'ಪತಿ ಅಜಯ್‌ ರಾವ್‌ ಜೊತೆ ಮತ್ತೆ ದಾಂಪತ್ಯ ಕಟ್ಟಿಕೊಳ್ಳೋ ಪ್ರಯತ್ನದಲ್ಲಿದ್ದೇನೆ': Actor Ajay Rao ಪತ್ನಿ ಸಪ್ನಾ!

Published : Aug 17, 2025, 05:06 PM IST
actor ajay rao wife sapna

ಸಾರಾಂಶ

Actor Ajay Rao, Sapna HN Want To Reconcile: ನಟ ಅಜಯ್‌ ರಾವ್‌ ಹಾಗೂ ಸಪ್ನಾ ದಂಪತಿ ಮನಸ್ತಾಪ ಈಗ ಕೋರ್ಟ್‌ ಮೆಟ್ಟಿಲೇರಿದೆ. ಈಗ ಸಪ್ನಾ ಅವರು ಮತ್ತೆ ಒಂದಾಗುವ ಆಶಯವನ್ನು ಹೊರಹಾಕಿದ್ದಾರೆ. 

ನಟ ಅಜಯ್‌ ರಾವ್‌ ಹಾಗೂ ಸಪ್ನಾ ದಂಪತಿ ಮಧ್ಯೆ ಮನಸ್ತಾಪ ಬಂದಿದ್ದು, ಪರಸ್ಪರ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡಿದ್ದರು. ಇನ್ನು ಸಪ್ನಾ ಅವರು ಡಿವೋರ್ಸ್‌ ಬೇಕು ಎಂದು ಕೌಟುಂಬಿಕ ಹಿಂಸೆ ಕಾರಣ ನೀಡಿ ಕೋರ್ಟ್‌ ಮೆಟ್ಟಿಲೇರಿದ್ದರು. ಈಗ ಸಪ್ನಾ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಸಪ್ನಾ ಅವರ ಪ್ರತಿಕ್ರಿಯೆ ಏನು?

ನಮಸ್ಕಾರ,  ತಾಯಿಯಾಗಿ ನನ್ನ ಮೊದಲ ಜವಾಬ್ದಾರಿ ನನ್ನ ಮಗಳ ಸುರಕ್ಷತೆ, ಗೌರವ ಮತ್ತು ಅವಳ ಭವಿಷ್ಯಕ್ಕಾಗಿ ನಾನು ಪ್ರತಿದಿನ ಧೈರ್ಯವನ್ನು ಕೂಡಿಸಿ, ನನಗೆ ತೀವ್ರವಾಗಿ ಪರೀಕ್ಷಿಸುವ ಸವಾಲುಗಳನ್ನು ಎದುರಿಸುತ್ತಿದ್ದೇನೆ.  ಪ್ರಿಯ ಸ್ನೇಹಿತರೆ ಮತ್ತು ಸಹೋದರರೆ, ಈ ಹಂತದಲ್ಲಿ ನಾನು ಮತ್ತು ನನ್ನ ಮಗಳು ನಮ್ಮ ಬದುಕನ್ನು ಪುನರ್‌ ನಿರ್ಮಿಸಿಕೊಳ್ಳಲು ಮತ್ತು ನಮ್ಮ ದಾಂಪತ್ಯ ಜೀವನವನ್ನು ಪುನಃ ನಿರ್ಮಿಸಿಕೊಳ್ಳಲು ನಿಮ್ಮ ಹಾರೈಕೆಗಳು ಮತ್ತು ಪ್ರಾರ್ಥನೆಗಳನ್ನು ನಿಮ್ಮಲಿ ಕೇಳಿಕೊಳ್ಳುತ್ತಿದೇನೆ

ಮತ್ತು ನಾನು ಅತ್ಯಂತ ಗೌರವದಿಂದ ತಿಳಿಸಲು ಬಯಸುವುದೇನೆಂದರೆ, ಈ ವಿಷಯವು ನಮ್ಮ ವೈಯಕ್ತಿಕ, ಆಳವಾದ ಭಾವನಾತ್ಮಕ ಮತ್ತು ದಾಂಪತ್ಯ ಜೀವನಕ್ಕೆ ಮಾತ್ರ ಸಂಬಂಧಿಸಿದ್ದು ಹೊರತು ಬೇರೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂದು ತಿಳಿಸಲು ಬಯಸುತೇನೆ.

ಕೃತಜ್ಞತೆಗಳೊಂದಿಗೆ, ಸಪ್ನಾ ಅಜಯ್ ರಾವ್.

