ಫಿಕ್ಸ್ ಆಯ್ತು ಡಾಲಿ ಧನಂಜಯ್ ಮದುವೆ, ಬಹುಕಾಲದ ಗೆಳತಿ ಜೊತೆ ಹಸಮಣೆ ಏರುತ್ತಿದ್ದಾರೆ ನಟ!

By Chethan Kumar  |  First Published Nov 1, 2024, 8:22 AM IST

ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟ, ನಿರ್ಮಾಪಕ ಡಾಲಿ ಧನಂಜಯ್‌ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಬಹುಕಾಲದ ಗೆಳತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. 


ಬೆಂಗಳೂರು(ನ.01)  ಸೂಪರ್ ಹಿಟ್ ಚಿತ್ರದ ಮೂಲಕ ಅಭಿಮಾನಿಗಳ ಮನಗೆದ್ದಿರುವ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ವೈವಾಹಿಕ ಬದುಕಿಗೆ ಕಾಲಿಡಲು ಸಜ್ಜಾಗಿದ್ದಾರೆ. ಡಾಲಿ ಮನಸ್ಸು ಕದ್ದ ಹುಡುಗಿ ಯಾರು ಅನ್ನೋದು ಬಹಿರಂಗವಾಗಿದೆ. ಬಹು ಕಾಲದ ಗೆಳತಿ ಧನ್ಯಾತಾ ಜೊತೆ ಡಾಲಿ ಧನಂಜಯ್ ಮದುವೆಯಾಗುತ್ತಿದ್ದಾರೆ. ವೈದ್ಯೆಯಾಗಿರುವ ಧನ್ಯತಾ ಮೂಲತಋ ಚಿತ್ರದುರ್ಗದವರು. ಕಳೆದ ಕೆಲ ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 

38ರ ಹರೆದ ಡಾಲಿ ಧನಂಜಯ್ ಮದುವೆ ಕುರಿತು ಹಲವು ವೇದಿಕೆಗಲ್ಲಿ ಚರ್ಚೆಯಾಗಿದೆ. ನಟ ನಟಿಯರು, ಕಟುಬಸ್ಥರು ಡಾಲಿ ಬಳಿ ಮದುವೆ ಯಾವಾಗ ಅನ್ನೋ ಪ್ರಶ್ನೇ ಕೇಳುತ್ತಲೇ ಬಂದಿದ್ದಾರೆ. ಈ ವೇಳೆ ಕಂಕಣ ಭಾಗ್ಯ ಕೂಡಿಬರಬೇಕು ಎನ್ನುತ್ತಿದ್ದ ನಟ, ಪ್ರೀತಿ ವಿಚಾರ ಗೌಪ್ಯವಾಗಿಟ್ಟಿದ್ದರು. ಎಲ್ಲೂ ಕೂಡ ಧನ್ಯತಾ ಜೊತೆಗಿನ ಪ್ರೀತಿ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಇದೀಗ ದೀಪಾವಳಿ ಹಬ್ಬದ ದಿನ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ. ಧನ್ಯತಾ ಜೊತೆ ಫೋಟೋಶೂಟ್ ಮಾಡಿಸಿಕೊಂಡಿರುವ ಡಾಲಿ ಧನಂಜಯ್ ಅಧಿಕೃತವಾಗಿ ತಮ್ಮ ಪ್ರೀತಿ ಹಾಗೂ ಮದುವೆ ಘೋಷಿಸಿದ್ದಾರೆ. 

Tap to resize

Latest Videos

undefined

ಯಾರಿಗೂ ಗುರುತು ಸಿಗದಂತೆ ಮಾರುವೇಷದಲ್ಲಿ ಮೆಟ್ರೋದಲ್ಲಿ ಓಡಾಡಿದ ನಟ ಡಾಲಿ ಧನಂಜಯ್!

ಡಾಲಿ ಧನಂಜಯ್ ಹಾಗೂ ವೈದ್ಯೆ ಧನ್ಯತಾ ಕೆಲ ವರ್ಷಗಳಿಂದ ಸ್ನೇಹಿತರಾಗಿದ್ದರು. ಈ ಸ್ನೇಹ ಪ್ರೀತಿಗೆ ತಿರುಗಿತ್ತು. ಇದೀಗ ಈ ಪ್ರೀತಿ ಮದುವೆಯ ಅರ್ಥ ಪಡೆಯುತ್ತಿದೆ. ಇವರಿಬ್ಬರ ಪ್ರೀತಿಯನ್ನು ಎರಡು ಕುಟುಂಬದವರು ಒಪ್ಪಿದ್ದಾರೆ. ಕುಟುಂಬದ ಹಿರಿಯರು ಮಾತುಕತೆ ನಡೆಸಿದ್ದು, ಫೆಬ್ರವರಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಧನ್ಯಾತಾ ಗೈನಾಕಾಲಿಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಫೆಬ್ರವರಿ ಎರಡನೇ ವಾರ, ಅಂದರೆ ಫೆಬ್ರವರಿ 16ರಂದು ಡಾಲಿ ಧನಂಜಯ್ ಹಾಗೂ ಧನ್ಯತಾ ಮದುವೆಯಾಗುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಶೀಘ್ರದಲ್ಲೇ ಡಾಲಿ ಧನಂಜಯ್ ಮದುವೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಲಿದೆ. 2013ರಲ್ಲಿ ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಡಾಲಿ ಧನಂಜಯ್ ದೈತ್ಯ ಪ್ರತಿಭೆಯಾಗಿ ಬೆಳೆದಿದ್ದಾರೆ. ನಾಯಕ ನಟನಾಗಿ, ಚಿತ್ರ ನಿರ್ಮಾಪಕನಾಗಿಯೂ ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

ಅತ್ಯುತ್ತಮ ನಟನಿಗೆ ನೀಡುವ ಸೈಮಾ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಧನಂಜಯ್‌ಗೆ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಬಡವ ರಾಸ್ಕಲ್ ಅನ್ನೋ ಚಿತ್ರ ನಿರ್ಮಾಣ ಮಾಡುವ ಮೂಲಕವೂ ಸೈ ಎನಿಸಿಕೊಂಡಿದ್ದಾರೆ. ವಿಶೇಷ ಅಂದರೆ ತೆಲುಗು ಹಾಗೂ ತಮಿಳು ಚಿತ್ರದಲ್ಲೂ ಧನಂಜಯ್ ಕೆಲ ಪಾತ್ರಗಳಲ್ಲಿ ನಟಿಸಿದ್ದಾರೆ.

ನಟ ದರ್ಶನ್ ಜೈಲಿಗೆ ಹೋಗಿರೋದು ನಮ್ಮನೆಯವರೇ ಹೋಗಿದ್ದಾರೆಂಬ ಭಾವನೆ ಬರುತ್ತಿದೆ; ಡಾಲಿ ಧನಂಜಯ

click me!