ಕಾನೂನು ವಿವಿ ಯುವ ಜನೋತ್ಸವಕ್ಕೆ ಚೇತನ್‌ ಅಹಿಂಸಾ ಅತಿಥಿ, ABVP ಕಿಡಿಕಿಡಿ

Published : Jun 14, 2023, 11:59 AM ISTUpdated : Jun 14, 2023, 12:55 PM IST
ಕಾನೂನು ವಿವಿ ಯುವ ಜನೋತ್ಸವಕ್ಕೆ ಚೇತನ್‌ ಅಹಿಂಸಾ ಅತಿಥಿ, ABVP ಕಿಡಿಕಿಡಿ

ಸಾರಾಂಶ

ಕಾನೂನು ವಿವಿ ಯುವ ಜನೋತ್ಸವಕ್ಕೆ ಚೇತನ್‌ ಅಹಿಂಸಾ ಅತಿಥಿಯಾಗಿದ್ದಾರೆ. ಆದರೆ ಚೇತನ್ ಅತಿಥಿಯಾಗಬಾರದು ಎಂದು ಎಬಿವಿಪಿ ಆಕ್ರೋಶ ಹೊರಹಾಕಿದೆ. 

ನಟ ಚೇತನ್ ಅಹಿಂಸಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೆ ರಾಜಕೀಯ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಿದ್ದ ಚೇತನ್, ಸಿದ್ಧರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಗದ್ದುಗೆ ಸಮರದ ಬಗ್ಗೆ ಕಿಡಿಕಾರಿದ್ದರು. ರಾಜಕೀಯ ಮಾತ್ರವಲ್ಲದೆ ಯಾವುದೇ ವಿಚಾರಗಳ ಬಗ್ಗೆಯಾದರೂ ಚೇತನ್ ಪ್ರತಿಕ್ರಿಯೆ ನೀಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಚೇತನ್ ಎಲ್ಲಾ ಅಪ್‌ಡೇಟ್ ನೀಡುತ್ತಿರುತ್ತಾರೆ. ಇದೀಗ ಚೇತನ್ ವಿರುದ್ಧ ಎಬಿವಿಪಿ ಕಿಡಿ ಕಾರುತ್ತಿದೆ. 

ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾಲಯದ ಯುವಜನೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ನಟ ಚೇತನ್ ಅಹಿಂಸಾಗೆ ಆಹ್ವಾನ ಮಾಡಲಾಗಿದೆ. ಚೇತನ್ ಅತಿಥಿ ಎಂದು ಘೋಷಣೆ ಮಾಡುತ್ತಿದ್ದಂತೆ  ಕಾನೂನು ವಿವಿ ಯುವ ಜನನೋತ್ಸವ ವಿವಾದದ ಸುಳಿಯಲ್ಲಿ ಸಿಲುಕಿದೆ. ನಟ ಚೇತನ್ ಅಹಿಂಸಾ ಅತಿಥಿಯಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.  ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿರೋಧ ವ್ಯಕ್ತಪಡಿಸಿದ್ದು ಚೇತನ್ ಅವರು ಅತಿಥಿಯಾವುದು ಬೇಡ ಎಂದು ಮನವಿ ಉಪಕುಲಪತಿಗಳಿಗೆ  ಮಾಡಿದ್ದಾರೆ.

ಈ ಹಿಂದೆ ಲಿಂಗಾಯತರು, ಮಠಾಧೀಶರು ಸ್ವಾರ್ಥ ಜಾತಿ ರಾಜಕಾರಣಕ್ಕೆ ಒತ್ತಾಯಿಸಿದ್ದರು: ಚೇತನ್ ಅಹಿಂಸಾ ಕಿಡಿ

ಜೂನ್ 17ರಂದು ಹುಬ್ಬಳ್ಳಿ  ಕಾನೂನು ವಿಶ್ವವಿದ್ಯಾಲಯದ ಯುವಜನೋತ್ಸವ  ಕಾರ್ಯಕ್ರಮ ನಡೆಯಲಿದೆ. ಚೇತನ್ ಅವರನ್ನು ವಿರೋಧಿಸಿ ಎಬಿವಿಪಿ ಕಾನೂನು ವಿ.ವಿ ಉಪಕುಲಪತಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕುಲಸಚಿವ ಪ್ರೋ ಡಾ.ಬಸವರಾಜ ಅವರಿಗೆ ABVP ಮನವಿ ಸಲ್ಲಿಸಲಿದೆ. ಚೇತನ್ ಅಹಿಂಸಾ ಅವರನ್ನು ಕಾರ್ಯಕ್ರಮದ‌ ಮುಖ್ಯ ಅತಿಥಿಯಾಗಿ ಆಹ್ವಾನಿಸದಂತೆ ಒತ್ತಾಯ ಮಾಡಲಾಗಿದೆ.

'ವಿಧ್ಯಾರ್ಥಿಗಳಿಗೆ ಆದರ್ಶವಾಗಿರುವವ ವ್ಯಕ್ತಿಗಳನ್ನ ಕರೆಯಿಸಬೇಕು. ಅದರ ಬದಲಾಗಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವವರನ್ನ ಕರೆಸಬಾರದು' ಎಂದು ಒತ್ತಾಯಿಸಿದ್ದಾರೆ. ಕೂಡಲೆ ಮುಖ್ಯ ಅಥಿತಿಗಳ ಲಿಸ್ಟನಿಂದ ಚೇತನ್ ಅವರನ್ನು ಕೈ ಬಿಡಬೇಕು. ಇಲ್ಲದಿದ್ರೆ ಜೂನ್ 16 ರಿಂದ ಗೋ ಬ್ಯಾಕ್ ಚೇತನ‌್ ಎಂದು ಪ್ರತಿಭಟನೆ ಮಾಡಬೇಕಾಗುತ್ತೆ' ಎಂದು ಎಬಿವಿಪಿ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?