ಅನಂತ್‌ನಾಗ್ ಪ್ರಧಾನ ಪಾತ್ರದಲ್ಲಿ ನಟಿಸುವ ಸಿನಿಮಾ ಘೋಷಣೆಯಾದಾಗಲೆಲ್ಲಾ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಕೊಳ್ಳುತ್ತದೆ. ಆ ಕುತೂಹಲದ ಹೊಸ ಹೆಸರು ‘ಆಬ್ರಕಡಾಬ್ರ.’
ಶಾರ್ಟ್‌ಫಿಲ್ಮ್, ಆ್ಯಡ್ ಫಿಲ್ಮ್ ಮಾಡಿಕೊಂಡಿದ್ದ ಉಡುಪಿಯ ಶಿಶಿರ್ ರಾಜಮೋಹನ್ ನಿರ್ದೇಶನದ ಸಿನಿಮಾ ಇದು. ನಿರ್ಮಾಣ ಮಾಡುತ್ತಿರುವುದು ರಕ್ಷಿತ್ ಶೆಟ್ಟಿ, ಜಿಎಸ್ ಗುಪ್ತಾ ಅವರ ಪರಂವಾಹ ಸ್ಟುಡಿಯೋ. ಅನಂತ್‌ನಾಗ್, ಸಿರಿ ರವಿಕುಮಾರ್, ಬಿವಿ ಶೃಂಗ, ರವಿಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
'ಮತ್ತೆ ಮನ್ವಂತರ'ದಲ್ಲಿ ಬರಲಿದ್ದಾರೆ ಮೇಧಾ ವಿದ್ಯಾಭೂಷಣ್
‘ಹೊರಗೆ ನಿಂತುಕೊಂಡು ಒಳಗೆ ಏನು ನಡೆಯುತ್ತಿದೆ ಅಂತ ನೋಡುವ ಪ್ರಯತ್ನ ಇದು. ಎಲ್ಲರಿಗೂ ಒಂದೇ ರೀತಿಯ ಜರ್ನಿ ಇರುತ್ತದೆ. ಆದರೆ ಯಾರು ಹೇಗೆ ಹೆಜ್ಜೆ ಇಡುತ್ತಾರೆ ಅನ್ನುವುದು ಮುಖ್ಯ. ನಾನು ಇಲ್ಲಿ ಏನನ್ನೂ ಹೇಳಲು ಹೊರಟಿಲ್ಲ. ದೂರದಿಂದ ನಿಂತುಕೊಂಡು ನೋಡುತ್ತಿದ್ದೇನೆ. ನೀವು ನನ್ನ ಮೇಲೆ ಭರವಸೆ ಇಡುವುದಾದರೆ ಆ ಭರವಸೆ ಸುಳ್ಳು ಮಾಡಲಾರೆ’ ಎನ್ನುತ್ತಾರೆ ನಿರ್ದೇಶಕ ಶಿಶಿರ್ ರಾಜಮೋಹನ್.
ಹಿರಿಯ ಛಾಯಾಗ್ರಾಹಕ ಜಿ.ಎಸ್. ಭಾಸ್ಕರ್ ಈ ಚಿತ್ರದ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ವರ್ಷಾ ಕೊಡ್ಗಿ ವಿನ್ಯಾಸ ಮಾಡಿರುವ ಸಿನಿಮಾದ ಪೋಸ್ಟರ್ ಸದ್ಯ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ.