
ಲೂಸ್‌ಮಾದ ಯೋಗೀಶ್ ನಟನೆಯ ‘ಲಂಕೆ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ನಟ ಧನಂಜಯ್ ಮುಖ್ಯ ಅತಿಥಿಯಾಗಿ ಆಗಮಿಸಿ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಆನಂದ್ ಆಡಿಯೋದಲ್ಲಿ ಈ ಸಿನಿಮಾದ ಹಾಡುಗಳನ್ನು ಕೇಳಬಹುದು.
ಕೃಷಿ ತಾಪಂಡ, ಎಸ್ತಾರ್ ನರೋನ್ಹ, ಕಾವ್ಯ ಶೆಟ್ಟಿಚಿತ್ರದ ನಾಯಕಿಯರು. ರಾಮ್ ಪ್ರಸಾದ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಲೂಸ್ ಮಾದ ಯೋಗೀಶ್, ‘ನಾನು ಇಷ್ಟುಚೆನ್ನಾಗಿ ನೃತ್ಯ ಮಾಡಲು ಸಾಧ್ಯವಾಗಿದ್ದು ನೃತ್ಯ ನಿರ್ದೇಶಕ ಧನು ಅವರಿಂದಲೇ.
ಅನಂತ್‌ನಾಗ್ ಹೊಸ ಸಿನಿಮಾ ಆಬ್ರಕಡಾಬ್ರ
ನನಗೆ ಈ ಸಿನಿಮಾ ಬ್ರೇಕ್ ಕೊಡುವ ಭರವಸೆ ಇದೆ. ಕಾರ್ತಿಕ್ ಶರ್ಮರ ಸಂಗೀತ ಅದ್ಭುತವಾಗಿದೆ. ನನ್ನ ಜತೆ ಅಭಿನಯಿಸಿರುವ ನಾಯಕಿಯರ ಅಭಿನಯವು ತುಂಬಾ ಚೆನ್ನಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನೋಡಿ ಹರಸಿ’ ಎಂದರು.
ಚಿತ್ರದಲ್ಲಿ ಕಾವ್ಯ ಶೆಟ್ಟಿತುಂಬಾ ಗ್ಲಾಮರ್ ಪಾತ್ರ ಮಾಡಿದ್ದರೆ, ಎಸ್ತಾರ್ ಅವರದ್ದು ಟಾಮ್ ಬಾಯ್ ಪಾತ್ರವಂತೆ. ಗೌಸ್ ಪೀರ್ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದಾರೆ. ಮಾರ್ಸ್ ಸುರೇಶ್ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಸಂಚಾರಿ ವಿಜಯ್ ಈ ಚಿತ್ರದಲ್ಲಿ ನಟಿಸಿದ್ದು, ಅವರು ಇಲ್ಲ ಎನ್ನುವ ನೋವು ಇದೆ ಎಂದು ಚಿತ್ರತಂಡ ಹೇಳಿಕೊಂಡಿತು. ನಿರ್ದೇಶಕರ ಜತೆ ಸೇರಿ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದು, ಪಟೇಲ… ಶ್ರೀನಿವಾಸ್ ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ರಮೇಶ್ ಬಾಬು ಛಾಯಾಗ್ರಾಹಣ ಮಾಡಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.