
ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ- ಭಾಗ 2' ಸಿನಿಮಾ ನವೆಂಬರ್ 17 (17 ನವೆಂಬರ್ 2023) ರಂದು ಬಿಡುಗಡೆಗೆ ಸಜ್ಜಾಗಿದೆ. ಈ ಮೊದಲು ಬಿಡುಗಡೆಯಾಗಿದ್ದ ಸಪ್ತ ಸಾಗರದಾಚೆ ಎಲ್ಲೋ- ಭಾಗ 1' ಸಿನಿಮಾವನ್ನು ಹಲವರು ಮೆಚ್ಚಿಕೊಂಡಿದ್ದರು. ಈ ಚಿತ್ರವು ತಮಿಳು, ತೆಲುಗು ಮ ಮಲಯಾಳಂ ಹಾಗೂ ಕನ್ನಡದಲ್ಲಿ ಬಿಡುಗಡೆಯಾಗಿ ಹಲವರ ಮೆಚ್ಚುಗೆ ಗಳಿಸಿದೆ. ಅವರೆಲ್ಲರೂ 'ಸಪ್ತ ಸಾಗರದಾಚೆ ಎಲ್ಲೋ- ಭಾಗ 2' ಬಿಡುಗಡೆಗಾಗಿ ಕಾಯುತ್ತಿದ್ದಾರೆ.
'ಸಪ್ತ ಸಾಗರದಾಚೆ ಎಲ್ಲೋ- ಭಾಗ 2' ಬುಡಗಡೆಗೆ ಕಾಯುತ್ತಿದ್ದವರಿಗೆ ಸಂತೋಷದ ಸುದ್ದಿ ಸಿಕ್ಕಿದೆ. ಸಾಕಷ್ಟು ಸಾರಿ ಬಿಡುಗಡೆಯನ್ನು ಮುಂದೂಡಿದ್ದ ಈ ಚಿತ್ರದ ನಿರ್ಮಾಣ ಸಂಸ್ಥೆ 'ಪರಂವಾ' ಸ್ಟುಡಿಯೋಸ್ ಇದೀಗ ನವೆಂಬರ್ 17 (17 ನವೆಂಬರ್ 2023) ರಂದು ಬಿಡುಗಡೆಗೆ ಘೊಷಿಸಿ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಟ್ರೈಲರ್ ಸಮೇತ ಪೋಸ್ಟ್ ಮಾಡಿದೆ. ಹೀಗಾಗಿ ಇದು ಅಧಿಕೃತ ಸುದ್ದಿ ಎನ್ನಬಹುದು.
ಬಿಗ್ ಬಾಸ್‌ನಲ್ಲಿ ಇಶಾನಿ-ಮೈಕಲ್ 'ಅನ್‌ಸೀನ್ ಕಥೆಗಳು', ಏನಿದು ಲವ್ ಮಿಸ್ಟರಿ!
ರಕ್ಷಿತ್ ಶೆಟ್ಟಿ-ರುಕ್ಮಿಣಿ ವಸಂತ್ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ- ಭಾಗ 1' ಚಿತ್ರವು ಈಗಾಗಲೇ ಓಟಿಟಿಯಲ್ಲಿ ಕೂಡ ಪ್ರಸಾರ ಕಂಡಿದ್ದು ಜನಮೆಚ್ಚುಗೆ ಗಳಿಸಿದೆ. ಇದೀಗ, ಬಿಡುಗಡೆಯಾಗಿರುವ ಈ ಚಿತ್ರದ ಟ್ರೈಲರ್ ನೋಡಿದರೆ, ಕಥೆಯ ಇನ್ನೊಂದು ಆಯಾಮ ಇದರಲ್ಲಿದೆ ಎಂಬ ಊಹೆ ಮಾಡಬಹುದು. ಮುಂಬರುವ ಭಾಗದಲ್ಲಿ ಈಗಾಗಲೇ 'ಸಪ್ತ ಸಾಗರದಾಚೆ ಎಲ್ಲೋ- ಭಾಗ 1'ರಲ್ಲಿ ಆಗಿದ್ದಕ್ಕೆ ಕಾರಣವೋ ಅಥವಾ ಸಾಕ್ಷಿಯೋ ಏನೋ ಸಿಗಬಹುದು. ಆದರೆ, ಸಿನಿಮಾ ನೋಡದೇ ಊಹೆಯನ್ನು ಒಪ್ಪಿ ಮಾತನಾಡುವುದು ಕಷ್ಟವೇ.
ಡ್ರೋನ್ ವಿಷಯ ಮತ್ತೆ ಎಳೆದು ತಂದ ವಿನಯ್-ಸ್ನೇಹಿತ್, ಸಂದೇಹಗಳಿಗೆ ಬೆಚ್ಚಿಬಿದ್ರಾ ಪ್ರತಾಪ್?
ಒಟ್ಟಿನಲ್ಲಿ, ಸದ್ಯ ರಕ್ಷಿತ್ ಶೆಟ್ಟಿ ಅಭಿಮಾನಿಗಳು 'ಸಪ್ತ ಸಾಗರದಾಚೆ ಎಲ್ಲೋ- ಭಾಗ 2'ಕ್ಕೆ ಕಾಯುತ್ತಿದ್ದಾರೆ. ಅವರೆಲ್ಲರ ಆಸೆ ನವೆಂಬರ್ 17ರಂದು ಕೈಗೂಡಲಿದೆ. ಮತ್ತೆ ಚಿತ್ರದ ಬಿಡುಗಡೆಯನ್ನು ಮುಂದೂಡದೇ ಇರಲಿ ಎಂಬುದು ಅಭಿಮಾನಿಗಳ ಆಸೆ. ಇನ್ನು 15 ದಿನಗಳು ಕಳೆದ ಬಳಿಕ ಸ್ವಲ್ಪ ದಿನ ಕಳೆದರಾಯಿತು, 'ಸಪ್ತ ಸಾಗರದಾಚೆ ಎಲ್ಲೋ- ಭಾಗ 2' ಥಿಯೇಟರ್‌ಗೆ ಬರಲಿದೆ. ಕುತೂಹಲವಿರುವವರು ಹೋಗಿ ನೋಡಿ ಆನಂದಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.