ಫೋಟೋ ಡಿಲಿಟ್‌ ಮಾಡಿರೋ ಸಪ್ನಾ

ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸಪ್ನಾ ಅಜಯ್‌ ರಾವ್‌ ಎಂದು ಹೆಸರಿತ್ತು. ಅದನ್ನು ಅವರು ಸಪ್ನಾ ಎಚ್‌ ಎನ್‌ ಎಂದು ಬದಲಾಯಿಸಿಕೊಂಡಿದ್ದಾರೆ. ಇವರಿಬ್ಬರೂ ಪರಸ್ಪರ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಸಪ್ನಾ ಅವರು ಗಂಡನ ಜೊತೆಗಿರುವ ಸಾಕಷ್ಟು ಫೋಟೋಗಳನ್ನು ಡಿಲಿಟ್‌ ಕೂಡ ಮಾಡಿದ್ದರು. ಅಷ್ಟೇ ಅಲ್ಲದೆ ಕೆಲ ತಿಂಗಳುಗಳ ಹಿಂದೆ ಈ ಜೋಡಿ ನಿರೂಪಕಿ ಅನುಶ್ರೀ ಯುಟ್ಯೂಬ್‌ ಚಾನೆಲ್‌ಗೆ ಜೋಡಿ ಸಂದರ್ಶನ ನೀಡಿತ್ತು. ಆ ವಿಡಿಯೋ ಕೂಡ ಡಿಲಿಟ್‌ ಆಗಿದೆ.

ಜ್ಯೋತಿಷಿ ಅಂದು ಹೇಳಿದ್ದೇನು?

ತಪ್ಪಾದ ಮುಹೂರ್ತದಲ್ಲಿ ಮದುವೆ ಆಗಿದ್ದಕ್ಕೆ ಒಂದು ವರ್ಷದಲ್ಲಿ ಡಿವೋರ್ಸ್‌ ಆಗುವುದು ಎಂದು ಅಜಯ್‌ ರಾವ್‌ಗೆ ಜ್ಯೋತಿಷಿಯೋರ್ವರು ಹೇಳಿದ್ದರಂತೆ. ಕೃಷ್ಣಲೀಲಾ ಸಿನಿಮಾ ಮುಹೂರ್ತ ಕೂಡ ತಪ್ಪಾದ ಟೈಮ್‌ನಲ್ಲಿ ನಡೆದಿತ್ತು. ಇದಕ್ಕೂ ಮೀರಿದ ಬದುಕಿದೆ, ಕೃಷ್ಣಾರ್ಪಣಮಸ್ತು ಎಂದು ನಾನು ನಂಬುವೆ ಎಂದು ಅಜಯ್‌ ರಾವ್‌ ಅವರು ಈ ಹಿಂದೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ನಟ ಅಜಯ್‌ ರಾವ್‌ ಹೇಳಿದ್ದೇನು?

ಅಂದಹಾಗೆ ಅಜಯ್‌ ರಾವ್‌ ಕೂಡ ಸೋಶಿಯಲ್‌ ಮೀಡಿಯಾದಲ್ಲಿ, “ಇದು ಕುಟುಂಬದ ವೈಯಕ್ತಿಕ ವಿಷಯ. ಪ್ರತಿ ಕುಟುಂಬದಲ್ಲಿಯೂ ಒಂದಿಷ್ಟು ಸವಾಲುಗಳು ಬರುತ್ತವೆ, ಅದನ್ನು ನಾವು ಎದುರಿಸುತ್ತೇವೆ. ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸಿ, ನಮ್ಮ ಕುಟುಂಬದ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಹಂಚಿಕೊಳ್ಳಬೇಡಿ, ಇದು ನನ್ನ ವಿನಂತಿ. ಕುಟುಂಬವೂ ಸವಾಲುಗಳನ್ನು ಖಾಸಗಿಯಾಗಿ ಉಳಿಯುವುವಂತೆ ಸಹಕರಿಸಿ. ನಿಮ್ಮ ಮನವೊಲಿಕೆ, ಬೆಂಬಲ, ವಿವೇಕ ನಮಗೆ ಮುಖ್ಯ” ಎಂದು ಹೇಳಿದ್ದರು.

ಇವರಿಬ್ಬರು ಮದುವೆಯಾಗಿ ಹತ್ತು ವರ್ಷಗಳು ಕಳೆದಿವೆ. ಕೊಪ್ಪಳದಲ್ಲಿ ಬಹಳ ಸರಳವಾಗಿ ಲವ್‌ ಮ್ಯಾರೇಜ್‌ ಆಗಿದ್ದ ಈ ಜೋಡಿಗೆ ಆರು ವರ್ಷದ ಮಗಳಿದ್ದಾರೆ. ಕಳೆದ ವರ್ಷ ಅಜಯ್‌ ರಾವ್‌, ಸಪ್ನಾ ಅವರು ಹೊಸ ಮನೆಗೆ ಕಾಲಿಟ್ಟಿದ್ದರು. ಸ್ಯಾಂಡಲ್‌ವುಡ್‌ ತಾರೆಯರು ಅಜಯ್‌ ದಂಪತಿಗೆ ಶುಭ ಹಾರೈಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
ಕರ್ನಾಟಕ ನನ್ನ ಅಣ್ಣನ ಮನೆ.. 'ಅಖಂಡ 2'ನಲ್ಲಿ ಬಾಲಯ್ಯ ಡೈಲಾಗ್‌ಗೆ ಶಿಳ್ಳೆ-ಚಪ್ಪಾಳೆ ಜೈಜೈ ಘೋಷ!