
ಸ್ಯಾಂಡಲ್‌ವುಡ್ ಸಿಂಪಲ್ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ನಟಿಸಿರುವ ಸಪ್ತ ಸಾಗರದಾಚೆ ಎಲ್ಲೋ ಸೈಡ್ A ಮತ್ತು ಸೈಡ್ B ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಕಂಡಿತ್ತು. ಎಲ್ಲೇ ನೋಡಿದರೂ ಕೇಳಿದರೂ ಮನು ಅನ್ನೋ ಹೆಸರು ಮತ್ತು ಚಿತ್ರದ ಟೈಟಲ್ ಟ್ರಾಕ್ ಹಾಡುತ್ತಿದ್ದ ಜನರು ಈಗ ಇದ್ದಕ್ಕಿದ್ದಂತೆ ಚಿತ್ರದ ಪೋಸ್ಟರ್ ಬದಲಾಯಿಸಿ ಮತ್ತೊಂದು ಟೈಟಲ್ ನೀಡಿದ್ದಾರೆ. ಅಲ್ಲದೆ ಈ ತರ ಕ್ರಿಯೇಟಿವ್ ಮೈಂಡ್ ಬರೋದು ಈ ಟ್ರೋಲ್ ಪೇಜ್ ಅವರಿಗೆ ಮಾತ್ರ ಅನ್ಸುತ್ತೆ. ಏನಂತೀರಾ?
ಹೌದು! ಸಿನಿಮಾ ಕಥೆ ಪ್ರಕಾರ ರಕ್ಷಿತ್ ಶೆಟ್ಟಿ ಜೈಲು ಸೇರಿರುತ್ತಾರೆ ಹಾಗೂ ರುಕ್ಮಿಣಿ ಹೊರಗಿರುತ್ತಾರೆ. ರಕ್ಷಿತ್‌ನ ಹೊರಗೆ ತರಬೇಕು ಎಂದು ಸಾಕಷ್ಟು ಹರ ಸಾಹಸ ಮಾಡುತ್ತಿರುತ್ತಾರೆ. ವಾರಕ್ಕೊಮ್ಮೆ ಭೇಟಿ ಮಾಡಲು ಬರುವಾಗ ಒಬ್ಬರನ್ನೊಬ್ಬರು ನೋಡಿಕೊಂಡು ನಗುತ್ತಿದ್ದರು. ಈ ಸೀನ್ ಸಖತ್ ವೈರಲ್ ಕೂಡ ಆಗಿತ್ತು. ಆದರೆ ಈ ಟ್ರೋಲ್ ಪೇಜ್‌ಗಳು ಇದನ್ನು ದರ್ಶನ್ ಮತ್ತು ಪವಿತ್ರಾ ಗೌಡಗೆ ಲಿಂಕ್ ಮಾಡಿಬಿಟ್ಟಿದ್ದಾರೆ. ಮನು ಉರ್ಫ್ ರಕ್ಷಿತ್ ಶೆಟ್ಟಿ ಜಾಗದಲ್ಲಿ ದರ್ಶನ್ ಇದ್ದಹಾಗೆ, ರುಕ್ಮಿಣಿ ವಸಂತ್ ಜಾಗದಲ್ಲಿ ಪವಿತ್ರಾ ಗೌಡ ಇರುವಂತೆ ಎಡಿಟ್ ಮಾಡಿಬಿಟ್ಟಿದ್ದಾರೆ. ಈ ಫೊಟೋ ವೈರಲ್ ಆಗುತ್ತಿದ್ದ ಬೆನ್ನಲೆ ಸಪ್ತ ಶೆಡ್ಡಿನಾಚೆ ಸೈಡ್ D ಎಂದು ನಾಮಕರಣ ಮಾಡುತ್ತಿದ್ದಾರೆ.
ಈ ವಿಚಾರಕ್ಕೆ ಮೊನ್ನೆ ನನ್ಗೂ ನನ್ನ ಹೆಂಡ್ತಿಗೂ ಜಗಳ ಆಯ್ತು, ಸ್ವಿಗ್ಗಿಯಲ್ಲಿ ಊಟ ತರ್ಸ್ಕೊಂಡೆ: ಪ್ರಥಮ್
ಈಗ ಪವಿತ್ರಾ ಗೌಡ, ಪವನ್ ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಲ್, ಕೇಶವ್,ರವಿ ಕಾರ್ತಿಕ್ ಜೈಲು ಸೇರಿದ್ದಾರೆ. ಹೈಫೈ ಜೀವನ ಮಾಡುತ್ತಿದ್ದ ಪವಿತ್ರಾ ಗೌಡ ಜೈಲು ಹಕ್ಕಿಯಾಗಿ ಸೆರೆವಾಸ ಅನುಭವಿಸುತ್ತಿದ್ದಾರೆ. ಕೋರ್ಟ್ ವಿಚಾರಣೆ ಮುಗಿಸಿಕೊಂಡು ಪೊಲೀಸ್ ವ್ಯಾನ್ ಹತ್ತಿದಾಗ ಪವಿತ್ರಾಳನ್ನು ಮಾತನಾಡಿಸಲು ಸ್ನೇಹಿತೆ, ತಾಯಿ ಮತ್ತು ಪುತ್ರಿ ಆಗಮಿಸಿದ್ದರು. ಜನರಿದ್ದ ಕಾರಣ ನೂಕುನುಗ್ಗಲಿನಲ್ಲಿ ತಾಯಿಯನ್ನು ಖುಷಿ ಮಾತನಾಡಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.