023 ರ ಸೆಪ್ಟೆಂಬರ್‌ನಲ್ಲಿ ಗಂಡು ಮಗುವಿನ ಜನನವಾಗಿತ್ತು. ಅಯೋಧ್ಯೆಯ ರಾಮ ಮಂದಿರದಲ್ಲಿ (Rama Mandir) ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ದಿನವೇ ಸರ್ಜಾ ಕುಟುಂಬದ ಕುಡಿಗಳಿಗೆ ಹೆಸರಿಡಲಾಗಿದೆ.
ಧ್ರುವ ಸರ್ಜಾ ಅವರು ಹನುಮನ ಭಕ್ತರು. ಆಂಜನೇಯನ ಕಂಡರೆ ಅವರಿಗೆ ಅಪಾರ ಭಕ್ತಿ. ರಾಮನ ಬಂಟ ಎಂಬ ಖ್ಯಾತಿ ಆಂಜನೇಯನಿಗೆ ಇದೆ. ಈ ಕಾರಣದಿಂದಲೇ ರಾಮ ಮಂದಿರದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದ ದಿನವೇ ಮಕ್ಕಳಿಗೆ ನಾಮಕರಣ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿದ ಧ್ರುವ ಸರ್ಜಾ , ಜನವರಿ 22 ನಾಮಕರಣ ಡೇಟ್ ಬಂತು. ಇಬ್ಬರು ಮಕ್ಕಳಿಗೂ ಒಟ್ಟಿಗೆ ನಾಮಕರಣ ಮಾಡೋದಕ್ಕೆ ಪ್ಲ್ಯಾನ್ ಮಾಡಿದ್ವಿ. ಇದೇ ದಿನ ನಮ್ಮ ಬಾಸ್ ರಾಮ ಮಂದಿರದ ಉದ್ಘಾಟನೆ ಆಗಿದೆ. ತುಂಬಾ ಖುಷಿ ಆಗುತ್ತಿದೆ. ಮಗಳಿಗೆ ರುದ್ರಾಕ್ಷಿ ಡಿ ಸರ್ಜಾ, ಮಗನಿಗೆ ಹಯಗ್ರೀವ ಅನ್ನೋ ಹೆಸರಿಟ್ಟಿದ್ದೇವೆ. ಒತ್ತಕ್ಷರ ಹೆಸರಿಡಬೇಕು ಅಂತ ಈ ನಿರ್ಧಾರ ಮಾಡಿದ್ವಿ. ಒತ್ತಕ್ಷರ ಅಂದ್ರೆ ತುಂಬಾ ಒಳ್ಳೆಯದು ಅಂತ. ಯಾವುದೇ ಫ್ಯಾನ್ಸಿ ಹೆಸರು ಇಡಬಾರದು ಅಂತ ನಿರ್ಧಾರ ಮಾಡಿದ್ವಿ. ಅಯೋಧ್ಯೆಯಲ್ಲಿ 12.20 ಕ್ಕೆ ಪೂಜೆ ಇತ್ತು. ನಾವು ನಮ್ಮ ಮಕ್ಕಳಿಗೂ ಅದೇ ಸಮಯಕ್ಕೆ ನಾಮಕರಣ ಮಾಡಿದ್ವಿ. ಸಂಜಯ್ ದತ್ ಅವರು ಶಿವನ ಭಕ್ತರು. ಮಗಳಿಗೆ ರುದ್ರಾಕ್ಷಿ ಅಂತ ಹೆಸರಿಟ್ಟಿದ್ದಕ್ಕೆ ಖುಷಿ ಆದ್ರು. ಈ ಜಾಗದಲ್ಲಿ ಅಣ್ಣ ಇದ್ಧಾನೆ ಹೀಗಾಗಿ ಇಲ್ಲಿಯೇ ಮಾಡಿದ್ವಿ. ನಾವು ಇಡೀ ಫ್ಯಾಮಿಲಿ ಜೊತೆ ಅಯೋಧ್ಯೆಗೆ ಹೋಗುತ್ತೇವೆ ಎಂದಿದ್ದಾರೆ.